ಕ್ರೀಡೆ

ಭ್ರಷ್ಟರಿಗೆ ಮತ್ತೆ ಕ್ರೀಡಾ ಅಧಿಕಾರ

Published On :

ನವದೆಹಲಿ: ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭ್ರಷ್ಟಚಾರದಲ್ಲಿ ಭಾಗಿಯಾಗಿದ್ದ ಅಧಿಕಾರಿಯಾದ ರಾಜ್‌ಕುಮಾರ್ ಸಾಕೇತಿ ಅವರನ್ನು ಲೂಸೋಫೋನಿಯಾ ಕ್ರೀಡಾಕೂಟಕ್ಕೆ ಸಲಹೆಗಾರರನ್ನಾಗಿ ಕೇರಳ ಸರ್ಕಾರ ನೇಮಿಸಿದೆ.
ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಜಂಟಿ ಪ್ರಧಾನ ನಿರ್ದೇಶಕರಾಗಿದ್ದ ಸಾಕೇತಿ, ಈ ಕ್ರೀಡಾಕೂಟದಲ್ಲಿ ತಮ್ಮ ಅಧಿಕಾರ ದುರುಪಯೋಗ ಮಾಡಿಕೊಂಡಿದ್ದರು. ಹಾಗೆಯೇ ಈ ಕ್ರೀಡಾಕೂಟದ ಅಧ್ಯಕ್ಷರಾಗಿದ್ದ ಸುರೇಶ್ ಕಲ್ಮಾಡಿಯವರ ಆಪ್ತರಲ್ಲಿ ಒಬ್ಬರಾಗಿದ್ದು, ಇವರ ಜತೆಗೆ ಕಾಮನ್‌ವೆಲ್ತ್‌ನ ಮತ್ತೊಬ್ಬ ಅಧಿಕಾರಿಯಾದ ವಿ.ವಿ ಸಕ್ಸೇನಾ ಅವರನ್ನು ಕೇರಳ ಸರ್ಕಾರ ಸಲಹೆಗಾರರನ್ನಾಗಿ ಆಯ್ಕೆ ಮಾಡಿದೆ.
ಇದೆವೇಳೆ ಕೇರಳ ಸರ್ಕಾರದ ಯುವಜನ ಹಾಗೂ ಕ್ರೀಡಾ ನಿರ್ದೇಶನಾಲಯಗಳಲ್ಲಿ ಸೇವೆಸಲ್ಲಿಸಿರುವ ರೊಕ್ ದೈಸ್ ಹಾಗೂ ಡಾ.ಸೂಸನ್ ಡಿಸೋಜಾ, ಅವರಿಗೆ ಈ ಹುದ್ದೆ ಅಲಂಕರಿಸುವ ಅರ್ಹತೆ ಇದ್ದರೂ ಇವರನ್ನು ಕಡೆಗಣಿಸಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.