ಅಜರೆಂಕಾ ವಿಕ್ಟರಿ

ಅಜರೆಂಕಾ ವಿಕ್ಟರಿ
Updated on: 

ಮೆಲ್ಬರ್ನ್: ವಿಕ್ಟೋರಿಯಾ ಅಜರೆಂಕಾ ಅವರು ಆಸ್ಟ್ರೇಲಿಯಾ ಓಪನ್ ಟೆನಿಸ್ ಚಾಂಪಿಯನ್‌ಷಿಪ್‌ನ ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. ಇದರೊಂದಿಗೆ ಅಜರೆಂಕಾ ಸತತ ಎರಡನೇ ಬಾರಿಗೆ  ಪ್ರತಿಷ್ಠಿತ ಪ್ರಶಸ್ತಿ ಮುಡಿಗೇರಿಸಿಕೊಂಡರಲ್ಲದೇ, ಮಹಿಳೆಯರ ವಿಭಾಗದಲ್ಲಿ ವಿಶ್ವದ ನಂ.1 ಸ್ಥಾನ ಉಳಿಸಿಕೊಂಡಿದ್ದಾರೆ.
ಫೈನಲ್ ಪಂದ್ಯದಲ್ಲಿ ಎದುರಾಳಿ ಚೀನಾದ ಲೀ ನಾ ಅವರು ಗಾಯಗೊಂಡಿದ್ದರಿಂದ ಅಜರೆಂಕಾಗೆ ಜಯ ಸಾಧಿಸಲು ಸುಲಭವಾಯಿತು. ಅಜರೆಂಕಾ ಅವರು ಲೀ ನಾ ವಿರುದ್ಧ 4-6, 6-4, 6-3 ಸೆಟ್‌ಗಳ ಅಂತರದಿಂದ ಜಯ ಸಾಧಿಸಿದರು. ತಮ್ಮ ಎಡಗಾಲಿನ ಹಿಮ್ಮಡಿ ನೋವಿನಿಂದ ಬಳಲಿದ ಲೀ ಪಂದ್ಯದಲ್ಲಿ ಎರಡು ಬಾರಿ ವೈದ್ಯಕೀಯ ಸೇವೆ ಪಡೆದರು.
ಪಂದ್ಯದ ಮಹತ್ವದ ಸಮಯದಲ್ಲೇ ಗಾಯದ ಸಮಸ್ಯೆ ಕಾಡಿದ್ದು ಲೀ ನಾಗೆ ಅಡ್ಡಿಯಾಯಿತು. ಎರಡು ಗಂಟೆ 40 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಮೊದಲ ಸೆಟ್‌ನಲ್ಲಿ ಕೈಚೆಲ್ಲಿದ್ದ 23 ವರ್ಷದ ಅಜರೆಂಕಾ ತಮ್ಮ ಎರಡನೇ ಗ್ರಾನ್ ಸ್ಲ್ಯಾಮ್ ಪ್ರಶಸ್ತಿಗೆ ಪಾತ್ರರಾದರು.
ಹಿಮ್ಮಡಿ ನೋವು ತೀವ್ರಗೊಂಡಿದ್ದು ಲೀನಾ ಎರಡನೇ ಮತ್ತು ನಿರ್ಣಾಯಕ ಸೆಟ್‌ನಲ್ಲಿ ಕೈಚೆಲ್ಲಲು ಕಾರಣವಾಯಿತು. ಪರಿಸ್ಥಿತಿಯನ್ನು ಸೂಕ್ತ ರೀತಿಯಲ್ಲಿ ಬಳಸಿಕೊಂಡ ಅಜರೆಂಕಾ ಅವರು ಲೀ ನಾಗೆ ಗೆಲ್ಲಲು ಅವಕಾಶ ನೀಡಲಿಲ್ಲ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com