ಗೆದ್ದ ಯುಪಿ, ಹರ್ಯಾಣ
ರಾಜ್ಕೋಟ್: ಆರಂಭಿಕ ಆಟಗಾರ ಮುಕುಲ್ ದಗಾರ್ ಅವರ ಜವಾಬ್ದಾರಿಯುತ ಬ್ಯಾಟಿಂಗ್ ನೆರವಿನಿಂದ ಉತ್ತರ ಪ್ರದೇಶ ತಂಡವು ಮುಷ್ತಾಕ್ ಅಲಿ ಟಿ20 ಪಂದ್ಯಾವಳಿಯಲ್ಲಿ ಗೋವಾ ವಿರುದ್ಧ ಗೆಲವು ದಾಖಲಿಸಿದೆ.
ಗುರುವಾರ ಸೌರಾಷ್ಟ್ರ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಉತ್ತರ ಪ್ರದೇಶ ತಂಡವು 48 ರನ್ಗಳ ಗೆಲವು ದಾಖಲಿಸಿತು. ಟಾಸ್ ಗೆದ್ದ ಗೋವಾ ತಂಡ ಮೊದಲು ಫೀಲ್ಡಿಂಗ್ ಮಾಡಲು ನಿರ್ಧರಿಸಿತು. ಹಾಗಾಗಿ ಉತ್ತರ ಪ್ರದೇಶ 20 ಓವರ್ಗಳಲ್ಲಿ 3 ವಿಕೆಟ್ ಕಳೆದುಕೊಂಡು 186 ರನ್ಗಳ ಬೃಹತ್ ಮೊತ್ತ ದಾಖಲಿಸಿತು.
ಈ ಮೊತ್ತವನ್ನು ಬೆನ್ನಟ್ಟಿದ ಗೋವಾ ತಂಡ 20 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 138 ರನ್ ದಾಖಲಿಸಿ ಪರಾಭವಗೊಂಡಿತು.
ಉತ್ತರ ಪ್ರದೇಶ ತಂಡದ ಪರ ಅತ್ಯುತ್ತಮ ಬ್ಯಾಟಿಂಗ್ ಮಾಡಿದ ಮುಕುಲ್ ದಗಾರ್ (55), ಪ್ರಶಾಂತ್ ಗುಪ್ತಾ (46), ಏಕಲವ್ಯ ದ್ವಿವೇದಿ (43) ತಂಡ ಬೃಹತ್ ಮೊತ್ತ ಪೇರಿಸಲು ನೆರವಾದರು. ಇನ್ನು ಗೋವಾ ತಂಡದ ಪರ ಸುನಿಲ್ ದೇಸಾಯಿ (30), ರೋಹಿತ್ ಆಸ್ನೋಡ್ಕರ್ (31) ಹಾಗೂ ಹರ್ಷದ್ ಗಾಡೇಕರ್ (ಅಜೇಯ 33) ಉತ್ತಮ ಹೋರಾಟ ನೀಡಿದರು. ರಾರಾಜಿಸಿದ ರಾಜಸ್ಥಾನ: ಇನ್ನು ಮುಂಬೈನ ಬಾಂದ್ರಾ ಕುರ್ಲಾ ಸಂಕೀರ್ಣದಲ್ಲಿ ನಡೆದ ಬಿ ಗುಂಪಿನ ಪಂದ್ಯದಲ್ಲಿ ರಾಜಸ್ಥಾನ ತಂಡ 3 ವಿಕೆಟ್ಗಳ ಅಂತರದಲ್ಲಿ ಕೇರಳ ತಂಡವನ್ನು ಮಣಿಸಿದೆ. ಟಾಸ್ ಗೆದ್ದ ರಾಜಸ್ಥಾನ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಕೇರಳ 20 ಓವರ್ಗಳಲ್ಲಿ 3 ವಿಕೆಟ್ಗೆ 172 ರನ್ ದಾಖಲಿಸಿತು. ನಂತರ ಈ ಮೊತ್ತವನ್ನು ಬೆನ್ನಟ್ಟಿದ ರಾಜಸ್ಥಾನ 19.5 ಓವರ್ಗಳಲ್ಲಿ 7 ವಿಕೆಟ್ಗೆ 173 ರನ್ ದಾಖಲಿಸಿ ಗೆಲವಿನ ನಗೆ ಬೀರಿತು. ಕೇರಳ ಪರ ಸಂಜು ಸ್ಯಾಮ್ಸಮನ್ (68), ರೋಹನ್ ಪ್ರೇಮ್ (ಅಜೇಯ 48) ಉತ್ತಮ ಬ್ಯಾಟಿಂಗ್ ಮಾಡಿದರು. ರಾಜಸ್ಥಾನ ತಂಡದ ಪರ ಕೆಳ ಕ್ರಮಾಂಕದಲ್ಲಿ ಬಂದ ರಾಜೇಶ್ ಬಿಶ್ನೋಯ್ (75) ಅರ್ಧಶತಕ ದಾಖಲಿಸಿ ತಂಡವನ್ನು ಗೆಲವಿನತ್ತ ಕೊಂಡೊಯ್ದರು.
