ಕ್ರೀಡೆ

ಕೆಕೆಆರ್‌ಗೆ ಮನೀಷ್ ಜಾಕ್

ಕೆಕೆಆರ್‌ಗೆ ಮನೀಷ್ ಜಾಕ್
Published On :

ಅಬುಧಾಬಿ: ಕೋಲ್ಕತಾ ನೈಟ್ ರೈಡರ್ಸ್ ಬೌಲರ್‌ಗಳ ದಾಳಿಗೆ ಮುಂಬೈ ಇಂಡಿಯನ್ಸ್ ತಂಡದ ಬ್ಯಾಟ್ಸ್‌ಮನ್‌ಗಳು ಪ್ರತ್ಯುತ್ತರ ನೀಡಲು ಪರದಾಡಿದ ಪರಿಣಾಮ ಹಾಲಿ ಚಾಂಪಿಯನ್ನರು ಐಪಿಎಲ್ ಏಳನೇ ಆವೃತ್ತಿಯ ಮೊದಲ ಪಂದ್ಯದಲ್ಲಿ ಸೋಲನುಭವಿಸಿದ್ದಾರೆ.
ಬುಧವಾರ ನಡೆದ ಉದ್ಘಾಟನಾ ಪಂದ್ಯದಲ್ಲಿ ಕೆಕೆಆರ್ ತಂಡ 41 ರನ್‌ಗಳ ಅಂತರದಿಂದ ಮುಂಬೈ ಇಂಡಿಯನ್ಸ್ ತಂಡವನ್ನು ಮಣಿಸಿತು. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಕೆಕೆಆರ್ ಮನೀಷ್ ಪಾಂಡೆ ಹಾಗೂ ಜಾಕ್ ಕಾಲಿಸ್ ಅವರ ಜವಾಬ್ದಾರಿಯುತ ಬ್ಯಾಟಿಂಗ್ ನೆರವಿನಿಂದ 20 ಓವರ್‌ಗಳಲ್ಲಿ 5 ವಿಕೆಟ್‌ಗೆ 163 ಸ್ಪರ್ಧಾತ್ಮಕ ಮೊತ್ತ ಪೇರಿಸಿತು. ಈ ಮೊತ್ತವನ್ನು ಬೆನ್ನಟ್ಟಿದ ಮುಂಬೈ ತಂಡ 20 ಓವರ್‌ಗಳಲ್ಲಿ7 ವಿಕೆಟ್ ಕಳೆದುಕೊಂಡು ಕೇವಲ 122ರನ್‌ಗಳನ್ನಷ್ಟೇ ಗಳಿಸಲು ಶಕ್ತವಾಯಿತು.
ಈ ಗೆಲವಿನೊಂದಿಗೆ ಕೆಕೆಆರ್ ತಂಡ ಪಂದ್ಯಾವಳಿಯಲ್ಲಿ ಶುಭಾರಂಭ ಮಾಡಿದರೆ, ಹಾಲಿ ಚಾಂಪಿಯನ್ ಮುಂಬೈ ತಂಡ ಸೋಲಿನ ಕಹಿ ಅನುಭವಿಸಿತು.
ಮಿಂಚಿದ ಮನೀಷ್, ಕಾಲಿಸ್: ಮೊದಲು ಬ್ಯಾಟಿಂಗ್ ಮಾಡಲು ಕಣಕ್ಕಿಳಿದ ಕೆಕೆಆರ್ ತಂಡಕ್ಕೆ ಆರಂಭದಲ್ಲೇ ವಿಘ್ನ ಎದುರಾಯಿತು. ನಾಯಕ ಗಂಭೀರ್ ವಿಕೆಟ್ ಕಳೆದುಕೊಂಡ ಕೆಕೆಆರ್ ಸಂಕಷ್ಟಕ್ಕೆ ಸಿಲುಕಿತು.
