ಕ್ರೀಡೆ

ರಾಜಸ್ಥಾನಕ್ಕೆ ಮಣಿದ ಬಂಗಾಳ ದೆಹಲಿ ವಿರುದ್ಧ ಗೆದ್ದ ಬರೋಡಾ

Published On :

ಮುಂಬೈ: ಹೆಚ್ಚು ಪರಿಣಾಮ ಬೀರಿದ ಗಜೇಂದ್ರ ಸಿಂಗ್ ಮತ್ತು ರಿತುರಾಜ್ ಸಿಂಗ್‌ರ ಉತ್ತಮ ದಾಳಿಯ ನೆರವಿನಿಂದ ರಾಜಸ್ಥಾನ ತಂಡ 14 ರನ್‌ಗಳಿಂದ ಬಂಗಾಳ ತಂಡವನ್ನು ಸೋಲಿಸಿ, ಸೈಯದ್ ಮುಷ್ತಾಕ್ ಅಲಿ
ಟ್ರೋಫಿ ಟಿ-20 ಕ್ರಿಕೆಟ್ ಟೂರ್ನಿಯಲ್ಲಿ 4 ಅಂಕಗಳನ್ನು ಕಲೆಹಾಕಿದೆ. ಬಾಂದ್ಲಾ ಕುರ್ಲಾ ಸಂಕೀರ್ಣದಲ್ಲಿ ಬುಧವಾರ ನಡೆದ 'ಬಿ' ಗುಂಪಿನ ಪಂದ್ಯದಲ್ಲಿ
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ 20 ಓವರುಗಳಲ್ಲಿ 9 ವಿಕೆಟ್ ನಷ್ಟಕ್ಕೆ 137 ರನ್‌ಗಳಿಸಿತು. ಆರಂಭಿಕ ಅಂಕಿತ ಲಂಬಾ 34 ಎಸೆತಗಳಲ್ಲಿ 1 ಬೌಂಡರಿ ಮತ್ತು 2 ಸಿಕ್ಸರ್ ಸೇರಿದಂತೆ 37 ರನ್‌ಗಳಿಸಿದ್ದು ತಂಡದ ಪರ ಉತ್ತಮ ಸಾಧನೆಯಾಯಿತು.
ಉಳಿದಂತೆ, ರಾಜೇಶ್ ಬಿಶ್ನೋಯಿ 36 ಮತ್ತು ದಿವ್ಯ ಪ್ರತಾಪ್ ಸಿಂಗ್ 30 ರನ್‌ಗಳ ಉಪಯುಕ್ತ ಕಾಣಿಕೆ ನೀಡಿದರು. ಬಂಗಾಳ ಪರ ಚುರುಕಿನ ದಾಳಿ ಸಂಘಟಿಸಿದ ಸೌರಶಿಶ್ ಲಹಿರಿ 3 ಹಾಗೂ ಸೌರವ್ ಮೊಂಡಲ್, ಸಂಜೀಬ್ ಸಾನ್ಯಾಲ್ ಮತ್ತು ಸಂದೀಪನ್ ದಾಸ್ ತಲಾ 2 ವಿಕೆಟ್ ಉರುಳಿಸಿದರು. ನಂತರ 138 ರನ್‌ಗಳ ಸಾಧಾರಣ ಗುರಿ ಬೆಂಬತ್ತಿದ ಬಂಗಾಳ ತಂಡಕ್ಕೆ 7 ವಿಕೆಟ್ ನಷ್ಟಕ್ಕೆ 123 ರನ್‌ಗಳಿಸಲಷ್ಟೇ ಸಾಧ್ಯವಾಯಿತು. ಆರಂಭಿಕ ವಿವೇಕ್ ಸಿಂಗ್ (48ರನ್, 40 ಎಸೆತ, 3 ಬೌಂಡರಿ, 3 ಸಿಕ್ಸರ್) ಹೋರಾಟ ನಡೆಸಿದರು.
ದೆಹಲಿಗೆ ಆಘಾತ ನೀಡಿದ ಬರೋಡಾ: ದಿನದ ಮತ್ತೊಂದು ಪಂದ್ಯದಲ್ಲಿ ಬರೋಡಾ 16 ರನ್‌ಗಳಿಂದ ದೆಹಲಿ ವಿರುದ್ದ ಜಯಗಳಿಸಿತು. ಮೊದಲು ಬ್ಯಾಟ್ ಮಾಡಿದ ಬರೋಡಾ 6 ವಿಕೆಟ್‌ಗೆ 131 ರನ್ ಗಳಿಸಿತು. ಉತ್ತರವಾಗಿ ದೆಹಲಿ ತಂಡಕ್ಕೆ 9 ವಿಕೆಟ್ ನಷ್ಟಕ್ಕೆ 115 ರನ್ ಗಳಿಸಲಷ್ಟೇ ಸಾಧ್ಯವಾಯಿತು.

ಸಂಕ್ಷಿಪ್ತ ಸ್ಕೋರ್
ರಾಜಸ್ಥಾನ 20 ಓವರುಗಳಲ್ಲಿ 9 ವಿಕೆಟ್‌ಗೆ 137 (ಅಂಕಿತ್ ಲಂಬಾ 37, ರಾಜೇಶ್ ಬಿಶ್ನೋಯಿ 36, ದಿವ್ಯ ಪ್ರತಾಪ್ ಸಿಂಗ್ 30, ಸೌರಶಿಶ್ ಲಹಿರಿ 28ಕ್ಕೆ3, ಸೌರವ್ ಮೊಂಡಲ್ 23ಕ್ಕೆ2, ಸಂದೀಪನ್ ದಾಸ್ 22ಕ್ಕೆ2, ಸಂಜೀಬ್ ಸಾನ್ಯಾಲ್ 35ಕ್ಕೆ2). ಬಂಗಾಳ 20 ಓವರುಗಳಲ್ಲಿ 7 ವಿಕೆಟ್‌ಗೆ 123 (ವಿವೇಕ್ ಸಿಂಗ್ 48, ಗಜೇಂದ್ರ ಸಿಂಗ್ ಪರಿಹಾರ್ 14ಕ್ಕೆ3, ರಿತುರಾಜ್ ಸಿಂಗ್ 11ಕ್ಕೆ2).
ಬರೋಡಾ 20 ಓವರುಗಳಲ್ಲಿ 6 ವಿಕೆಟ್‌ಗೆ 131
(ಆದಿತ್ಯ ವಾಗ್ಮೋಡೆ 30, ಕೆ. ಶರ್ಮಾ 11ಕ್ಕೆ1)
ದೆಹಲಿ 20 ಓವರುಗಳಲ್ಲಿ 9 ವಿಕೆಟ್‌ಗೆ 115
(ಜಗ್ರಿತ್ ಆನಂದ್ 54, ಯೋಗೇಶ್ ನಗರ್ 31, ಲುಕ್ಮನ್  ಮೆರಿವಾಲ 23ಕ್ಕೆ5, ಮುನಾಫ್ ಪಟೇಲ್ 10ಕ್ಕೆ2, ಕೆ. ಪಾಂಡ್ಯಾ 17ಕ್ಕೆ2).

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.