ದೆಹಲಿಗೆ ಜಯ: ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಬಿ ಗುಂಪಿನ ಮತ್ತೊಂದು ಪಂದ್ಯದಲ್ಲಿ ದೆಹಲಿ ತಂಡವು ಬಂಗಾಳ ತಂಡದ ವಿರುದ್ಧ 7 ವಿಕೆಟ್ಗಳ ಸುಲಭ ಗೆಲವು ದಾಖಲಿಸಿತು.
ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ದೆಹಲಿ ತಂಡ ಮಾರಕ ಬೌಲಿಂಗ್ ದಾಳಿ ನಡೆಸಿತು. ಹಾಗಾಗಿ ಬಂಗಾಳ ತಂಡ 20 ಓವರ್ಗಳಲ್ಲಿ 8 ವಿಕೆಟ್ಗೆ 119 ರನ್ ದಾಖಲಿಸಲಷ್ಟೇ ಶಕ್ತವಾಯಿತು. ಈ ಮೊತ್ತವನ್ನು ಬೆನ್ನಟ್ಟಿದ ದೆಹಲಿ 19 ಓವರ್ಗಳಲ್ಲಿ 3 ವಿಕೆಟ್ಗೆ 122 ರನ್ ದಾಖಲಿಸಿ ಜಯ ಗಳಿಸಿತು.
ಬಂಗಾಳ ತಂಡದ ಪರ ಶ್ರೀವಾಸ್ತವ್ ಗೋಸ್ವಾಮಿ (46) ಹೊರತು ಪಡಿಸಿ ಉಳಿದ ಯಾವುದೇ ಬ್ಯಾಟ್ಸ್ಮನ್ ಹೆಚ್ಚಿನ ರನ್ ದಾಖಲಿಸಲಿಲ್ಲ. ಹಾಗಾಗಿ ತಂಡ ಸೋಲನುಭವಿಸಿತು.ಹರ್ಯಾಣ ಮೇಲುಗೈ: ಇನ್ನು ಎ ಗುಂಪಿನ ಮತ್ತೊಂದು ಪಂದ್ಯದಲ್ಲಿ ಹರ್ಯಾಣ ತಂಡ ಜಾರ್ಖಂಡ್ ವಿರುದ್ಧ 6 ವಿಕೆಟ್ಗಳ ಗೆಲವು ದಾಖಲಿಸಿದೆ. ಟಾಸ್ ಗೆದ್ದ ಹರ್ಯಾಣ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಹಾಗಾಗಿ ಮೊದಲು ಬ್ಯಾಟಿಂಗ್ಗೆ ಇಳಿದ ಜಾರ್ಖಂಡ್ ಇಶಾಂಕ್ ಜಗ್ಗಿ (57) ಅರ್ಧಶತಕದ ನೆರವಿನಿಂದ 20 ಓವರ್ಗಳಲ್ಲಿ 9 ವಿಕೆ
ಟ್ಗೆ 146 ರನ್ ದಾಖಲಿಸಿತು. ಈ ಮೊತ್ತವನ್ನು ಬೆನ್ನಟ್ಟಿದ ಹರ್ಯಾಣ ಗುಂತಶ್ವೀರ್ ಸಿಂಗ್ (65) ಅರ್ಧಶತಕದ ನೆರವಿನಿಂದ 18 ಓವರ್ಗಳಲ್ಲಿ 4 ವಿಕೆಟ್ಗೆ 149 ರನ್ ದಾಖಲಿಸಿ ಗೆಲವು ದಾಖಲಿಸಿತು.
