ಕ್ರೀಡೆ

ಸೆಮೀಸ್‌ಗೆ ಶ್ರೀಕಾಂತ್

Published On :

ಸಿಂಗಾಪುರ: ಭಾರತದ ಉದಯೋನ್ಮುಖ ಆಟಗಾರ ಕೆ.ಶ್ರೀಕಾಂತ್ ತಮ್ಮ ಅತ್ಯುತ್ತಮ ಪ್ರದರ್ಶನ ಮುಂದುವರಿಸಿದ್ದು, ಸಿಂಗಾಪುರ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಉಪಾಂತ್ಯಕ್ಕೆ ಪ್ರವೇಶಿಸಿದ್ದಾರೆ.
ಶುಕ್ರವಾರ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಶ್ರೀಕಾಂತ್ ತಮ್ಮ ಎದುರಾಳಿ ವಿಶ್ವದ 14ನೇ ರ್ಯಾಂಕಿಂಗ್ ಹಾಂಕಾಂಗ್‌ನ ಯುನ್ ಹು ವಿರುದ್ಧ ಗೆಲವು ದಾಖಲಿಸಿದ್ದಾರೆ.
ಒಂದು ಗಂಟೆ ಮೂರು ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಶ್ರೀಕಾಂತ್ 17-21 21-14 21-19 ಅಂಕಗಳ ಅಂತರದಲ್ಲಿ ಜಯ ಸಾಧಿಸಿದರು. ಈ ಮೂಲಕ ಪಂದ್ಯಾವಳಿಯಲ್ಲಿಉಪಾಂತ್ಯಕ್ಕೆ ಪ್ರವೇಶಿಸಿರುವ ಶ್ರೀಕಾಂತ್, ಅಗ್ರ ಶ್ರೇಯಾಂಕಿತ ಮಲೇಷ್ಯಾದ ಲೀ ಚಾಂಗ್ ವೀ ಅವರನ್ನು ಎದುರಿಸಲಿದ್ದಾರೆ.
ಪಂದ್ಯದ ಆರಂಭದಲ್ಲಿ ಶ್ರೀಕಾಂತ್ ನಿಯಂತ್ರಣ ಸಾಧಿಸಲು ಪರದಾಡಿದ ಪರಿಣಾಮ ಮೊದಲ ಸೆಟ್‌ನಲ್ಲಿ 17-21 ಅಂತರದ ಹಿನ್ನಡೆ ಅನಭವಿಸಿದರು. ನಂತರ ಹೋರಾಟ ನಡೆಸಿದ ಶ್ರೀಕಾಂತ್ ಎರಡನೇ ಸೆಟ್‌ನಲ್ಲಿ ಗಮನಾರ್ಹ ಪ್ರದರ್ಶನ ನೀಡಿ 21-14 ಅಂತರದ ಮುನ್ನಡೆ ಪಡೆದರಲ್ಲದೇ, ಪಂದ್ಯದಲ್ಲಿ ಸಮಬಲ ಸಾಧಿಸಿದರು.
ಸಿಂಧುಗೆ ನಿರಾಸೆ: ಇನ್ನು ಮೂರನೇ ಹಾಗೂ ನಿರ್ಣಾಯಕ ಸೆಟ್‌ನಲ್ಲೂ ಉತ್ತಮ ಪ್ರದರ್ಶನ ತೋರಿದ ಶ್ರೀಕಾಂತ್, ಎದುರಾಳಿಯ ಪ್ರತಿರೋಧದ ನಡುವೆಯೂ 21-19 ಅಂಕಗಳಿಂದ ಮೇಲುಗೈ ಸಾಧಿಸಿ ಗೆಲವಿನ ನಗೆ ಬೀರಿದರು.
ಇನ್ನು ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಭಾರತದ ಭರವಸೆಯ ಆಟಗಾರ್ತಿ ಪಿ.ವಿ ಸಿಂಧು ನಿರಾಸೆ ಅನುಭವಿಸಿದ್ದಾರೆ. ಸಿಂಧು ತಮ್ಮ ಎಂಟರ ಘಟ್ಟದ ಪಂದ್ಯದಲ್ಲಿ ಚೀನಾದ ಯಿಹಾನ್ ವಾಂಗ್ ವಿರುದ್ಧ 19-21, 15-21 ಅಂಕಗಳಿಂದ ಪರಾಭವಗೊಂಡಿದ್ದಾರೆ.
ಪಂದ್ಯದ ಆರಂಭದಿಂದಲೂ ಸಿಂಧು ಮೇಲೆ ನಿಯಂತ್ರಣ ಸಾಧಸಿದ ಯಿಹಾನ್ ವಾಂಗ್, ಯಾವುದೇ ಹಂತದಲ್ಲೂ ಹೆಚ್ಚಿನ ಪ್ರತಿರೋಧ ಎದುರಿಸಲಿಲ್ಲ. ಹಾಗಾಗಿ ಕೇವಲ 37 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಸುಲಭ ಗೆಲವು ದಾಖಲಿಸಿದರು.
ಮೊದಲ ಸೆಟ್‌ನಲ್ಲಿ ಉಭಯ ಆಟಗಾರ್ತಿಯರು ಪರಸ್ಪರ  ಸೆಣೆಸಾಟ ನಡೆಸಿದರಾದರೂ, ಅಂತಿಮವಾಗಿ ವಾಂಗ್ 21-19 ಅಂತರದಲ್ಲಿ ಮೇಲುಗೈ ಸಾಧಿಸಿದರು. ಎರಡನೇ ಸೆಟ್‌ನಲ್ಲಿ ಸಂಪೂರ್ಣ ನಿಯಂತ್ರಣ ಸಾಧಿಸಿ 21-15 ಅಂತರದಲ್ಲಿ ಪಂದ್ಯವನ್ನು ಗೆದ್ದುಕೊಂಡರು.
ಇನ್ನು ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಸಾಯಿಪ್ರಣೀತ್ ತಮ್ಮ ಎದುರಾಳಿ ಚೀನಾದ ಪೆಂಗ್ ಯು ವಿರುದ್ಧ ಪರಾಭವಗೊಂಡಿದ್ದಾರೆ. 39 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಪ್ರಣೀತ್, 15-21, 15-21 ಅಂಕಗಳ ಅಂತರದಲ್ಲಿ ಸೋಲನುಭವಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.