ರಹಾನೆ ಮತ್ತೆ ಫಾರ್ಮ್‌ಗೆ ಬರುತ್ತಾರೆ: ದ್ರಾವಿಡ್

Updated on: 

ಮುಂಬೈ: ಫಾರ್ಮ್ ಇಲ್ಲದೇ ಬಳಲುತ್ತಿರುವ ಟೀಂ ಇಂಡಿಯಾದ ಆರಂಭಿಕ ಆಟಗಾರ ಅಜಿಂಕ್ಯ ರಹಾನೆ ಅವರು ಶೀಘ್ರದಲ್ಲೇ ಫಾರ್ಮ್ ಮರಳಲಿದ್ದಾರೆ ಎಂದು ಮಾಜಿ ಕ್ರಿಕೆಟಿಗ ರಾಹುಲ್ ದ್ರಾವಿಡ್ ಹೇಳಿದ್ದಾರೆ.
ಇತ್ತೀಚೆಗೆ ನಡೆದ ಇಂಗ್ಲೆಂಡ್ ವಿರುದ್ಧ ಏಕದಿನ ಸರಣಿಯಲ್ಲಿ ಸತತ 4 ಪಂದ್ಯಗಳಲ್ಲಿ ರಹಾನೆ ಅವರು ತಂಡಕ್ಕೆ ಉತ್ತಮ ಆರಂಭ ಒದಗಿಸಿಕೊಡುವಲ್ಲಿ ವಿಫಲರಾಗಿದ್ದರು.
ಈ ಹಿನ್ನೆಲೆಯಲ್ಲಿ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ರಾಹುಲ್ ದ್ರಾವಿಡ್, 'ಫಾರ್ಮ್‌ನಲ್ಲಿ ಇಲ್ಲದಿದ್ದರೂ ಅಜಿಂಕ್ಯ ರಹಾನೆ ಅವರು ಕೆಲವೊಂದು ಉತ್ತಮ ಹೊಡೆತಗಳನ್ನು ಬಾರಿಸಿದ್ದರು. ಒತ್ತಡದಿಂದಾಗಿ ಅವರ ಆಟ ಮೊನಚು ಕಳೆದುಕೊಂಡಿರಬಹುದು. ಅವರಲ್ಲಿ ಪ್ರತಿಭೆಯಿದೆ. ಶೀಘ್ರದಲ್ಲೇ ಅವರು ಮತ್ತೆ ಫಾರ್ಮ್ ಮರಳುತ್ತಾರೆ' ಎಂದು ತಿಳಿಸಿದರು.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ್ದ ಟೀಂ ಇಂಡಿಯಾ ನಾಯಕ ಧೋನಿ ಕೂಡ, ರಹಾನೆ ಅವರು ಫಾರ್ಮ್‌ನಲ್ಲಿ ಇಲ್ಲದಿರುವುದನ್ನು ಒಪ್ಪಿಕೊಂಡಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com