ಮೊಹಾಲಿ: ಭಾರತ ತಂಡದ ಪ್ರಮುಖ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಇತ್ತೀಚಿನ ದಿನಗಳಲ್ಲಿ ತಮ್ಮ ಫಾರ್ಮ್ ಕುಸಿತಕ್ಕೆ ಬೇಸರ ವ್ಯಕ್ತ ಪಡಿಸಿದ್ದಾರೆ. ಪ್ರತಿಯೊಬ್ಬ ಕ್ರಿಕೆಟಿಗರ ಜೀವನದಲ್ಲೂ ಈ ಕಾಲಘಟ್ಟ ಎದುರಾಗಲಿದ್ದು, ಶಾಂತ ಹಾಗೂ ತಾಳ್ಮೆಯಿಂದ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ ಎಂದು ಕೊಹ್ಲಿ ತಿಳಿಸಿದರು. ನನ್ನ ಫಾರ್ಮ್ ಬಗ್ಗೆ ಇತರರಿಗಿರುವ ಭಾವನೆ ನನ್ನಲಿಲ್ಲ. ಯಾವುದೇ ಆಟಗಾರ ನಿರಂತರವಾಗಿ 16 ತಿಂಗಳುಗಳ ಕಾಲ ಸತತವಾಗಿ ರನ್‌ಗಳಿಸುವುದು ಸಾಧ್ಯವಿಲ್ಲ. ಪ್ರತಿಯೊಬ್ಬರು 4-5 ಪಂದ್ಯಗಳಲ್ಲಿ ರನ್ ಕೊರತೆ ಎದುರಿಸುತ್ತಾರೆ ಎಂದು ಕೊಹ್ಲಿ ಅಭಿಪ್ರಾಯ ಪಟ್ಟರು. ನನ್ನ ಫಾರ್ಮ್ ಕುಸಿತ ನನಗೆ ಬೇಸರ ಉಂಟಾಗಿದ್ದು, ನಾನು ಹೆಚ್ಚಿನ ತಪ್ಪುಗಳಿಂದಾಗಿ ವಿಕೆಟ್ ನೀಡುತ್ತಿರಲಿಲ್ಲ. ಕಳೆದ ಕೆಲ ಪಂದ್ಯಗಳಲ್ಲಿ ಉತ್ತಮ ಬೌಲಿಂಗ್‌ನಿಂದ ಔಟಾಗಿದ್ದು, ಚಿಕ್ಕ ತಪ್ಪುಗಳಿಂದ ವಿಕೆಟ್ ಕೈಚೆಲ್ಲಿದ್ದೇನೆ. ಹೀಗಾಗಿ ಸದ್ಯ ನಾನು ತಾಳ್ಮೆಯಿಂದ ಆಡುವ ಅವಶ್ಯಕತೆ ಇದ್ದು ಮತ್ತೇ ಫಾರ್ಮ್‌ಗೆ ಮರಳಲಿದ್ದೇನೆ ಎಂದು ತಿಳಿಸಿದರು.