ಕ್ರೀಡೆ

ನಿರೀಕ್ಷೆ ಸಾಮಾನ್ಯ

Published On :
ನವದೆಹಲಿ: ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ರು. 12.5 ಕೋಟಿ ನೀಡಿ ನನ್ನನ್ನು ಖರೀದಿಸಿದ ಡೆಲ್ಲಿ ಡೇರ್‌ಡೆವಿಲ್ಸ್ ತಂಡ, ಉತ್ತಮ ಪ್ರದರ್ಶನ ನೀಡುವ ಕುರಿತು ನನ್ನ ಮೇಲೆ ನಿರೀಕ್ಷೆ ಇಟ್ಟುಕೊಂಡಿರುವುದು ಸಾಮಾನ್ಯವಾಗಿದೆ ಎಂದು ತಮಿಳುನಾಡಿನ ಆರಂಭಿಕ ಬ್ಯಾಟ್ಸ್‌ಮನ್ ದಿನೇಶ್ ಕಾರ್ತಿಕ್ ತಿಳಿಸಿದ್ದಾರೆ.  'ಕಾಪೋರೇಟ್ ಸಂಸ್ಥೆಯೊಂದು ನಮ್ಮ ಮೇಲೆ ವ್ಯಯಿಸಿದಾಗ ಒತ್ತಡ ಹೆಚ್ಚುವುದು ಸಾಮಾನ್ಯ. ಆದರೆ, ಹಣ ಮಾತ್ರ ಇಲ್ಲಿ ವಿಷಯವಲ್ಲ. ಹೆಚ್ಚಿನ ಹಣ ಪಡೆಯಲಿ ಅಥವಾ ಕಡಿಮೆ ಹಣ ಪಡೆಯಲಿ ವೃತ್ತಿಪರ ಆಟಗಾರನಾಗಿ ತಂಡವೊಂದರ ಪರ ಶ್ರೇಷ್ಠ ಪ್ರದರ್ಶನ ನೀಡುವುದು ಆಟಗಾರನ ಕರ್ತವ್ಯ' ಎಂದು ಸಂದರ್ಶನವೊಂದರಲ್ಲಿ ಕಾರ್ತಿಕ್ ಉತ್ತರಿಸಿದರು.
ವಿಶ್ವ ಟಿ20 ಪಂದ್ಯಾವಳಿಗೂ ಮುನ್ನ ನಡೆದ ಏಷ್ಯಾ ಕಪ್‌ನಲ್ಲಿ ದೊರಕಿದ ಹಲವಾರು ಅವಕಾಶಗಳನ್ನು ಬಳಸಿಕೊಳ್ಳುವಲ್ಲಿ ಕಾರ್ತಿಕ್ ವೈಫಲ್ಯ ಕಂಡಿದ್ದರು. ಮಹೇಂದ್ರ ಸಿಂಗ್ ಧೋನಿ ಅನುಪಸ್ಥಿಯಲ್ಲಿ ತಂಡದಲ್ಲಿ ವಿಕೆಟ್ ಕೀಪರ್ ಆಗಿ ಕಾರ್ಯನಿರ್ವಹಿಸಿದ್ದ ಕಾರ್ತಿಕ್, ಸ್ಟಂಪ್ ಮೂಲಕ ಔಟ್ ಮಾಡಲು ದೊರಕಿದ್ದ ಹಲವಾರು ಮಹತ್ವದ ಅವಕಾಶಗಳಲ್ಲಿ ಕೈಚೆಲ್ಲಿದ್ದರು.ಅಲ್ಲದೆ, ಬ್ಯಾಟಿಂಗ್‌ನಲ್ಲೂ ಗಮನ ಸೆಳೆಯುವ ಪ್ರದರ್ಶನ ನೀಡಿರಲಿಲ್ಲ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.