ಕ್ರೀಡೆ

ಅರ್ಹತಾ ಹಂತದಲ್ಲೇ ಸೋತ ಅರವಿಂದ್ ಭಟ್

Published On :

ನವದೆಹಲಿ: ಜರ್ಮನ್ ಓಪನ್ ಚಾಂಪಿಯನ್ ಅರವಿಂದ್ ಭಟ್ 250,000 ಡಾಲರ್ ಬಹುಮಾನ ಮೊತ್ತದ ಇಂಡಿಯನ್ ಓಪನ್ ಸೂಪರ್ ಸಿರೀಸ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನ ಮೊದಲ ಹೆಜ್ಜೆಯಲ್ಲೇ ಮುಗ್ಗರಿಸಿ ಭಾರಿ ನಿರಾಸೆ ಅನುಭವಿಸಿದ್ದಾರೆ.
ಇಲ್ಲಿನ ಸಿರಿ ಫೋರ್ಟ್ ಕ್ರೀಡಾ ಸಂಕೀರ್ಣದಲ್ಲಿ ಮಂಗಳವಾರ ಆರಂಭವಾದ ಪುರುಷರ ಸಿಂಗಲ್ಸ್ ವಿಭಾಗದ ಅರ್ಹತಾ ಹಂತದ ಮೊದಲ ಸುತ್ತಿನ ಪಂದ್ಯದಲ್ಲಿಯೇ ಕರ್ನಾಟಕ ಮೂಲದ ಆಟಗಾರ ಅರವಿಂದ್ ಭಟ್ ಸೋಲಿನ ಕಹಿ ಅನುಭವಿಸಿದರು. ಅವರು ತಮ್ಮದೇ ದೇಶದವರಾದ ಅಜಯ್ ಕುಮಾರ್ ವಿರುದ್ಧ 20-22, 21-13 ನೇರ ಅಂಕಗಳ ಅಂತರದಲ್ಲಿ ಆಘಾತಕ್ಕೊಳಗಾದರು.
ಕಳೆದ ತಿಂಗಳಷ್ಟೇ ಜರ್ಮನ್ ಓಪನ್ ಗೆದ್ದುಕೊಳ್ಳುವ ಮೂಲಕ ಈ ಸಾಧನೆ ಮಾಡಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಭಾಜನರಾಗಿದ್ದ 34ರ ಅರವಿಂದ್, ಇಲ್ಲಿ ಮಾತ್ರ ಮೊದಲ ಸುತ್ತಿನಲ್ಲೇ ಸೋತು ಹೊರನಡೆದರು.
ಇದರೊಂದಿಗೆ ಕರ್ನಾಟಕದ ಆಟಗಾರ ಪ್ರಧಾನ ಸುತ್ತಿಗೂ ಸಹ ಅರ್ಹತೆ ಪಡೆಯದೆ ಸವಾಲಿಗೆ ತೆರೆ ಎಳೆದುಕೊಂಡರು.
ಈ ಗೆಲವಿನೊಂದಿಗೆ ಪ್ರಮುಖಘಟ್ಟಕ್ಕೆ ಹೆಜ್ಜೆ ಹಾಕಿದ ಅಜಯ್‌ಕುಮಾರ್ ಅಲ್ಲಿ ಮೊದಲ ಸುತ್ತಿನ ಸಮರದಲ್ಲಿ ವಿಶ್ವದ ನಂಬರ್ ಒನ್ ಆಟಗಾರ ಲೀ ಚಾಂಗ್ ವೀ ಅವರ ಕಠಿಣ ಸವಾಲು ಎದುರಿಸಬೇಕಾಗಿದೆ.
ಇದು ನನಗೆ ದೊರೆತ ದೊಡ್ಡ ಗೆಲವು. ಮೊದಲ ಬಾರಿಗೆ ಸೂಪರ್ ಸಿರೀಸ್ ಟೂರ್ನಿಯಲ್ಲಿ ಪ್ರಧಾನ ಹಂತದಲ್ಲಿ ಆಡಲು ಅವಕಾಶ ಸಿಕ್ಕಿರುವುದು ಹೆಮ್ಮೆಯ ಸಂಗತಿ ಎಂದು ಅಜಯ್ ಪ್ರತಿಕ್ರಿಯಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.