ಕ್ರೀಡೆ

ಮೊಹಮಡನ್‌ಗೆ ಜಯ

Published On :

ಕೋಲ್ಕತಾ: ಸಂಘಟಿತ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾದ ಮೊಹಮಡನ್ ಎಫ್‌ಸಿ ತಂಡ ಐ ಲೀಗ್ ಪಂದ್ಯಾವಳಿಯಲ್ಲಿ ರಂಗದಾಜಿದ್ ಯುನೈಟೆಡ್ ತಂಡದ ವಿರುದ್ಧ ಗೆಲವು ದಾಖಲಿಸುವಲ್ಲಿ ಯಶಸ್ವಿಯಾಗಿದೆ.
ಭಾನುವಾರ ಇಲ್ಲಿನ ಯುವ ಭಾರತಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊಹಮಡನ್ ತಂಡವು 2-1 ಗೋಲುಗಳ ಅಂತರದಲ್ಲಿ ರಂಗದಾಜಿದ್ ತಂಡವನ್ನು ಮಣಿಸಿದೆ.
ಅಂಕಪಟ್ಟಿಯಲ್ಲಿ ಕೆಳ ಕಡಿಮೆ ಸ್ಥಾನದಲ್ಲಿರುವ ಉಭಯ ತಂಡಗಳು ಪ್ರಶಸ್ತಿ ಆಸೆಯನ್ನು ಕೈಬಿಟ್ಟಿತ್ತಾದರೂ, ಪಂದ್ಯಾವಳಿಯನ್ನು ಗೆಲವಿನ ಮೂಲಕ ಕೊನೆಗೊಳಿಸಲು ಹೋರಾಟ ನಡೆಸಿದ್ದವು.
ಪಂದ್ಯದ ಆರಂಭದಲ್ಲಿ ರಂಗದಾಜಿದ್ ತಂಡ ಉತ್ತಮ ಪ್ರದರ್ಶನ ತೋರಿ ಮುನ್ನಡೆ ಪಡೆದಿತ್ತಾದರೂ, ನಂತರದ ಸಮಯದಲ್ಲಿ ನಿಯಂತ್ರಣ ಕಳೆದುಕೊಂಡು ಸೋಲನುಭವಿಸುವಂತಾಯಿತು. ಪಂದ್ಯದ 12ನೇ ನಿಮಿಷದಲ್ಲಿ ರ್ಯಾಂಟಿ ಮಾರ್ಟೀನ್ ರಂಗದಾಜಿದ್ ತಂಡಕ್ಕೆ ಗೋಲು ತಂದುಕೊಡುವಲ್ಲಿ ಯಶಸ್ವಿಯಾದರು.
ನಂತರ ಪಂದ್ಯದ 33ನೇ ನಿಮಿಷದಲ್ಲಿ ಮೊಹಮಡನ್ ತಂಡದ ಪರ ಚುರುಕಿನ ಪ್ದರ್ಶನ ನೀಡಿದ ತಾರೊ ಹಸೆಗವಾ ಗೋಲು ದಾಖಲಿಸಿ, ತಂಡ ಸಮಬಲ ಸಾಧಿಸುವಂತೆ ನೋಡಿಕೊಂಡರು. ಈ ಮೂಲಕ ಪಂದ್ಯದ ಮೊದಲಾರ್ಧದಲ್ಲಿ ಉಭಯ ತಂಡಗಳು 1-1 ಗೋಲುಗಳ ಅಂತರ ಕಾಯ್ದುಕೊಂಡವು.
ನಂತರ ಎರಡನೇ ಅವಧಿಯಲ್ಲಿ ಮತ್ತೆ ಸಂಘಟಿತ ಪ್ರದರ್ಶನ ನೀಡಿದ ಮೊಹಮಡನ್, 64ನೇ ನಿಮಿಷದಲ್ಲಿ ಮತ್ತೊಂದು ಗೋಲು ದಾಖಲಿಸಿತು. ಲೂಸಿಯಾನೊ ಸಬ್ರೊಸಾ ಗಳಿಸಿದ ಗೋಲು ಮೊಹಮಡನ್ ಗೆಲವಿನತ್ತ ಹೆಜ್ಜೆ ಹಾಕಲು ನೆರವಾಯಿತು.
ಈ ಮೂಲಕ ಮೊಹಮಡನ್ ತಂಡ ಆಡಿರುವ 22 ಪಂದ್ಯಗಳಿಂದ 21 ಅಂಕಗಳಿಸಿ 12ನೇ ಸ್ಥಾನ ಪಡೆದುಕೊಂಡಿದ್ದು, ರಂಗದಾಜಿದ್ ತಂಡ 23 ಪಂದ್ಯಗಳಿಂದ 24 ಅಂಕಗಳನ್ನು ದಾಖಲಿಸಿ 10ನೇ ಸ್ಥಾನದಲ್ಲಿದೆ.
ಡ್ರಾಗೆ ಬಗಾನ್ ತೃಪ್ತಿ: ಭಾನುವಾರ ನಡೆದ ಮತ್ತೊಂದು ಪಂದ್ಯದಲ್ಲಿ ಮೊಹನ್ ಬಗಾನ್ ತಂಡ ಯುನೈಟೆಡ್ ಎಸ್‌ಸಿ ವಿರುದ್ಧ ಡ್ರಾಗೆ ತೃಪ್ತಿಪಟ್ಟುಕೊಂಡಿದೆ.
ಕಲ್ಯಾಣಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಉಭಯ ತಂಡಗಳು ಯಾವುದೇ ಗೋಲು ದಾಖಲಿಸಿದೇ ಗೋಲುರಹಿತ ಡ್ರಾಗೆ ತೃಪ್ತಿ ಪಟ್ಟವು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.