ಕ್ರೀಡೆ

ಚಾಂಪಿಯನ್ಸ್ ಚಾಲೆಂಜ್‌ಗಾಗಿ ಐರ್ಲೆಂಡ್‌ಗೆ ವನಿತೆಯರು

Published On :

ನವದೆಹಲಿ: ಇದೇ ತಿಂಗಳಾಂತ್ಯದಲ್ಲಿ ಆರಂಭವಾಗಲಿರುವ ಎಫ್‌ಐಎಚ್ ಚಾಂಪಿಯನ್ಸ್ ಚಾಲೆಂಜ್ ಪಂದ್ಯಾವಳಿಯ ಪೂರ್ವ ಸಿದ್ಧತೆಗಾಗಿ ಭಾರತ ಮಹಿಳೆಯರ ಹಾಕಿ ತಂಡ ಬುಧವಾರ ರಾತ್ರಿ ಐರ್ಲೆಂಡ್‌ಗೆ ತೆರಳಿದೆ.
ಕಳೆದ ವಾರ ಪ್ರಕಟಿಸಲಾದ 18 ಆಟಗಾರ್ತಿಯರ ತಂಡ ಈ ಪ್ರವಾಸದಲ್ಲಿ ಐರ್ಲೆಂಡ್ ವಿರುದ್ಧ ಮೂರು ಪಂದ್ಯಗಳ ಟೆಸ್ಟ್ ಸರಣಿಯನ್ನಾಡಲಿದ್ದು, ಚಾಂಪಿಯನ್ಸ್ ಚಾಲೆಂಜ್ ಪಂದ್ಯಾವಳಿಗೂ ಮುನ್ನ ಆಟಗಾರ್ತಿಯರಿಗೆ ಹೆಚ್ಚಿನ ಅನುಭವ ನೀಡಲಿದೆ.
ಏ.27ರಿಂದ ಆರಂಭವಾಗಲಿರುವ ಈ ಪಂದ್ಯಾವಳಿಯಲ್ಲಿ ಭಾರತ ತಂಡದ ಸಾರಥ್ಯವನ್ನು ಮಿಡ್‌ಫೀಲ್ಡರ್ ರಿತು ರಾಣಿ ವಹಿಸಿಕೊಳ್ಳುತ್ತಿದ್ದು, ಮತ್ತೊರ್ವ ಮಿಡ್‌ಫೀಲ್ಡರ್ ಚಂಚಣ್ ದೇವಿ ಉಪನಾಯಕಿಯಾಗಿದ್ದಾರೆ.
ಇನ್ನು ಪಂದ್ಯಾವಳಿಯ ವೇಳೆ ಯುವ ಆಟಗಾರ್ತಿಯರಾದ ನವ್‌ನೀತ್ ಕೌರ್ ಮತ್ತು ನೇಹಾ ಗೋಯಲ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪದಾರ್ಪಣೆ ಮಾಡುವ ಸಾಧ್ಯತೆಗಳಿವೆ.
ಈ ಪ್ರವಾಸದ ಕುರಿತು ಮಾತನಾಡಿರುವ ತಂಡದ ಕೋಚ್ ನೀಲ್ ಹೌಗುಡ್, ಈ ಒಂದು ಅವಕಾಶಕ್ಕಾಗಿ ಭಾರತ ವನಿತೆಯರ ತಂಡ ಸಾಕಷ್ಟು ದಿನಗಳಿಂದ ಎದುರುನೋಡುತ್ತಿತ್ತು. ನಾವು ಅಂತಾರಾಷ್ಟ್ರೀಯ ಪಂದ್ಯವನ್ನಾಡಿ ಸುಮಾರು 6 ತಿಂಗಳಾಗಿದ್ದು, ಮುಂಬರುವ ಕಾಮನ್‌ವೆಲ್ತ್ ಕ್ರೀಡಾಕೂಟ ಹಾಗೂ ಏಷ್ಯಾ ಕ್ರೀಡಾಕೂಟಕ್ಕೆ ಸಿದ್ಧತೆ ನಡೆಸಲವು ಇದು ಮೊದಲ ಪ್ರಯತ್ನವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಚಾಂಪಿಯನ್ ಚಾಲೆಂಜ್ ಪಂದ್ಯಾವಳಿಯಲ್ಲಿ ಭಾರತ ತಂಡ ಎ ಗುಂಪಿನಲ್ಲಿ ಸ್ಥಾನ ಪಡೆದಿದ್ದು, ಭಾರತದ ಜತೆಗೆ ಕೊರಿಯಾ ಬೆಲ್ಜಿಯಂ ಮತ್ತು ಆತಿಥಏಯ ಸ್ಕಾಟ್ಲೆಂಡ್ ತಂಡಗಳು ಈ ಗುಂಪಿನಲ್ಲಿವೆ. ಇನ್ನು ಯುಎಸ್‌ಎ, ದಕ್ಷಿಣ ಆಫ್ರಿಕಾ, ಸ್ಪೇನ್ ಮತ್ತು ಐರ್ಲೆಂಡ್ ತಂಡಗಳು ಬಿ ಗುಂಪಿನಲ್ಲಿ ಸ್ಥಾನ ಪಡೆದಿವೆ. ಭಾರತ ತಂಡ ಏ.27ರಂದು ತನ್ನ ಮೊದಲ ಪಂದ್ಯದಲ್ಲಿ ಕೊರಿಯಾ ತಂಡವನ್ನು ಎದುರಿಸಲಿದೆ.

ಭಾರತ ತಂಡ:
ಗೋಲ್‌ಕೀಪರ್‌ಗಳು: ಯೋಗಿತಾ ಬಾಲಿ, ಸವಿತಾ,
ಡಿಫರೆಂಡರ್: ದೀಪ್ ಗ್ರೇಸ್ ಎಕ್ಕಾ, ದೀಪಿಕಾ, ಸುನಿತಾ ಲಕ್ರಾ, ಕಿರಣ್‌ದೀಪ್ ಕೌರ್, ನಮಿತಾ ಟೊಪ್ಪೊ, ಮೋನಿಕಾ ಮಲಿಕ್.
ಮಿಡ್‌ಫೀಲ್ಡರ್: ಸುಶೀಲಾ ಚಾನು, ರಿತು ರಾಣಿ, ಲಿಲಿ ಚಾನು, ಚಂಚಣ್ ದೇವಿ, ಸೌಂದರ್ಯ್ ಯೆಂದಲಾ,
ಫಾರ್ವರ್ಡ್ಸ್: ಅನುರಾಧ ದೇವಿ, ಪೂನಮ್ ರಾಣಿ, ವಂದನಾ ಕಟಾರಿಯಾ, ನವ್‌ನೀತ್ ಕೌರ್, ನೇಹಾ ಗೋಯಲ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.