ಈಗಲೂ ಯುವಿ ನನ್ನ ಮೊದಲ ಆಯ್ಕೆ
Published On :
ನವದೆಹಲಿ: ಎಡಗೈ ಬ್ಯಾಟ್ಸ್‌ಮನ್ ಯುವರಾಜ್ ಸಿಂಗ್ ಸೀಮಿತ ಓವರ್‌ಗಳಲ್ಲಿ ಭಾರತ ಕಂಡ ಅತ್ಯುತ್ತಮ ಮ್ಯಾಚ್ ವಿನ್ನರ್ ಆಗಿದ್ದು, ಒಂದು ವೇಳೆ ಇಂದು ಐಪಿಎಲ್ ಹರಾಜು ಪ್ರಕ್ರಿಯೆ ನಡೆದರೂ ಯುವರಾಜ್ ಸಿಂಗ್‌ರನ್ನು ತಂಡಕ್ಕೆ ಆಯ್ಕೆ ಮಾಡಿಕೊಳ್ಳಲು ಮೊದಲ ಆದ್ಯತೆ ನೀಡುತ್ತೇನೆ ಎಂದು ಗೌತಮ್ ಗಂಭೀರ್ ತಿಳಿಸಿದ್ದಾರೆ.
ಯುವರಾಜ್ ಸಿಂಗ್ ಬಗ್ಗೆ ಯಾವುದೇ ಕ್ರಿಕೆಟರ್ ಟೀಕೆ ಮಾಡಿಲ್ಲ. ಮಾಧ್ಯಮಗಳು ಯುವರಾಜ್‌ರನ್ನು ದೂರಿದ್ದು, ನಾವು ಏನು ಹೇಳುತ್ತಿದ್ದೇವೆ ಎಂಬುದರ ಬಗ್ಗೆ ಜಾಗೃತಿ ವಹಿಸಬೇಕು ಎಂದು ಗಂಭೀರ್ ಅಭಿಪ್ರಾಯಪಟ್ಟಿದ್ದಾರೆ.ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ನಾವು ಯುವರಾಜ್ ಸಿಂಗ್‌ರನ್ನು ಆಯ್ಕೆ ಮಾಡಿಕೊಳ್ಳಲು ಸಾಕಷ್ಟು ಪ್ರಯತ್ನಿಸಿದೆವು. ಆದರೆ ಆರ್‌ಸಿಬಿ ಬಿಡ್‌ನಲ್ಲಿ ಗೆದ್ದುಕೊಂಡಿತು. ಒಂದುವೇಳೆ ಇಂದು ಐಪಿಎಲ್ ಹರಾಜು ಪ್ರಕ್ರಿಯೆ ನಡೆದರೂ ಯುವಿಯನ್ನು ಕೆಕೆಆರ್ ತಂಡಕ್ಕೆ ಆಯ್ಕೆ ಮಾಡಿಕೊಳ್ಳಲು ಹೆಚ್ಚಿನ ಆದ್ಯತೆ ನೀಡುತ್ತೇನೆ ಎಂದು ಹೇಳಲು ಇಚ್ಛಿಸುತ್ತೇನೆ. ನನ್ನ ಪ್ರಕಾರ ಯುವಿ ಇಂದಿನವರೆಗೆ ಭಾರತ ಕಂಡ ಅತ್ಯುತ್ತಮ ಮ್ಯಾಚ್ ವಿನ್ನರ್ ಎಂದರು.
ಇನ್ನು ಭಾರತ ತಂಡ ಕೊಹ್ಲಿ ಮೇಲೆ ಹೆಚ್ಚು ಅವಲಂಬಿತವಾಗಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಗೌತಮ್, ತಂಡದಲ್ಲಿ 11 ಆಟಗಾರರು ಕಣದಲ್ಲಿರುತ್ತಾರೆ. ಪಂದ್ಯ ಗೆಲ್ಲಲು ಅಥವಾ ಸೋಲಲು 11 ಮಂದಿ ಕಾರಣ. ಏಕೆಂದರೆ ಇದು ವೈಯಕ್ತಿಕ ಕ್ರೀಡೆಯಲ್ಲ ಎಂದು ಅಭಿಪ್ರಾಯಪಟ್ಟರು.
ಇನ್ನು ಸೆಹ್ವಾಗ್ ಬದಲು ಯುವರಾಜ್ ಸಿಂಗ್‌ಗೆ ಹೆಚ್ಚಿನ ಆದ್ಯತೆ ಏಕೆ ಎಂಬ ಪ್ರಶ್ನೆಗೆ ಉತ್ತರಿಸಿದ ಗಂಭೀರ್, ಪ್ರತಿ ತಂಡ ತನ್ನದೇ ಆದ ತಂತ್ರಗಾರಿಕೆಯನ್ನು ಹೊಂದಿರುತ್ತದೆ. ಅಲ್ಲದೆ ಇಲ್ಲಿ 5-6 ಮಂದಿಕೂತು ಒಂದು ನಿರ್ಧಾರಕ್ಕೆ ಬಂದಿರುತ್ತಾರೆ. ನಮಗೆ ಯುವರಾಜ್ ಸಿಂಗ್ ಬೇಕಾಗಿತ್ತು. ಹಾಗಾಗಿ ನಾವು ಅವರಿಗೆ ಹೆಚ್ಚಿನ ಬಿಡ್ಡಿಂಗ್ ಮಾಡಲು ನಿರ್ಧರಿಸಿದೆವು.
ಇನ್ನು ಮುಷ್ತಾಕ್ ಅಲಿ ಟಿ20 ಟ್ರೋಫಿಯಲ್ಲಿನ ಪ್ರದರ್ಶನದ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ ಗಂಭೀರ್, ಈ ಟೂರ್ನಿ ನಿಜವಾಗಿಯೂ ನನ್ನ ಬ್ಯಾಟಿಂಗ್‌ಗೆ ಸಹಾಯವಾಗಿದೆ. ಕಠಿಣ ಪಿಚ್‌ಗಳಲ್ಲಿ ಅಭ್ಯಾಸ ನಡೆಸಿದ್ದ ಹಿನ್ನೆಲೆಯಲ್ಲಿ ಫ್ಲಾಟ್ ಪಿಚ್‌ನಲ್ಲಿ ಉತ್ತಮ ರನ್ ಗಳಿಸಲು ಸಾಧ್ಯವಾಯಿತು ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

