ಡಚ್ ವಿರುದ್ಧ ಭಾರತ ಡ್ರಾ
ನವದೆಹಲಿ: ಮುಂಬರುವ ವಿಶ್ವಕಪ್ ಪಂದ್ಯಾವಳಿಗೆ ಸಿದ್ಧತೆ ನಡೆಸುವ ಹಿನ್ನೆಲೆಯಲ್ಲಿ ನೆದರ್ರ್ಲೆಂಡ್ ಪ್ರವಾಸ ಕೈಗೊಂಡಿರುವ ಭಾರತ ತಂಡ, ಆತಿಥೇಯ ತಂಡದ ವಿರುದ್ಧದ ಮೊದಲ ಅಭ್ಯಾಸ ಪಂದ್ಯದಲ್ಲಿ ಡ್ರಾ ಸಾಧಿಸಿದೆ.
ಮುಂದಿನ ಮೇ 31ರಿಂದ ಜೂ.15ರವರೆಗೆ ನೆದರ್ರ್ಲೆಂಡ್ನಲ್ಲಿ ವಿಶ್ವಕಪ್ ಪಂದ್ಯಾವಳಿ ನಡೆಯಲಿದ್ದು, ಈ ಕಾರಣ ಭಾರತ ತಂಡ ಅಲ್ಲಿನ ವಾತಾವರಣಕ್ಕೆ ಹಾಗೂ ಸವಾಲುಗಳಿಗೆ ಹೊಂದಿಕೊಳ್ಳುವ ಸಲುವಾಗಿ ಅಭ್ಯಾಸ ಪ್ರವಾಸ ಕೈಗೊಂಡಿದೆ.
ಮಂಗಳವಾರ ನಡೆದ ನೆದರ್ಲೆಂಡ್ನ ಎಚ್ಜಿಸಿ ಹಾಕಿ ಕ್ಲಬ್ ವಿರುದ್ಧದ ಪಂದ್ಯದಲ್ಲಿ ಭಾರತ ತಂಡ 3-3 ಗೋಲುಗಳ ಅಂತರದಲ್ಲಿ ಡ್ರಾ ಸಾಧಿಸಿತು.
ಎಚ್ಜಿಸಿ ತಂಡ 6ನೇ ನಿಮಿಷದಲ್ಲಿ ಗೋಲು ದಾಖಲಿಸುವ ಮೂಲಕ ಆರಂಭಿಕ ಮುನ್ನಡೆ ಸಾಧಿಸಿತು. ನಂತರ 24ನೇ ನಿಮಿಷದಲ್ಲಿ ಮತ್ತೊಂದು ಗೋಲು ದಾಖಲಿಸಿದ ಎಚ್ಜಿಸಿ ಪಂದ್ಯದ ಮೊದಲಾರ್ಧದ ವೇಳೆಗೆ 2-0 ಅಂತರದ ಮುನ್ನಡೆ ಪಡೆಯಿತು.
ನಂತರ ಎರಡನೇ ಅವಧಿಯಲ್ಲಿ ಭಾರತ ತಂಡ ಅಮೋಘ ರೀತಿಯಲ್ಲಿ ಹೋರಾಟ ನಡೆಸಿತು. ಹಾಗಾಗಿ ಭಾರತ ತಂಡ ಸೋಲಿನ ಅಪಾಯದಿಂದ ಪಾರಾಯಿತು.
ಡ್ರ್ಯಾಗ್ ಫ್ಲಿಕರ್ ರುಪಿಂದರ್ ಪಾಲ್ ಸಿಂಗ್, 50ನೇ ನಿಮಿಷದಲ್ಲಿ ಸಿಕ್ಕ ಪೆನಾಲ್ಟಿ ಕಾರ್ನರ್ ಅವಕಾಶವನ್ನು ಗೋಲಾಗಿ ಪರಿವರ್ತಿಸುವಲ್ಲಿ ಯಶಸ್ವಿಯಾದರು. ನಂತರ 56ನೇ ನಿಮಿಷದಲ್ಲಿ ನಿಕಿನ್ ತಿಮ್ಮಯ್ಯ ಭಾರತಕ್ಕೆ ಮತ್ತೊಂದು ಗೋಲು ದಾಖಲಿಸುವಮೂಲಕ ತಂಡದ ಅಂತರವನ್ನು ಸಮಗೊಳಿಸಿದರು.
ನಂತರ 63ನೇ ನಿಮಿಷದಲ್ಲಿ ಗೋಲು ದಾಖಲಿಸಿದ ವಿ.ಆರ್ ರಘುನಾಥ್, ಪೆನಾಲ್ಟಿ ಕಾರ್ನರ್ ಅವಕಾಶವನ್ನು ಗೋಲಾಗಿ ಪರಿವರ್ತಿಸಿದರು. ಹಾಗಾಗಿ ಭಾರತ ತಂಡ ಸತತ ಮೂರು ಗೋಲುಗಳಿಂದ 3-2 ಅಂತರದ ಮುನ್ನಡೆ ಕಾಯ್ದುಕೊಂಡಿತು.
ನಂತರ 64ನೇ ನಿಮಿಷದಲ್ಲಿ ಎಚ್ಜಿಸಿ ತಂಡ ಗೋಲು ದಾಖಲಿಸುವ ಮೂಲಕ 3-3 ಗೋಲುಗಳ ಅಂತರದಲ್ಲಿ ಡ್ರಾ ಸಾಧಿಸಿದರು.
ಇನ್ನು ಭಾರತದ ಗೋಲ್ಕೀಪರ್ ಶ್ರೀಜೇಶ್ ಅತ್ಯುತ್ತಮ ಪ್ರದರ್ಶನ ನೀಡಿದರು. ಡಚ್ ಪಡೆ 10 ಪೆನಾಲ್ಟಿ ಅವಕಾಶ ಪಡೆಯಿತಾದರೂ, ಅದರಲ್ಲಿ ಕೇವಲ 2ರಲ್ಲಿ ಗೋಲು ದಾಖಲಿಸಲು ಯಶಸ್ವಿಯಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

