ಇತಿಹಾಸದ ಮೆಲುಕು

ಐಪಿಎಲ್ ಟಿ-20 ಕ್ರಿಕೆಟ್ನ ಟೂರ್ನಿಯ ಏಳರ ಹಂಗಾಮ ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ದೇಶದಲ್ಲಿ ಸಾರ್ವತ್ರಿಕ ಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಆರಂಭದ ಒಂದಿಷ್ಟು ಪಂದ್ಯಗಳು ಯುಎಇನಲ್ಲಿನ ಕ್ರೀಡಾಂಗಣಗಳಲ್ಲಿ ನಡೆಯಲಿವೆ. ಬರುವ ಬುಧವಾರ ಅಬುಧಾಬಿಯಲ್ಲಿ (ಏಪ್ರಿಲ್ 16ರಂದು) 2014ರ ಆವೃತ್ತಿಗೆ ಚಾಲನೆ ದೊರೆಯಲಿದೆ. ಐಪಿಎಲ್ ಒಂದು ಕ್ರಾಂತಿಯನ್ನೇ ಮಾಡಿದೆ. ಅನೇಕರ ಭವಿಷ್ಯ ರೂಪಿಸಿದೆ. ಆದರೆ, ಈಗ ಐಪಿಎಲ್ನಲ್ಲಿ ಬೆಟ್ಟಿಂಗ್, ಸ್ಪಾಟ್ ಫಿಕ್ಸಿಂಗ್, ತಂಡದ ಫ್ರಾಂಚೈಸಿಗಳೇ ನೇರವಾಗಿ ಇಂತಹದರಲ್ಲಿ ಭಾಗಿಯಾಗಿರುವ ಪ್ರಕರಣಗಳು ಬೆಳಕಿಗೆ ಬಂದಾಗಿನಿಂದ ಅಸಹ್ಯ ಹುಟ್ಟಿಸಿದೆ. ಈ ಕಳಂಕದಿಂದ ಐಪಿಎಲ್ ಹೊರಬರುವುದು ಅಗತ್ಯ. ಈಗಾಗಲೇ ಫಿಕ್ಸಿಂಗ್ ಕುರಿತಂತೆ ವ್ಯಾಪಕ ತನಿಖೆ ನಡೆಯುತ್ತಿದ್ದು, ಅದು ನಿಷ್ಪಕ್ಷಪಾತವಾಗಿ, ಪಾರದರ್ಶಕತೆಯಿಂದ ನಡೆದು ನಿಜವಾದ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕಿದೆ. ಈಗಾಗಲೇ ಆರು ಆವೃತ್ತಿಗಳು ಕಳೆದು ಹೋಗಿವೆ. ಮುಂದಿನ ಏಳನೇ ಆವೃತ್ತಿಯ ವಿಶ್ಲೇಷಣೆಗೆ ಮುನ್ನ ಇತಿಹಾಸದ ಕುರಿತು ಸ್ವಲ್ಪ ಮೆಲುಕು ಹಾಕುವ ಪ್ರಯತ್ನ ಇಲ್ಲಿದೆ.
ರಾರಾಜಿಸಿದ ಆರ್ಆರ್
ಚೊಚ್ಚಲ ಐಪಿಎಲ್ ಆವೃತ್ತಿಯಲ್ಲಿ ಎಲ್ಲರ ನಿರೀಕ್ಷೆಗೂ ಮೀರಿದ ಪ್ರದರ್ಶನ ತೋರಿದ ರಾಜಸ್ಥಾನ ರಾಯಲ್ಸ್ ತಂಡ ಚಾಂಪಿಯನ್ ಪಟ್ಟಕ್ಕೇರುವ ಮೂಲಕ ಎಲ್ಲರ ಗಮನ ಸೆಳೆದಿತ್ತು. ಲೀಗ್ ಹಂತದಲ್ಲಿ ಆಡಿದ 14 ಪಂದ್ಯಗಳಲ್ಲಿ 11ರಲ್ಲಿ ಗೆಲವು ಹಾಗೂ ಕೇವಲ 3ರಲ್ಲಿ ಸೋಲನುಭವಿಸಿದ್ದ ರಾಜಸ್ಥಾನ ತಂಡ, ಅಗ್ರಸ್ಥಾನ ಪಡೆದಿತ್ತು. ನಂತರ ಸೆಮಿಫೈನಲ್ ಪಂದ್ಯದಲ್ಲಿ ಡೆಲ್ಲಿ ಡೇರ್ಡೆವಿಲ್ಸ್ ವಿರುದ್ಧ ಹಾಗೂ ಫೈನಲ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಗೆಲವು ದಾಖಲಿಸಿ ಚಾಂಪಿಯನ್ ಪಟ್ಟಕ್ಕೇರಿತ್ತು. ಈ ಆವೃತ್ತಿಯಲ್ಲಿ ಆರ್ಆರ್ ತಂಡದ ಆಲ್ರೌಂಡರ್ ಶೇನ್ ವ್ಯಾಟ್ಸನ್ 472 ರನ್ ಹಾಗೂ 17 ವಿಕೆಟ್ ಪಡೆದು ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು.
