ಕ್ರೀಡೆ

ಕಾಲಿಲ್ಲದವ ಮೀನಾಗಿಬಿಟ್ಟ!

ಕಾಲಿಲ್ಲದವ ಮೀನಾಗಿಬಿಟ್ಟ!
Published On :

ಆತ ಕೇವಲ ಏಂಟು ವರ್ಷಗಳ ಪೋರ. ಆಗಲೇ ಮೆದುಳು ಸಂಬಂಧಿ ಕಾಯಿಲೆಯಿಂದಾಗಿ ತನ್ನೆರಡೂ ಕಾಲುಗಳನ್ನು ಕಳೆದುಕೊಂಡ. ಆದರೆ, ಜೀವನದಲ್ಲಿ ಹತಾಶನಾಗಲಿಲ್ಲ. ತನ್ನ ಸ್ನೇಹಿತರು ಈಜು ಹೊಡೆಯುವುದನ್ನು ನೋಡಿ ತಾನೂ ಅದರ ಬಗ್ಗೆ ಆಸಕ್ತಿ ಬೆಳೆಸಿಕೊಂಡ. ಈಜಿನ ಕನಸು ಕಾಣಲಾರಂಭಿಸಿದ. ನಂತರ ಅದಕ್ಕೆ ಆಸರೆಯಾಗಿ ನಿಂತ ಆತನ ಪೋಷಕರು, ಅವನ ಕನಸು ನನಸಾಗಲು ಟೊಂಕಕಟ್ಟಿ ನಿಂತರು.
ಸೀರನ್ ಕೆಲ್ಸೋ ಎಂಬ ಇಂಗ್ಲೆಂಡಿನ ಈ ಪುಟ್ಟ ಬಾಲಕ ತನ್ನ ಕಾಲುಗಳನ್ನು ಕಳೆದುಕೊಂಡು ವೀಲ್‌ಚೆರ್ ಅನ್ನು ಅವಲಂಬಿಸಿದ. ಆಗ ಆತನಿಗೆ ಕೃತಕ ಕಾಲುಗಳನ್ನು ಅಳವಡಿಸಲಾಯಿತಾದರೂ, ಆತ ತನ್ನ ಸ್ನೇಹಿತರೊಂದಿಗೆ ಈಜಬೇಕೆಂಬ ಆಸೆ ಹೆಚ್ಚಾಯಿತು. ನಂತರ ರಜೆಯ ವೇಳೆ ಫ್ಲೋರಿಡಾದಲ್ಲಿನ ಡಾಲ್ಫಿನ್ ನೋಡಲು ಹೋದ ಸೀರನ್‌ಗೆ, ಅದು ಈಜುವುದನ್ನು ಕಂಡು ಬಹಳ ಕುತೂಹಲನಾದ. ಇದನ್ನು ಗಮನಿಸಿದ ಈತನ ಪೋಷಕರು ಅವನಿಗೆ ಕೃತಕ ಫ್ಲಿಪ್ಪರ್ಸ್ (ಈಜುಕಾಲು)ಗಳನ್ನು ಅಳವಡಿಸಿದರು. ನಂತರ ತರಬೇತಿಯನ್ನೂ ನೀಡಲಾಯಿತು. ಫ್ಲಿಪ್ಪರ್ಸ್ ಅಳವಡಿಸಿದ ನಂತರ ನೀರಿನಲ್ಲಿ ವೇಗವಾಗಿ ಈಜತೊಡಗಿದ ಈತ. ಕೇವಲ ಒಂದೇ ವರ್ಷದಲ್ಲಿ ಈತ ಇತರರು ಹುಬ್ಬೇರಿಸುವಂತೆ ಮೀನಾಗಿಬಿಟ್ಟ. ನಂತರ ಶಾಲಾ ಕಾಲೇಜುಗಳ ಸ್ಪರ್ಧೆಗಳಲ್ಲಿ ಪಾಲ್ಗೊಂಡು, ಸೀರಿನ್ ಈಗ ಹಲವು ಪದಕಗಳನ್ನು ಗೆದ್ದು ಅಚ್ಚರಿಗೆ ಕಾರಣನಾಗಿದ್ದಾನೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.