ಗೌಡರ ಗುದ್ದು

ಈತನ ಹೆಸರು ವಿನಯ. ಹಾಗಂತ ಕರಾಟೆಯಲ್ಲಿ ಎದುರಾಳಿಯ ವಿರುದ್ಧ ಈತನೇನು ವಿನಯತನ ತೋರುವುದಿಲ್ಲ. ಎದುರಾಳಿ ಸಿಕ್ಕರೆ ಸಾಕು, ವೈವಿಧ್ಯ ಪಂಚ್ಗಳ ಪ್ರಯೋಗ. ವಿನಯ ಎಸ್. ಗೌಡನಿಗೆ ಕರಾಟೆ ಚಿಕ್ಕ ವಯಸ್ಸಿನಲ್ಲೇ ಕರತಲಾಮಲಕ.
ಆಸಕ್ತಿ ಅರಳಿತು...
ಚಿಕ್ಕಂದಿನಿಂದಲೇ ಕಂಪ್ಯೂಟರ್ ಬ್ರೌಸಿಂಗ್ ಹುಚ್ಚು ಬೆಳೆಸಿಕೊಂಡ ವಿನಯ, ಫೈಟಿಂಗ್ ದೃಶ್ಯಗಳನ್ನು ವೀಕ್ಷಿಸುತ್ತಿದ್ದ. ಒಂದು ದಿನ ಕರಾಟೆಯ ವಿಶೇಷ ಪಂಚಿಂಗ್ಗಳನ್ನು ಗಮನಿಸಿದ್ದೇ ತಡ ನೇರವಾಗಿ ಮನೆಗೆ ಬಂದು ಅಪ್ಪ, ಅಮ್ಮನಲ್ಲಿ ಕರಾಟೆ ಕಲಿಯಬೇಕೆಂದು ಹಠ ಹಿಡಿದ. ಮಗನ ಆಸಕ್ತಿ ನೋಡಿ ಚಕಿತರಾದ ಪೋಷಕರು ಮೈಸೂರಿನ ಎಸ್. ಸುನೀಲ್ಕುಮಾರ್ ಸಾರಥ್ಯದ ಓಕಿನವ ಶೋರಿನ್ ಕರಾಟೆ ಶಾಲೆಗೆ ಸೇರಿಸಿದರು.
10ನೇ ವಯಸ್ಸಿನವನಿದ್ದಾಗಲೇ ಕರಾಟೆ ಶಾಲೆಗೆ ಸೇರಿದ ವಿನಯ ಮೂರು ವರ್ಷ ಪೂರೈಸಿದ್ದಾನೆ. ಕಳೆದ ಮೂರು ವರ್ಷಗಳಿಂದಲೂ ಕರಾಟೆಯಲ್ಲಿನ ವಿವಿಧ ಪಟ್ಟುಗಳನ್ನು ಕಲಿತು ಹಲವು ಕಡೆ ನಡೆದ ಕರಾಟೆ ಸ್ಪರ್ಧೆಯಲ್ಲಿ ಭಾಗವಹಿಸಿ ಪದಕಗಳನ್ನು ಗೆದ್ದು ತಂದಿದ್ದಾನೆ. ಇಲ್ಲಿಯವರೆಗೆ ಕೇರಳದ ಸುಲ್ತಾನ್ ಬತೇರಿ, ನೇಪಾಳ, ಕೇರಳದ ಕ್ಯಾಲಿಕಟ್ನಲ್ಲಿ ನಡೆದ ಚಾಂಪಿಯನ್ಷಿಪ್ಗಳಲ್ಲಿ ಭಾಗವಹಿಸಿದ್ದಾನೆ. ವಿನಯ ಒಟ್ಟು 14 ಪದಕಗಳನ್ನು ಪಡೆದಿದ್ದು ಅವುಗಳಲ್ಲಿ 5 ಚಿನ್ನ, 3 ಬೆಳ್ಳಿ ಹಾಗೂ 6 ಕಂಚಿನ ಪದಕಗಳನ್ನು ಮುಡಿಗೇರಿಸಿಕೊಂಡಿದ್ದಾನೆ. ವಿನಯ ಗೌಡನ ತಂದೆ ಆರ್. ಶಿವರಾಮು ಆಟೋ ಚಾಲಕ. ತಾಯಿ ಪಂಕಜಾ ಗೃಹಿಣಿ. ಅಕ್ಕ ನಮಿತಾ ಗೌಡ ಓದುತ್ತಿದ್ದಾಳೆ.
'ನಮ್ಮ ಮಗ ಯಾವುದಾದರೂ ಸ್ಪರ್ಧೆಯಲ್ಲಿ ಭಾಗವಹಿಸಬೇಕು ಎಂದಾಗ ಹಣಕಾಸು ಸಮಸ್ಯೆ ಉಂಟಾಗುತ್ತದೆ. ಆಗ ನೇರವಾಗಿ ಶಾಸಕ ವಾಸು ಅವರ ಬಳಿ ಹೋಗುತ್ತೇವೆ. ಕೊಡುಗೈ ದಾನಿಯಾದ ಅವರು ಇಲ್ಲಿಯವರೆಗಿನ ಖರ್ಚು ವೆಚ್ಚ ಭರಿಸಿದ್ದಾರೆ' ಎಂಬುದು ಗೌಡರ ದೊಡ್ಡಮ್ಮ ಆಡುವ ದೊಡ್ಡಮಾತು. ಸದ್ಯ ಬನ್ನಿಮಂಟಪದ ಸಂತ ಜೋಸೆಫ್ ಶಾಲೆಯಲ್ಲಿ ಏಳನೇ ತರಗತಿಯಲ್ಲಿ ಓದುತ್ತಿರುವ ವಿನಯ್, 'ಕರಾಟೆಯನ್ನು ಉತ್ತಮವಾಗಿ ಕಲಿತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಗಳಿಸಬೇಕು. ದೊಡ್ಡ ವ್ಯಕ್ತಿಯಾಗಿ ಬೆಳೆದರೆ ಅನಾರೋಗ್ಯ ಪೀಡಿತರಿಗೆ ಸಹಾಯ ಮಾಡಬೇಕು' ಎಂದು ಸಮಾಜಸೇವೆಯ ಸ್ಟೇಟ್ಮೆಂಟ್ ಕೊಡುತ್ತಾನೆ. ಈತನ ಸಾಧನೆಗೆ ನೀವೂ ವಿಶ್ ಮಾಡಿ, ಮೊ. 7760870859.
- ಜೆ. ಮಹದೇವ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


