

ಮುಂಬೈ: ನಲವತ್ತನೇ ಬಾರಿಗೆ ರಣಜಿ ಕಪ್ ಗೆದ್ದಿರುವ ಮುಂಬೈ ತಂಡವನ್ನು ಸಚಿನ್ ತೆಂಡೂಲ್ಕರ್ ಮನಸಾರೆ ಶ್ಲಾಘಿಸಿದರು.
'ಆಟಗಾರರ ಒಟ್ಟಾರೆ ಪರಿಶ್ರಮವೇ ಕಾರಣ ಹಾಗೂ ಅಗರ್ಕರ್ ಅವರು ತಂಡವನ್ನು ಉತ್ತಮವಾಗಿ ಮುನ್ನಡೆಸಿದ್ದರ ಫಲವೇ ತಂಡ ಜಯ ಕಾಣಲು ಸಾಧ್ಯವಾಯಿತು' ಎಂದು ಅವರು ಹೇಳಿದರು.
ಅಂದಹಾಗೆ, ರಣಜಿ ಗೆದ್ದ ಮುಂಬೈ ತಂಡದಲ್ಲಿ ಸಚಿನ್ ಕೂಡಾ ಭಾಗಿಯಾಗಿರುವುದು ಇದು ಐದನೇ ಬಾರಿ. ಸಚಿನ್ ತಂಡದಲ್ಲಿದ್ದಾಗ ಒಟ್ಟು ಆರು ಬಾರಿ ಮುಂಬೈ ತಂಡ, ಫೈನಲ್ಗೆ ಕಾಲಿಟ್ಟಿತ್ತು.