ದುಬೈ: ಇದೇ ತಿಂಗಳ 31ರಿಂದ ಭಾರತದಲ್ಲಿ ಆರಂಭಗೊಳ್ಳಲಿರುವ ಮಹಿಳಾ ವಿಶ್ವಕಪ್‌ನ ಲೀಗ್ ಹಂತದ ಪಂದ್ಯಗಳಿಗಾಗಿ ಅಂಪೈರ್‌ಗಳ ಹಾಗೂ ಅಧಿಕಾರಿಗಳ ಪಟ್ಟಿಯನ್ನು ಐಸಿಸಿ ಶನಿವಾರ ಬಿಡುಗಡೆಗೊಳಿಸಿದೆ. 13 ಮಂದಿಯ ಅಂಪೈರ್‌ಗಳ ಪಟ್ಟಿಯಲ್ಲಿ ನ್ಯೂಜಿಲೆಂಡ್‌ನ ಕ್ಯಾಥಿ ಕ್ರಾಸ್ ಅವರು ಏಕೈಕ ಮಹಿಳಾ ಅಂಪೈರ್ ಆಗಿ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.
ಪಟ್ಟಿ: ಕ್ಯಾಥಿ ಕ್ರಾಸ್, ಗ್ರೆಗೋರಿ ಬ್ರಾತ್‌ವೇಯ್ಟ್, ವಿನೀತ್ ಕುಲಕರ್ಣಿ, ರವಿ ಸುಂದರಮ್, ಸಿ. ಶಾಂಬುದ್ದೀನ್, ರುಚಿರಾ ಪಳ್ಳಿಯಾಗುರು, ಅಹ್ಸಾನ್ ರಾಜಾ, ಶಾನ್ ಜಾರ್ಜ್, ಇಯಾನ್ ರಾಮೇಜ್, ಮಾರ್ಕ್ ಹಾತ್ರೋನ್, ಶಾಹುಲ್ ಹಮೀದ್, ಬುದ್ಧಿ ಪ್ರಧಾನ್ ಹಾಗೂ ಸಾರಿಕಾ ಪ್ರಸಾದ್. ಪಂದ್ಯಾವಳಿಯ ಮೊದಲ ದಿನ ಸಿ. ಶಾಬುದ್ದೀನ್ ಅವರು ಅಂಪೈರ್ ಮಾಡಲಿದ್ದಾರೆ. ಆದರೆ, ನಂತರ ಅವರು ನ್ಯೂಜಿಲೆಂಡ್-ಇಂಗ್ಲೆಂಡ್ ನಡುವಿನ (ಪುರುಷರ ತಂಡಗಳು) ಏಕದಿನ ಸರಣಿಯಲ್ಲಿ ಅಂಪೈರಿಂಗ್ ಮಾಡಬೇಕಿರುವುದರಿಂದ ಅವರ ಜಾಗದಲ್ಲಿ ಭಾರತದ ರವಿ ಸುಂದರಂ ಅವರನ್ನು ನೇಮಿಸಲಾಗಿದೆ. ಜ. 28ರಿಂದ ಜ. 30ರವರೆಗೂ ಮುಂಬೈ ಹಾಗೂ ಕಟಕ್‌ನಲ್ಲಿ ಅಭ್ಯಾಸ ಪಂದ್ಯಗಳು ನಡೆಯಲಿವೆ.