ಕ್ರೀಡೆ

ಪಿಎಸ್‌ಪಿಬಿ ಟೆನಿಸ್‌ಗೆ ಬೋಪಣ್ಣ

Published On :

ಬೆಂಗಳೂರು: ಕಬ್ಬನ್ ಪಾರ್ಕ್‌ನಲ್ಲಿರುವ ಕರ್ನಾಟಕ ರಾಜ್ಯ ಲಾನ್ ಟೆನಿಸ್ ಸಂಸ್ಥೆಯಲ್ಲಿ ನಡೆಯಲಿರುವ 33ನೇ ಪಿಎಸ್‌ಪಿಬಿ ಅಂತರ ಘಟಕಗಳ ಟೆನಿಸ್ ಪಂದ್ಯಾವಳಿಯಲ್ಲಿ ರೋಹನ್ ಬೋಪಣ್ಣ, ಸಾಕೇತ್ ಮೈನೆನಿ ಸೇರಿದಂತೆ ಭಾರತದ ಅಗ್ರ ಆಟಗಾರರು ಭಾಗವಹಿಸುತ್ತಿದ್ದಾರೆ.
  ಏಪ್ರಿಲ್ 7ರಿಂದ 12ರವರೆಗೆ ನಡೆಯಲಿರುವ ಪಂದ್ಯಾವಳಿಯಲ್ಲಿ ಅಗ್ರ ಪ್ರತಿಭೆಗಳನ್ನು ತಮ್ಮ ಸಾಮರ್ಥ್ಯವನ್ನು ಪಣಕ್ಕೆ ಹಚ್ಚಲಿದ್ದಾರೆ.  
ಪಂದ್ಯಾವಳಿಯಲ್ಲಿ ಒಟ್ಟು ಏಳು ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿವೆ. ಪುರುಷರ ತಂಡ ಚಾಂಪಿಯನ್‌ಶಿಪ್, ಹಿರಿಯರ ತಂಡ ಚಾಂಪಿಯನ್‌ಶಿಪ್, ಪುರುಷರ ಸಿಂಗಲ್ಸ್, ಪುರುಷರ ಡಬಲ್ಸ್, ಹಿರಿಯರ ಸಿಂಗಲ್ಸ್, ಹಿರಿಯರ ಡಬಲ್ಸ್ ಹಾಗೂ ಮಹಿಳೆಯರ ಸಿಂಗಲ್ಸ್ ಏಳು ವಿಭಾಗಗಳಾಗಿವೆ. ಜಿಎಐಎಲ್, ಒಎನ್‌ಜಿಸಿ, ಐಒಸಿಎಲ್, ಬಿಪಿಸಿಲ್, ಎಚ್‌ಪಿಸಿಎಲ್, ಎನ್‌ಆರ್‌ಎಲ್, ಇಐಎಲ್ ಹಾಗೂ ಐಒಎಲ್ ಸೇರಿದಂತೆ ಒಟ್ಟು ಎಂಟು ತಂಡಗಳು ಪಂದ್ಯಾವಳಿಯಲ್ಲಿ ಭಾಗವಹಿಸಲಿವೆ.
ಭಾರತದ ಅಗ್ರ ಪುರುಷ ಆಟಗಾರರಾದ ರೋಹನ್ ಬೋಪಣ್ಣ, ಸಾಕೆತ್ ಮೈನೆನಿ, ರಾಮ್‌ಕುಮಾರ್ ರಾಮನಾಥನ್, ವಿಷ್ಣುವರ್ಧನ್ ಅವರೊಂದಿಗೆ ಇತರ ಅಗ್ರ ಆಟಗಾರರು ಸೇರಿದ್ದಾರೆ.
ಇದೇ ಮೊದಲ ಬಾರಿಗೆ ಪಿಎಸ್‌ಪಿಬಿ ಪಂದ್ಯಾವಳಿಯಲ್ಲಿ ಮಹಿಳೆಯರು ಭಾಗವಹಿಸುತ್ತಿದ್ದಾರೆ. ಮಹಿಳೆಯರ ವಿಭಾಗದಲ್ಲೂ ಅಗ್ರ ಆಟಗಾರ್ತಿಯರಾದ ಅಂಕಿತಾ ರೈನಾ, ಪ್ರೇರಣಾ ಭಾಂಬ್ರಿ, ಸ್ನೇಹದೇವಿ ಎಸ್. ರೆಡ್ಡಿ ಹಾಗೂ ರಶ್ಮಿ ಚಕ್ರವರ್ತಿ ಅವರು ಭಾಗವಹಿಸುತ್ತಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.