ಬರೋಡಾ ಚಾಂಪಿಯನ್
ಮುಂಬೈ: ಕೊನೆ ಎಸೆತದವರೆಗೂ ರೋಚಕತೆ ಮೂಡಿಸಿದ್ದ ಪಂದ್ಯದಲ್ಲಿ ಉತ್ತರಪ್ರದೇಶದ ವಿರುದ್ಧ ಜಯ ಸಾಧಿಸಿದ ಬರೋಡಾ ತಂಡ, ಸೈಯದ್ ಮುಷ್ತಾಕ್ ಅಲಿ ಟಿ20 ರಾಷ್ಟ್ರೀಯ ಟ್ರೋಫಿಯನುಢಿ ಮುಡಿಗೇರಿಸಿಕೊಂಡಿತು. ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಅದು ಮೂರು ರನ್ಗಳ ಅಂತರದಿಂದ ಪ್ರಶಸ್ತಿ ತನ್ನದಾಗಿಸಿಕೊಂಡಿತು.
145 ರನ್ಗಳ ಗುರಿಯನ್ನು ಬೆನ್ನಟ್ಟಿದ್ದ, ವೆಂಕಟೇಶ್ ಪ್ರಸಾದ್ ಗರಡಿಯಲ್ಲಿ ಪಳಗಿದ ಉತ್ತರಪ್ರದೇಶ ತಂಡಕ್ಕೆ ಅಂತ್ಯದಲ್ಲಿ 7 ಎಸೆತಗಳಲ್ಲಿ 11 ರನ್ ಬೇಕಾಗಿತ್ತು. ಆದರೆ, ಕ್ರೀಸ್ನಲ್ಲಿದ್ದ ಪ್ರವೀಣ್ ಕುಮಾರ್ (1) ಮತ್ತು ಉಪೇಂದ್ರಾ ಯಾದವ್ (8)ಅವರು ಈ ಮೊತ್ತ ಪೇರಿಸುವಲ್ಲಿ ವೈಫಲ್ಯ ಕಂಡರು. ಹೀಗಾಗಿ ಉತ್ತರಪ್ರದೇಶ ಅಂತಿಮವಾಗಿ 6 ವಿಕೆಟ್ ಕಳೆದುಕೊಂಡು 141 ರನ್ ಗಳಿಸುವ ಮೂಲಕ ಪರಾಭವ ಹೊಂದಿತು.
ಟಾಸ್ ಸೋತರೂ ಬ್ಯಾಟಿಂಗ್ ಅವಕಾಶ ಪಡೆದಿದ್ದ ಬರೋಡಾ ತಂಡ 7 ವಿಕೆಟ್ ನಷ್ಟಕ್ಕೆ 144 ರನ್ ಗಳಿಸಿತ್ತು. ಈ ಮುನ್ನ 2012ರಲ್ಲಿ ಇಲ್ಲಿನ ಬ್ರಬೋರ್ನ್ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಗೆಲ್ಲುವ ಮೂಲಕ ಪ್ರಶಸ್ತಿ ಮುಡಿಗೇರಿಸಿಕೊಂಡಿತ್ತು.
ಸಂಕ್ಷಿಪ್ತ ಸ್ಕೋರ್:
ಬರೋಡಾ 20 ಓವರ್ಗಳಲ್ಲಿ 7 ವಿಕೆಟ್ಗೆ 144
ವಾಘ್ಮೋಡೆ 42, ದೇವಧರ 26
ಪ್ರವೀಣ್ 24ಕ್ಕೆ2, ಮುರ್ತಾಜ್ 22ಕ್ಕೆ2.
ಯಪಿ 20 ಓವರ್ಗಳಲ್ಲಿ 7 ವಿಕೆಟ್ಗೆ 141
ಗುಪ್ತಾ 68, ದ್ವಿವೇದಿ 56
ಲುಕ್ಮಲ್ 31ಕ್ಕೆ3, ಪಟೇಲ್ 25ಕ್ಕೆ1
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