ಡೆಕ್ಕನ್ 'ಚಾರ್ಜರ್ಸ್'
ಮೊದಲ ಆವೃತ್ತಿಯಲ್ಲಿ ಕಡೇಯ ಸ್ಥಾನ ಪಡೆದಿದ್ದ ಡೆಕ್ಕನ್ ಚಾರ್ಜರ್ಸ್ ತಂಡ, 2ನೇ ಆವೃತ್ತಿಯಲ್ಲಿ ಚಾಂಪಿಯನ್ ಆಗಿದ್ದು ಪಂದ್ಯಾವಳಿಯ ರೋಚಕತೆಗೆ ಸಾಕ್ಷಿಯಾಗಿತ್ತು. ಈ ಆವೃತ್ತಿ ಲೋಕ ಸಭೆ ಚುನಾವಣೆ ಕಾರಣ ದ.ಆಫ್ರಿಕಾಕ್ಕೆ ಸ್ಥಳಾಂತರವಾಗಿತ್ತು. ಲೀಗ್ ಹಂತದಲ್ಲಿ ಆಡಿದ 14 ಪಂದ್ಯಗಳಲ್ಲಿ 7 ಗೆಲವು, 7 ಸೋಲಿನಿಂದ 14 ಅಂಕಗಳನ್ನು ಪಡೆದುಕೊಂಡು ನಾಲ್ಕನೇ ಸ್ಥಾನ ಪಡೆದು ಉಪಾಂತ್ಯಕ್ಕೆ ತಲುಪಿತ್ತು. ನಂತರ ಉಪಾಂತ್ಯದ ಪಂದ್ಯದಲ್ಲಿ ಡೆಲ್ಲಿ ಡೇರ್ಡೆವಿಲ್ಸ್ ವಿರುದ್ಧ ಹಾಗೂ ಫೈನಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ಗೆಲವು ದಾಖಲಿಸಿ ಪ್ರಶಸ್ತಿಗೆ ಮುತ್ತಿಕ್ಕಿತ್ತು. ಪಂದ್ಯಾವಳಿಯಲ್ಲಿ 495 ರನ್ ಗಳಿಸಿದ್ದ ಆ್ಯಡಮ್ ಗಿಲ್ಕ್ರಿಸ್ಟ್ ಸರಣಿ ಶ್ರೇಷ್ಠ ಆಟಗಾರನಾದರು.
ಚೆನ್ನೈ 'ಸೂಪರ್ ಕಿಂಗ್ಸ್'
ಚೊಚ್ಚಲ ಆವೃತ್ತಿಯಲ್ಲಿ ರನ್ನರ್ ಅಪ್ ಆಗಿ ಪ್ರಶಸ್ತಿ ವಂಚಿತವಾಗಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡ, ಮೂರನೇ ಆವೃತ್ತಿಯಲ್ಲಿ ಪ್ರಶಸ್ತಿ ಪಡೆಯಲು ಯಶಸ್ವಿಯಾಯಿತು. ಲೀಗ್ ಸುತ್ತಿನಲ್ಲಿ ಆಡಿದ 14 ಪಂದ್ಯಗಳಿಂದ ಪಂದ್ಯಗಳಲ್ಲಿ 7 ಗೆಲವು, 7 ಸೋಲಿನಿಂದ 14 ಅಂಕಗಳನ್ನು ಪಡೆದಿದ್ದ ಸಿಎಸ್ಕೆ ಮೂರನೇ ಸ್ಥಾನದೊಂದಿಗೆ ನಾಕೌಟ್ ಹಂತಕ್ಕೆ ಪ್ರವೇಶಿಸಿತ್ತು. ನಂತರ ಸೆಮಿಫೈನಲ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಆಗಿದ್ದ ಡೆಕ್ಕನ್ ಚಾರ್ಜರ್ಸ್ ವಿರುದ್ಧ, ಫೈನಲ್ನಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಪ್ರಾಬಲ್ಯ ಮೆರೆದು. ಐಪಿಎಲ್ ಕಿರೀಟ ಧರಿಸಿತ್ತು. ಈ ಆವೃತ್ತಿಯಲ್ಲಿ ಉತ್ತಮ ಬ್ಯಾಟಿಂಗ್ ಮಾಡಿ 618 ರನ್ ದಾಖಲಿಸಿದ್ದ ಸಚಿನ್ ತೆಂಡೂಲ್ಕರ್ ಸರಣಿ ಶ್ರೇಷ್ಠ ಎನಿಸಿದರು.
