ರಾಂಚಿ: ರೂಪಿಂದರ್ ಸಿಂಗ್ ಬಾರಿಸಿದ ಎರಡು ಗೋಲುಗಳ ಸಹಾಯದಿಂದ ಡೆಲ್ಲಿ ವೇವ್ರೈಡರ್ಸ್ ತಂಡ, ಬುಧವಾರ ನಡೆದ ರಾಂಚಿ ರೈನೋಸ್ ತಂಡದ ವಿರುದ್ಧ 5-4 ಗೋಲುಗಳ ಅಂತರದಲ್ಲಿ ರೋಮಾಂಚನಕಾರಿ ಜಯ ದಾಖಲಿಸಿತು. ಡೆಲ್ಲಿ ತಂಡದ ಪರವಾಗಿ ರೂಪಿಂದರ್ ಸಿಂಗ್ (ಎರಡು ಗೋಲು), ಆಕಾಶ್ದೀಪ್ ಸಿಂಗ್, ಗುರ್ವಿಂದರ್ ಸಿಂಗ್ ಚಾಂಡಿ ಹಾಗೂ ಟಿಮ್ ಜೆನ್ನಿಸ್ಕೆನ್ಸ್ ಗೋಲು ಗಳಿಸಿದರೆ, ರಾಂಚಿ ತಂಡದ ಪರವಾಗಿ, ಆಶ್ಲೆ ಜಾಕ್ಸನ್ (ಎರಡು ಗೋಲು), ಜಸ್ಟಿನ್ ರೋಸ್ ಹಾಗೂ ಮನದೀಪ್ ಸಿಂಗ್ ಗೋಲು ದಾಖಲಿಸಿದರು.