ಆಗ ಜತೆಯಾದ ಜಾಕ್ ಕಾಲಿಸ್ (72ರನ್, 46 ಎಸೆತ, 5 ಬೌಂಡರಿ, 3 ಸಿಕ್ಸರ್) ಹಾಗೂ ಮನೀಷ್ ಪಾಂಡೆ (64 ರನ್, 53 ಎಸೆತ, 6 ಬೌಂಡರಿ ಹಾಗೂ 2 ಸಿಕ್ಸರ್) ತಂಡವನ್ನು ಸುಭದ್ರ ಸ್ಥಿತಿಯತ್ತ ಕೊಂಡೋಯ್ದರು. ಈ ಜೋಡಿ ಎರಡನೇ ವಿಕೆಟ್‌ಗೆ 131 ರನ್‌ಗಳ ಜತೆಯಾಟ ನೀಡುವ ಮೂಲಕ ಪಂದ್ಯದ ಮೇಲೆ ನಿಯಂತ್ರಣ ಸಾಧಿಸಿದರು. ಇನ್ನು ಮುಂಬೈ ತಂಡದ ಪರ ಮಾರಕ ಬೌಲಿಂಗ್ ದಾಳಿ ನಡೆಸಿದ ಲಸಿತ್ ಮಾಲಿಂಗ 4 ಓವರ್‌ಗಳಲ್ಲಿ 23 ರನ್‌ಗಳಿಗೆ 4 ವಿಕೆಟ್ ಪಡೆದರು.
ಮುಗ್ಗರಿಸಿದ ಮುಂಬೈ: ಕೆಕೆಆರ್ ನೀಡಿದ ಸ್ಪರ್ಧಾತ್ಮಕ ಗುರಿಯನ್ನು ಬೆನ್ನಟ್ಟಿದ ಮುಂಬೈ ಇಂಡಿಯನ್ಸ್ ತಂಡ ಇನಿಂಗ್ಸ್‌ನ ಯಾವುದೇ ಹಂತದಲ್ಲೂ ನಿಯಂತ್ರಣ ಕಾಣಲಿಲ್ಲ. ನಿಗದಿತ ಅಂತರದಲ್ಲಿ ವಿಕೆಟ್ ಕಳೆದುಕೊಂಡ ಪರಿಣಾಮ ಮುಂಬೈ ತನ್ನ ಹಾದಿಯಲ್ಲಿ ಮುಗ್ಗರಿಸಿತು. ಆರಂಭದಲ್ಲೇ ಮೈಕ್ ಹಸ್ಸಿ ವಿಕೆಟ್ ಕಳೆದುಕೊಂಡ ಮುಂಬೈ ನಂತರ ಚೇತರಿಸಿಕೊಳ್ಳಲೇ ಇಲ್ಲ. ಆದಿತ್ಯ ತಾರೆ (24), ಅಂಬಟಿ ರಾಯುಡು (48) ಹಾಗೂ ರೋಹಿತ್ ಶರ್ಮಾ (27) ಸ್ವಲ್ಪ ಹೊತ್ತು ಕ್ರಿಸ್‌ನಲ್ಲಿ ನಿಂತು ಉತ್ತಮ ಆರಂಭ ಪಡೆದರಾದರೂ, ತಂಡವನ್ನು ಗೆಲವಿನ ದಡ ಸೇರಿಸಲು ಸಾಧ್ಯವಾಗಲಿಲ್ಲ. ಉಳಿದಂತೆ ಯಾವುದೇ ಬ್ಯಾಟ್ಸ್‌ಮನ್ ಪ್ರತಿರೋಧ ತೋರದೆ ಪೆವಿಲಿಯನ್ ಪರೇಡ್ ನಡೆಸಿದರು. ಇನ್ನು ಕೆಕೆಆರ್ ತಂಡದ ಪರ ಅದ್ಭುತ ದಾಳಿ ನಡೆಸಿದ ಸುನಿಲ್ ನಾರಾಯಣ್ 4 ಓವರ್‌ಗಳಲ್ಲಿ 20 ರನ್‌ಗಳಿಗೆ 4 ವಿಕೆಟ್ ಪಡೆದು ತಂಡದ ಗೆಲವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