ಮುಂದುವರಿದ 'ಕಿಂಗ್ಸ್ ದರ್ಬಾರ್'
ನಾಲ್ಕನೇ ಆವೃತ್ತಿಯಲ್ಲಿ ಹಾಲಿ ಚಾಂಪಿಯನ್ ಆಗಿ ಕಣಕ್ಕಿಳಿದ ಸಿಎಸ್ಕೆ, ಪ್ರಶಸ್ತಿ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು. ಅಲ್ಲದೆ ಈ ಟ್ರೋಫಿಯನ್ನು ಎರಡು ಬಾರಿ ಗೆದ್ದ ಮೊದಲ ತಂಡವಾಗಿ ಹೊರಹೊಮ್ಮಿತು. ಲೀಗ್ ಹಂತದಲ್ಲಿ ಆಡಿದ 14 ಪಂದ್ಯಗಳಲ್ಲಿ 9 ಗೆಲವು ಹಾಗೂ 5 ಸೋಲಿನಿಂದ 18 ಅಂಕ ಪಡೆದು ಎರಡನೇ ಸ್ಥಾನಕ್ಕೇರಿತು. ನಂತರ ಉಪಾಂತ್ಯದಲ್ಲಿ ಹಾಗೂ ಫೈನಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ವಿರುದ್ಧ ಗೆಲವು ದಾಖಲಿಸಿ ಸತತ ಎರಡನೇ ಬಾರಿಗೆ ಚಾಂಪಿಯನ್ ಸಿಂಹಾಸನವನ್ನು ಅಲಂಕರಿಸಿತು. ಈ ಆವೃತ್ತಿಯಲ್ಲಿ ಎಲಿಮಿನೇಟರ್ ಪರಿಚಯಿಸಿದ್ದರಿಂದ ಆರ್ಸಿಬಿ ಉಪಾಂತ್ಯದಲ್ಲಿ ಸೋತರೂ ನಂತರ ಫೈನಲ್ಗೆ ಪ್ರವೇಶಿಸಿತ್ತು. ಈ ಆವೃತ್ತಿಯಲ್ಲಿ 608 ರನ್ ಹಾಗೂ 8 ವಿಕೆಟ್ ಪಡೆದಿದ್ದ ಕ್ರಿಸ್ ಗೇಯ್ಲ್ ಸರಣಿ ಶ್ರೇಷ್ಠ ಗೌರವಕ್ಕೆ ಭಾಜನರಾದರು.
ಕೋಲ್ಕತ್ತಾ ನೈಟ್ 'ರೈಡರ್ಸ್'
ಪ್ರಶಸ್ತಿ ಹಿಡಿಯಲು ಮೊದಲ ಆವೃತ್ತಿಯಿಂದ ಪ್ರಯತ್ನ ನಡೆಸುತ್ತಿದ್ದ ಕೆಕೆಆರ್ ತಂಡ ಐದನೇ ಆವೃತ್ತಿಯಲ್ಲಿ ಯಶಸ್ವಿಯಾಯಿತು. ಗೌತಮ್ ಗಂಭೀರ್ ನಾಯಕತ್ವದಲ್ಲಿ ಪ್ರಶಸ್ತಿ ಎತ್ತಿ ಹಿಡಿದಿತ್ತು. ಈ ಬಾರಿ 9 ತಂಡಗಳು ಭಾಗವಹಿಸಿದ್ದರಿಂದ ಪ್ರತಿ ತಂಡ ಲೀಗ್ ಹಂತದಲ್ಲಿ 16 ಪಂದ್ಯವನ್ನಾಡಿತು. ಈ ಹಂತದಲ್ಲಿ ಕೆಕೆಆರ್ 10 ಗೆಲವು, 5 ಸೋಲಿನಿಂದ 21 ಅಂಕಗಳೊಂದಿಗೆ ದ್ವಿತೀಯ ಸ್ಥಾನ ಪಡೆದಿತ್ತು. ನಂತರ ಉಪಾಂತ್ಯದಲ್ಲಿ ಡೆಲ್ಲಿ ಡೇರ್ಡೆವಿಲ್ಸ್ ವಿರುದ್ಧ ಹಾಗೂ ಫೈನಲ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಆಗಿದ್ದ, ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಗೆಲವು ದಾಖಲಿಸಿ ಪ್ರಶಸ್ತಿಗೆ ಮುತ್ತಿಕ್ಕುವಲ್ಲಿ ಯಶಸ್ವಿಯಾಯಿತು. ಪಂದ್ಯಾವಳಿಯಲ್ಲಿ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದ ಸುನಿಲ್ ನಾರಾಯಣ್ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಮುಂಬೈ ಇಂಡಿಯನ್ಸ್ ಆಧಿಪತ್ಯ
ಐಪಿಎಲ್ನಲ್ಲಿ ಬಲಿಷ್ಠ ತಂಡಗಳಲ್ಲಿ ಒಂದಾಗಿರುವ ಮುಂಬೈ ಇಂಡಿಯನ್ಸ್ ತಂಡ ಪ್ರಶಸ್ತಿಯ ದಾಹವನ್ನು ನೀಗಿಸಿಕೊಂಡಿದ್ದು, ಆರನೇ ಆವೃತ್ತಿಯಲ್ಲಿ. ಲೀಗ್ ಹಂತದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದ ಮುಂಬೈ, 16 ಪಂದ್ಯಗಳಿಂದ 11 ಗೆಲವು ಹಾಗೂ 5 ಸೋಲನುಭವಿಸಿ 22 ಅಂಕಗಳನ್ನು ದಾಖಲಿಸಿ ದ್ವಿತೀಯ ಸ್ಥಾನದಲ್ಲಿತ್ತು. ನಂತರ ಮೊದಲ ಕ್ವಾಲಿಫೈಯರ್ನಲ್ಲಿ ಸಿಎಸ್ಕೆ ವಿರುದ್ಧ ಸೋಲನುಭವಿಸಿತ್ತಾದರೂ, ಎಲಿಮಿನೇಟರ್ನಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ಗೆಲವು ದಾಖಲಿಸಿತು. ನಂತರ ಫೈನಲ್ ಪಂದ್ಯದಲ್ಲಿ ಸಿಎಸ್ಕೆ ವಿರುದ್ಧ ಜಯದ ನಗೆ ಬೀರುವ ಮೂಲಕ ಚಾಂಪಿಯನ್ ಪಟ್ಟಕ್ಕೇರಿತು. ಪಂದ್ಯಾವಳಿಯಲ್ಲಿ ಆಲ್ರೌಂಡ್ ಪ್ರದರ್ಶನ ನೀಡಿದ ಶೇನ್ ವ್ಯಾಟ್ಸನ್ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಅಂಕಿ ಅಂಶ
ಅತಿ ಹೆಚ್ಚು ರನ್ ದಾಖಲಿಸಿದ ಆಟಗಾರರು
ಆಟಗಾರ ಪಂದ್ಯ ರನ್ ಸರಾಸರಿ
ಸುರೇಶ್ ರೈನಾ 99 2802 35.02
ರೋಹಿತ್ ಶರ್ಮಾ 97 2513 32.63
ಕ್ರಿಸ್ ಗೇಯ್ಲ್ 59 2512 52.33
ಗೌತಮ್ ಗಂಭೀರ್ 88 2471 31.67
ಸಚಿನ್ ತೆಡೂಲ್ಕರ್ 78 2334 34.83
ಅತಿ ಹೆಚ್ಚು ವಿಕೆಟ್ ಪಡೆದ ಆಟಗಾರರು
ಆಟಗಾರ ಪಂದ್ಯ ವಿಕೆಟ್ ಸರಾಸರಿ
ಲಸಿತ್ ಮಾಲಿಂಗ 73 103 17.95
ಅಮಿತ್ ಮಿಶ್ರಾ 76 95 20.25
ಆರ್.ಪಿ ಸಿಂಗ್ 78 87 25.59
ಪ್ರಗ್ಯಾನ್ ಓಜಾ 79 85 22.69
ವಿನಯ್ ಕುಮಾರ್ 77 84 25.67
ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಆಟಗಾರರು
ಆಟಗಾರ ಪಂದ್ಯ ಸಿಕ್ಸರ್
ಕ್ರಿಸ್ ಗೇಯ್ಲ್ 59 180
ಸುರೇಶ್ ರೈನಾ 99 115
ರೋಹಿತ್ ಶರ್ಮಾ 97 110
ಯೂಸುಫ್ ಪಠಾಣ್ 91 95
ಆ್ಯಡಂ ಗಿಲ್ಕ್ರಿಸ್ಟ್ 80 92
ಗರಿಷ್ಠ ವೈಯಕ್ತಿಕ ಮೊತ್ತ
ಆಟಗಾರ ತಂಡ ಗರಿಷ್ಠ ಎದುರಾಳಿ ವರ್ಷ
ಕ್ರಿಸ್ ಗೇಯ್ಲ್ ಆರ್ಸಿಬಿ 175ಶ್ರೀ ಪುಣೆ 2013
ಬ್ರೆಂಡನ್ ಮೆಕಲಂ ಕೆಕೆಆರ್ 158ಶ್ರೀ ಆರ್ಸಿಬಿ 2008
ಕ್ರಿಸ್ ಗೇಯ್ಲ್ ಆರ್ಸಿಬಿ 128ಶ್ರೀ ಡೇರ್ಡೆವಿಲ್ಸ್ 2012
ಮುರಳಿ ವಿಜಯ್ ಸಿಎಸ್ಕೆ 127ಶ್ರೀ ಆರ್ಆರ್ 2010
ಪೌಲ್ ವಾಲ್ತಟಿ ಪಂಜಾಬ್ 120ಶ್ರೀ ಸಿಎಸ್ಕೆ 2011
ಅತ್ಯುತ್ತಮ ಬೌಲಿಂಗ್ ಇನಿಂಗ್ಸ್
ಆಟಗಾರ ತಂಡ ಶ್ರೇಷ್ಠ ಎದುರಾಳಿ ವರ್ಷ
ಸೊಹೆಲ್ ತನ್ವೀರ್ ಆರ್ಆರ್ 14ಕ್ಕೆ6 ಸಿಎಸ್ಕೆ 2008
ಅನಿಲ್ ಕುಂಬ್ಳೆ ಆರ್ಸಿಬಿ 5ಕ್ಕೆ5 ಆರ್ಆರ್ 2009
ಇಶಾಂತ್ ಶರ್ಮಾ ಡೆಕ್ಕನ್ 12ಕ್ಕೆ5 ಟಸ್ಕರ್ಸ್ 2011
ಲಸಿತ್ ಮಾಲಿಂಗ ಮುಂಬೈ 13ಕ್ಕೆ5 ಡೇರ್ಡೆವಿಲ್ಸ್ 2011
ರವೀಂದ್ರ ಜಡೇಜಾ ಸಿಎಸ್ಕೆ 16ಕ್ಕೆ5 ಡೆಕ್ಕನ್ 2012
ತಂಡಗಳ ಗರಿಷ್ಠ ಮೊತ್ತ
ತಂಡ ಮೊತ್ತ ಎದುರಾಳಿ ವರ್ಷ
ಆರ್ಸಿಬಿ 263/5 ಪುಣೆ ವಾರಿಯರ್ಸ್ 2013
ಸಿಎಸ್ಕೆ 246/5 ರಾಜಸ್ಥಾನ ರಾಯಲ್ಸ್ 2010
ಸಿಎಸ್ಕೆ 240/5 ಪಂಜಾಬ್ 2008
ಕಿಂಗ್ಸ್ ಇಲೆವೆನ್ 232/2 ಆರ್ಸಿಬಿ 2011
ಡೇರ್ಡೆವಿಲ್ಸ್ 231/4 ಪಂಜಾಬ್ 2011
ತಂಡಗಳ ಕನಿಷ್ಠ ಮೊತ್ತ
ತಂಡ ಮೊತ್ತ ಎದುರಾಳಿ ವರ್ಷ ಸ್ಥಳ
ರಾಜಸ್ಥಾನ ರಾಯಲ್ಸ್ 58 ಆರ್ಸಿಬಿ 2009 ಕೇಪ್ಟೌನ್
ಕೆಕೆಆರ್ 67 ಮುಂಬೈ 2008 ಮುಂಬೈ
ಕೊಚ್ಚಿ ಟಸ್ಕರ್ಸ್ 74 ಡೆಕ್ಕನ್ 2011 ಕೊಚ್ಚಿ
ಸಿಎಸ್ಕೆ 79 ಮುಂಬೈ 2013 ಮುಂಬೈ
ಡೇರ್ಡೆವಿಲ್ಸ್ 80 ಸನ್ರೈಸರ್ಸ್ 2013 ಹೈದರಾಬಾದ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


