ಸರ್ಫಿಂಗ್ ರಷ್ಯಾ

ವಿಶ್ವ ಕ್ರೀಡೆಯಲ್ಲಿ ರಷ್ಯಾ ಎಂದೆಂದಿಗೂ ತ್ರಿವಿಕ್ರಮ. ಇದೀಗ ಆ ದೇಶ ಸರ್ಫಿಂಗ್‌ನಲ್ಲೂ ಸುನಾಮಿ ಎಬ್ಬಿಸಲು ರೆಡಿಯಾಗಿದೆ.
ಮುಖ್ಯವಾಗಿ ಸರ್ಫಿಂಗ್ ಪಾಶ್ಚಿಮಾತ್ಯರಿಂದಲೇ ಜಗಜ್ಜಾಹೀರಾದ ಕ್ರೀಡೆ. ಇದರ ಮೂಲ ಹೆಸರು 'ವಾಟರ್ ಸರ್ಫೇಸಿಂಗ್ ಸ್ಪೋರ್ಟ್'. ಮುಖ್ಯವಾಗಿ, ಸಮುದ್ರದ ತೀರಗಳಲ್ಲಿ ಅಲೆಗಳ ಜೊತೆಯಲ್ಲೇ ಆಡುವಂಥ ಕ್ರೀಡೆಯಿದು. ಅದರಲ್ಲೂ ಅಲೆಗಳ ಎದುರಿಗೇ ನುಗ್ಗುವ ಈ ಕ್ರೀಡೆ ನೋಡುಗರಲ್ಲಿ ಒಂದು ಥ್ರಿಲ್ ಹುಟ್ಟಿಸುವುದಷ್ಟೇ ಅಲ್ಲ, ಸ್ವಲ್ಪ ಯಾಮಾರಿದರೂ ಕ್ರೀಡಾಳುಗಳನ್ನು ಜಲಸಮಾಧಿ ಮಾಡಿಬಿಡುತ್ತದೆ.
ಇಂಥ ಕಠಿಣ ಸರ್ಫಿಂಗ್‌ಗೆ ರಷ್ಯಾ, ಗ್ಲ್ಯಾಮರಸ್ ಹುಡುಗಿಯರನ್ನು ನೀರಿಗಿಳಿಸುತ್ತಿದೆ. ಅಲ್ಲಿನ ಸೋಚಿ, ಕಮ್ಚಕ್ತ ಪೆನಿಂಸುಲಾ ಹಾಗೂ ವ್ಲಾಡಿವೊಸ್ಕಿ ತೀರಪ್ರದೇಶಗಳು ಈ ಕ್ರೀಡೆಗೆ ಹೇಳಿಮಾಡಿಸಿದ ಸ್ಥಳಗಳು. ಅದರಲ್ಲೂ, ಕಮ್ಚಕ್ತ ಪೆನಿಂಸುಲಾ ಸುಮಾರು 1,250 ಕಿ.ಮೀ. ಉದ್ದದ ವಿಶಾಲ ಸಾಗರ ತೀರ. ಇದು ರಷ್ಯಾದ ಪೂರ್ವಭಾಗದಲ್ಲಿದೆ. ಓಖೋಷ್ತ್ ಸಮುದ್ರ, ಪೆಸಿಫಿಕ್ ಸಾಗರ ಹಾಗೂ ಬೇರಿಂಗ್ ಸಮುದ್ರಗಳನ್ನೊಳಗೊಂಡಂತೆ ರೂಪುಗೊಂಡಿರುವ ಈ ಸಾಗರತೀರ ಜ್ವಾಲಾಮುಖಿಗಳ ತವರು. ಆದರೆ, ಹಾಗಂತ ಭಯಪಡುವ ಹಾಗೇನಿಲ್ಲ. ಇಲ್ಲಿ ಸರ್ಫಿಂಗ್ ಕ್ರೀಡಾಭಿವೃದ್ಧಿ ಕೇಂದ್ರವನ್ನು ಅಲ್ಲಿನ ಸರ್ಕಾರ ಸ್ಥಾಪಿಸಿದೆ. ಆಸಕ್ತರಿಗೆ ಅಲ್ಲಿ ಸರಿಯಾದ ಮಾರ್ಗದರ್ಶನ, ತರಬೇತಿಗಳ ಉಸ್ತುವಾರಿಯನ್ನು ಈ ಕೇಂದ್ರ ವಹಿಸಿಕೊಂಡಿದೆ. ಆದರೆ, ಸರ್ಕಾರ ಇಷ್ಟು ಮಾಡಿ ಸುಮ್ಮನೆ ಕೂತಿಲ್ಲ. ರಷ್ಯಾದಲ್ಲಿ ಇನ್ನೂ ಸಾಕಷ್ಟು ವಿಶಾಲ ಸಾಗರತೀರಗಳಿದ್ದು, ಅವೆಲ್ಲವನ್ನೂ ಸರ್ಫಿಂಗ್ ಕೇಂದ್ರಗಳನ್ನಾಗಿ ಪರಿವರ್ತಿಸುವ ಉದ್ದೇಶ ಹೊಂದಿದೆ.
ವಿದ್ಯಾರ್ಥಿಗಳಿಗೆ ತರಗತಿ
ಈ ಕ್ರೀಡೆಯ ಬೆಳವಣಿಗೆಗೆ ಸಾಕಷ್ಟು ಪ್ರಯತ್ನಿಸುತ್ತಿರುವ ಸರ್ಕಾರ, ಈಗಾಗಾಲೇ ಸ್ಥಾಪನೆಗೊಂಡಿರುವ ರಷ್ಯಾ ಸರ್ಫಿಂಗ್ ಸಂಸ್ಥೆಗೆ ಸಂಪೂರ್ಣ ಸಹಕಾರ ನೀಡುತ್ತಿದೆ. ಅಲ್ಲದೆ, ಅಂತಾರಾಷ್ಟ್ರೀಯ ಸರ್ಫಿಂಗ್ ಸಂಸ್ಥೆ ಹಾಗೂ ಅಮೆರಿಕ ಸರ್ಫಿಂಗ್ ಸಂಸ್ಥೆಯ ಸಹಯೋಗವೂ ರಷ್ಯಾಕ್ಕೆ ಸಿಕ್ಕಿದೆ. ವಿದ್ಯಾರ್ಥಿಗಳಿಗೆ ಸರ್ಫಿಂಗ್ ಹುಚ್ಚು ಹಿಡಿಸುವ ಕೆಲಸವನ್ನು ರಷ್ಯಾ ಮಾಡತೊಡಗಿದೆ. ಈ ಯೋಜನೆ ಅಮೆರಿಕದಲ್ಲೂ ಇದೆ. ವಿದ್ಯಾರ್ಥಿಗಳಿಗೆ ಸರ್ಫಿಂಗ್ ತರಗತಿ, ಕಾರ್ಯಾಗಾರ ಈ ಯೋಜನೆಯ ಪ್ರಮುಖ ಅಂಶ. ಸಮುದ್ರ ಇರುವುದು ಮೀನುಗಾರಿಕೆಗಲ್ಲ, ಸರ್ಫಿಂಗಿಗೆ ಅಂತ ಈಗಲೇ ಯಾರೋ ಅಲ್ಲಿ ಹೇಳುತ್ತಿದ್ದಾನಂತೆ!
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