ಸಂಕ್ಷಿಪ್ತ ಸ್ಕೋರ್
ಉತ್ತರ ಪ್ರದೇಶ 20 ಓವರ್ಗಳಲ್ಲಿ 3 ವಿಕೆಟ್ಗೆ 186 (ಮುಕುಲ್ ದಗಾರ್ 55, ಪ್ರಶಾಂತ್ ಗುಪ್ತಾ 46, ಏಕಲವ್ಯ ದ್ವಿವೇದಿ 43, ಮಿಸಲ್ 31ಕ್ಕೆ1)
ಗೋವಾ ತಂಡ 20 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 138 (ಸುನಿಲ್ ದೇಸಾಯಿ 30, ರೋಹಿತ್ ಆಸ್ನೋಡ್ಕರ್ 31 ಹಾಗೂ ಹರ್ಷದ್ ಅಜೇಯ 33, ಪ್ರವೀಣ್ ಕುಮಾರ್ 8ಕ್ಕೆ2)
ಕೇರಳ 20 ಓವರ್ಗಳಲ್ಲಿ 3 ವಿಕೆಟ್ಗೆ 172 (ಸಂಜು ಸ್ಯಾಮ್ಸನ್ (68), ರೋಹನ್ ಪ್ರೇಮ್ (ಅಜೇಯ 48, ಆದಿತ್ಯ ಗರ್ವಾಲ್ 14ಕ್ಕೆ1)
ರಾಜಸ್ಥಾನ 19.5 ಓವರ್ಗಳಲ್ಲಿ 7 ವಿಕೆಟ್ಗೆ 173 (ರಾಜೇಶ್ ಬಿಶ್ನೋಯ್ 75, ನರೇಶ್ 42, ವಿನೋದ್ 35ಕ್ಕೆ2)
ಬಂಗಾಳ 20 ಓವರ್ಗಳಲ್ಲಿ 8 ವಿಕೆಟ್ಗೆ 119 (ಗೋಸ್ವಾಮಿ 46, ವಿವೇಕ್ 16, ಸುಮಿತ್ ನರ್ವಾಲ್ 13ಕ್ಕೆ2)
ದೆಹಲಿ 19 ಓವರ್ಗಳಲ್ಲಿ 3 ವಿಕೆಟ್ಗೆ 122 (ಮೊಹಿತ್ 41, ಸಮರ್ಥ್ 39, ಸಯನ್ ಮೊಂದಲ್ 26ಕ್ಕೆ2)
ಜಾರ್ಖಂಡ್ 20 ಓವರ್ಗಳಲ್ಲಿ 9 ವಿಕೆಟ್ಗೆ 146 (ಇಶಾಂಕ್ ಜಗ್ಗಿ 57, ಗೌತಮ್ 16, ಕುಲ್ದೀಪ್ ಹೂಡಾ 31ಕ್ಕೆ5)
ಹರ್ಯಾಣ 18 ಓವರ್ಗಳಲ್ಲಿ 4 ವಿಕೆಟ್ಗೆ 149 (ಗುಂತಶ್ವೀರ್ ಸಿಂಗ್ 65, ಅವಿ ಬಾರೋಟ್ 37, ಅಶ್ರಫ್ 13ಕ್ಕೆ1)
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

