

ಮುಂಬೈ: ಐಪಿಎಲ್‌ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮುಖ್ಯ ಮಾರ್ಗದರ್ಶಕರಾಗಿದ್ದ ಅನಿಲ್ ಕುಂಬ್ಳೆ, ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದು ಐಪಿಎಲ್‌ನ ಆರನೇ ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್ ತಂಡದ ಮಾರ್ಗದರ್ಶಕ ಹುದ್ದೆಯನ್ನು ಅಲಂಕರಿಸಲಿದ್ದಾರೆ.
'ರಿಲಾಯನ್ಸ್ ಸಮೂಹದೊಂದಿಗೆ ನಾನು ಚರ್ಚೆ ನಡೆಸಿದ್ದೇನೆ. ದೇಶದಲ್ಲಿ ಕ್ರೀಡಾಭಿವೃದ್ಧಿಯ ಬಗ್ಗೆ ರಿಲಯನ್ಸ್ ಸಂಸ್ಥೆಗಿರುವ ದೂರದೃಷ್ಟಿ ಇಷ್ಟವಾಯಿತು. ತಾವು ಸ್ಥಾಪಿಸಿರುವ ಟೆನ್‌ವಿಕ್ ಕ್ರೀಡಾ ಸಂಸ್ಥೆಯ ಆಶೋತ್ತರಗಳೂ ಇದನ್ನೇ ಹೋಲುತ್ತವೆ. ರಾಷ್ಟ್ರದಲ್ಲಿನ ಯುವ ಜನಾಂಗವನ್ನು ಕ್ರೀಡಾಕ್ಷೇತ್ರಕ್ಕೆ ಸೆಳೆಯುವ ನನ್ನ ಆಶೋತ್ತರಗಳನ್ನೇ ರಿಲಯನ್ಸ್ ಸಂಸ್ಥೆಯೂ ಹೊಂದಿರುವುದರಿಂದ ನಾನು ಮುಂಬೈ ಇಂಡಿಯನ್ಸ್ ಸಂಸ್ಥೆಯ ಮಾರ್ಗದರ್ಶಕನಾಗಲು ಒಪ್ಪಿಕೊಂಡೆ ಎಂದಿದ್ದಾರೆ.