ಕ್ರೀಡೆ

ಭಾರತಕ್ಕೆ ಸರ್ಬಿಯಾ ಸವಾಲು

Published On :
ನವದೆಹಲಿ: ಇತ್ತೀಚೆಗಷ್ಟೇ ದಕ್ಷಿಣ ಕೊರಿಯಾ ವಿರುದ್ಧ ನಡೆದ ಏಷ್ಯಾ ಓಶೆನಿಯಾ ಮೊದಲ ಹಂತದ ಡೇವಿಸ್ ಕಪ್ ಪಂದ್ಯದಲ್ಲಿ ಜಯ ಸಾಧಿಸಿದ ಭಾರತ ತಂಡ, ಈಗ ಸೆಪ್ಟೆಂಬರ್ 12ರಿಂದ 14ರವರೆಗೆ ದೆಹಲಿಯಲ್ಲಿ ನಡೆಯಲಿರುವ ವಿಶ್ವ ಗುಂಪಿನ ಪ್ಲೇ ಆಫ್ ಪಂದ್ಯದಲ್ಲಿ ಸರ್ಬಿಯಾ ತಂಡವನ್ನು ಎದುರಿಸಲಿದೆ.   ಈ ಪಂದ್ಯದಲ್ಲಿ ಹಲವಾರು ಗ್ರ್ಯಾನ್ ಸ್ಲ್ಯಾಮ್ ಗೆದ್ದ ಮತ್ತು ವಿಶ್ವದ ನಂಬರ್ 2 ಆಟಗಾರ ನೋವಾಕ್ ಜೊಕೊವಿಚ್ ಅವರು ಭಾಗವಹಿಸಲಿರುವ ಹಿನ್ನೆಲೆಯಲ್ಲಿ ಭಾರತಕ್ಕೆ ಕಠಿಣ ಸವಾಲು ಎದುರಾಗುವ ಸಾಧ್ಯತೆಗಳಿವೆ.  ಬೋಗ್ಡನ್ ಆಬ್ರೋಡೋವಿಚ್ ನಾಯಕತ್ವದ ಸೆರ್ಬಿಯಾ ತಂಡ ಕಳೆದ ಮೂರು ವರ್ಷಗಳಲ್ಲಿ ಎರಡನೇ ಬಾರಿಗೆ ಭಾರತ ತಂಡವನ್ನು ಎದುರಿಸಲಿದೆ. ಈ ಹಿಂದೆ 2011ರಲ್ಲಿ ನಡೆದ ಪಂದ್ಯದಲ್ಲಿ ಸರ್ಬಿಯಾ ತಂಡ ಭಾರತವನ್ನು 4-1 ಅಂತರದಿಂದ ಪರಾಭವಗೊಳಿಸಿತ್ತು.
ಕಳೆದ ಫೆಬ್ರವರಿಯಲ್ಲಿ ನಡೆದ ವಿಶ್ವಗುಂಪಿನ ಮೊದಲ ಸುತ್ತಿನ ಪಂದ್ಯದಲ್ಲಿ ಸ್ವೀರ್ಜಲೆಂಡ್ ವಿರುದ್ಧ 2-3 ಅಂತರದಿಂದ ಸೋಲನುಭವಿಸಿರುವ ಸರ್ಬಿಯಾ, 2007ರಿಂದಲೇ ವಲಯ ಸ್ಪರ್ಧೆಗಳಲ್ಲಿ ಭಾಗವಹಿಸಿಲ್ಲ. ಆಗ ಆಸ್ಟ್ರೇಲಿಯಾ ವಿರುದ್ಧ ಜಯ ಸಾಧಿಸುವ ಮೂಲಕ ಸರ್ಬಿಯಾ ವಿಶ್ವ ಗುಂಪಿಗೆ ಪ್ರವೇಶ ಪಡೆದಿತ್ತು.
ಏತನ್ಮಧ್ಯೆ, ಸ್ಪೇನ್ ಮತ್ತು ಅರ್ಜೆಂಟೀನಾ ತಂಡಗಳು ಇನ್ನೂ ವಿಶ್ವ ಗುಂಪಿನಲ್ಲೇ ಹೋರಾಟ ನಡೆಸಲಿವೆ. ನಾಲ್ಕು ಬಾರಿ ರನ್ನರ್ ಅಪ್ ಅರ್ಜೆಂಟೀನಾ ತಂಡ ಇಸ್ರೇಲ್‌ಗೆ ತೆರಳಲಿದೆ. ಕೆನಡಾ ತಂಡ ಕೊಲಂಬಿಯಾ ಎದುರಿಸಿದರೆ, ಅಮೆರಿಕ ಸ್ಲೋವಾಕ್ ರಿಪಬ್ಲಿಕ್ ಎದುರಿಸಲಿದೆ. ಆಸ್ಟ್ರೇಲಿಯಾ  ತಂಡ ಉಜ್ಬೆಕಿಸ್ತಾನ ಎದುರಿಸಲಿದೆ. ಹಾಲೆಂಡ್ ತಂಡ ಕ್ರೋವೇಷಿಯಾ ವಿರುದ್ಧ ಹೋರಾಟ ನಡೆಸಲಿದೆ. ಇನ್ನು ಉಕ್ರೇನ್ ತಂಡ ಬೆಲ್ಜಿಯಂ ವಿರುದ್ಧ ಸೆಣಸಲಿದೆ.
ವಿಶ್ವಗುಂಪಿನ ಪ್ಲೇ ಆಫ್ ವೇಳಪಟ್ಟಿ
ಭಾರತ v/s ಸರ್ಬಿಯಾ
 ಬ್ರೆಜಿಲ್ v/s ಸ್ಪೇನ್
ಇಸ್ರೇಲ್ v/s ಅರ್ಜೆಂಟೀನಾ
ಕೆನಡಾ v/s ಕೊಲಂಬಿಯಾ
ಅಮೆರಿಕ v/s ಸ್ಲೋವಾಕ್ ರಿಪಬ್ಲಿಕ್
ಆಸ್ಟ್ರೇಲಿಯಾ v/s ಉಜ್ಬೆಕಿಸ್ತಾನ
ಹಾಲೆಂಡ್ v/s ಕ್ರೋವೇಷಿಯಾ
ಉಕ್ರೇನ್ v/s ಬೆಲ್ಜಿಯಂ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.