ಕ್ರೀಡೆ

ಏಷ್ಯನ್, ಕಾಮನ್ವೆಲ್ತ್ ಗುರಿ

Published On :

ಬೆಂಗಳೂರು: ಏಷ್ಯನ್ ಗೇಮ್ಸ್ ಮತ್ತು ಕಾಮನ್ವೆಲ್ತ್ ಕ್ರೀಡಾಕೂಟಗಳಿಗೆ ಅರ್ಹತೆ ಪಡೆಯುವುದು ಈಗ ನನ್ನ ಮುಖ್ಯ ಗುರಿ ಎಂದು ಪ್ಯಾರಾಲಿಂಪಿಯನ್ ಈಜುಪಟು ಶರತ್ ಗಾಯಕ್ವಾಡ್ ಅವರು ಬುಧವಾರ ತಿಳಿಸಿದರು.
ಈ ಎರಡು ಮಹತ್ವದ ಕ್ರೀಡಾಕೂಟಗಳಿಗೆ ಅರ್ಹತೆ ಪಡೆಯುವ ನಿಟ್ಟಿನಲ್ಲಿ ಕಠಿಣ ಅಭ್ಯಾಸ ನಡೆಸಿರುವ ಶರತ್, ಏಪ್ರಿಲ್ 24ರಿಂದ 27ರವರೆಗೆ ಜರ್ಮನಿಯ ಬರ್ಲಿನ್‌ನಲ್ಲಿ ನಡೆಯಲಿರುವ ಪ್ರತಿಷ್ಠಿತ ಜರ್ಮನಿ ಅಂತಾರಾಷ್ಟ್ರೀಯ ಈಜು ಚಾಂಪಿಯನ್‌ಶಿಪ್‌ಗೆ ತೆರಳುತ್ತಿದ್ದಾರೆ.
ಜರ್ಮನಿ ಸ್ಪರ್ಧೆಯಲ್ಲಿ ನಾನು ಒಟ್ಟು 11 ವಿಭಾಗಗಳಲ್ಲಿ ಭಾಗವಹಿಸುತ್ತಿದ್ದು, ಕನಿಷ್ಠ 7 ವಿಭಾಗಗಳಲ್ಲಿ ನಾನು ಕಾಮನ್ವೆಲ್ತ್ ಮತ್ತು ಏಷ್ಯನ್ ಗೇಮ್ಸ್ ಕ್ರೀಡಾಕೂಟಗಳಿಗೆ ಅರ್ಹತೆ ಪಡೆಯುವ ಗುರಿ ಹೊಂದಿದ್ದೇನೆ ಎಂದಿದ್ದಾರೆ.
ಜರ್ಮನಿ ಅಂತಾರಾಷ್ಟ್ರೀಯ ಪಂದ್ಯಾವಳಿ ಒಂದು ಮುಕ್ತ ಈಜು ಚಾಂಪಿಯನ್‌ಶಿಪ್ ಆಗಿದ್ದು, ಅಲ್ಲಿ ಎಲ್ಲರೂ ಭಾಗವಹಿಸಬಹುದಾಗಿದೆ.
2012ರ ಲಂಡನ್ ಪ್ಯಾರಾಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿದ್ದ ಭಾರತದ ಮೊದಲ ಈಜುಪಟು ಎನಿಸಿರುವ ಮತ್ತು ಹಲವಾರು ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಗೆದ್ದುಕೊಂಡಿರುವ ಯುವ ಈಜುಪಟು ಶರತ್, ಭಾರತದ ಭರವಸೆ ಪ್ಯಾರಾಲಿಂಪಿಯನ್ ಎನಿಸಿದ್ದಾರೆ.
ಜಾನ್ ಕ್ರಿಸ್ಟೋಫರ್ ಅವರ ಬಳಿ ಬೆಂಗಳೂರಿನ ಜಯನಗರದಲ್ಲಿ ತರಬೇತಿ ಪಡೆಯುತ್ತಿರುವ ಶರತ್, ಏಳು ವಿಭಾಗಗಳಲ್ಲಿ ಅರ್ಹತೆ ಗಿಟ್ಟಿಸುವ ಭರವಸೆ ಮಾತನಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.