ಸ್ಕೋರ್ ವಿವರ
ಕೋಲ್ಕತಾ ನೈಟ್ ರೈಡರ್ಸ್ 20

ಓವರ್‌ಗಳಲ್ಲಿ 5 ವಿಕೆಟ್‌ಗೆ 163
ಗೌತಮ್ ಗಂಭೀರ್     ಬಿ ಮಾಲಿಂಗ     0 (8)
ಜಾಕ್ ಕಾಲೀಸ್     ಸಿ ಆ್ಯಂಡರ್ಸನ್ ಬಿ ಮಾಲಿಂಗ     72 (46)
ಮನೀಷ್ ಪಾಂಡೆ     ಬಿ ಮಾಲಿಂಗ     64 (53)
ರಾಬಿನ್ ಉತ್ತಪ್ಪ     ಸಿ ಶರ್ಮಾ ಬಿ ಖಾನ್     1 (2)
ಯೂಸುಫ್ ಪಠಾಣ್     ಅಜೇಯ     4 (4)
ಶಕಿಬ್ ಅಲ್ ಹಸನ್     ಸಿ ಶರ್ಮಾ ಬಿ ಮಾಲಿಂಗ     1 (2)
ಸೂರ್ಯ ಕುಮಾರ್     ಅಜೇಯ    13 (5)
ಇತರೆ: (ಲೆಗ್‌ಬೈ-4, ವೈಡ್-4) 8.
ವಿಕೆಟ್ ಪತನ: 1-4, 2-135, 3-144, 4-145, 5-149.
ಬೌಲಿಂಗ್ ವಿವರ:

ಜಹೀರ್ ಖಾನ್     4-0-23-1
ಲಸಿತ್ ಮಾಲಿಂಗ     4-0-23-4
ಕೋರೆ ಆ್ಯಂಡರ್ಸನ್     3-0-33-0
ಪ್ರಗ್ಯಾನ್ ಓಜಾ     4-0-36-0
ಹರ್ಭಜನ್ ಸಿಂಗ್     3-0-25-0     
ಕೀರನ್ ಪೊಲಾರ್ಡ್     2-0-19-0     
ಮುಂಬೈ ಇಂಡಿಯನ್ಸ್ 20
ಓವರ್‌ಗಳಲ್ಲಿ 7 ವಿಕೆಟ್‌ಗೆ 122
ಮೈಕ್ ಹಸ್ಸಿ     ಬಿ ನಾರಾಯಣ್     3 (13)
ಆದಿತ್ಯ ತಾರೆ     ಸಿಮತ್ತುಬಿ ಶಕಿಬ್     24 (22)
ರಾಯುಡು     ಸ್ಟಂಪ್ ಉತ್ತಪ್ಪ ಬಿ ನಾರಾಯಣ್     48 (40)
ರೋಹಿತ್ ಶರ್ಮಾ     ಸಿ ಕಾಲಿಸ್ ಬಿ ಮಾರ್ಕೆಲ್     27 (20)
ಕೀರನ್ ಪೊಲಾರ್ಡ್     ಅಜೇಯ     6 (8)
ಆ್ಯಂಡರ್‌ಸನ್     ಬಿ ನಾರಾಯಣ್     2 (8)
ಹರ್ಭಜನ್ ಸಿಂಗ್     ಬಿ ನಾರಾಯಣ್     0 (2)
ಗೌತಮ್     ಸ್ಟಂಪ್ ಉತ್ತಪ್ಪ ಬಿ ಚಾವ್ಲಾ     7 (7)
ಇತರೆ (ಬೈ 4, ವೈಡ್ 1)
ವಿಕೆಟ್ ಪತನ: 1-24, 2-40, 3-101, 4-106, 5-113, 6-113, 7-122
ಬೌಲಿಂಗ್ ವಿವರ:
ವಿನಯ್ ಕುಮಾರ್     2-0-15-0
ಮಾರ್ನ್ ಮಾರ್ಕೆಲ್     4-0-16-1
ಸುನಿಲ್ ನಾರಾಯಣ್     4-0-20-4
ಶಕಿಬ್ ಅಲ್ ಹಸನ್     4-0-29-1
ಜಾಕ್ ಕಾಲಿಸ್     3-0-23-0
ಪಿಯೂಷ್ ಚಾವ್ಲಾ     3-0-15-1

ಪಂದ್ಯಶ್ರೇಷ್ಠ: ಜಾಕ್ ಕಾಲಿಸ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.