ಫಿಕ್ಸಿಂಗ್ ತನಿಖೆ: ಬಿಸಿಸಿಐಗೆ ಸುಪ್ರೀಂ ಸೂಚನೆ
ನವದೆಹಲಿ: ಮತ್ತೆ ಬಿಸಿಸಿಐಗೆ ಸೇರ್ಪಡೆಯಾಗಲು ಕೋರಿದ್ದ ಶ್ರೀನಿವಾಸನ್ ಅವರ ಅರ್ಜಿಯನ್ನು ನಿರಾಕರಿಸಿರುವ ಸುಪ್ರೀಂ ಕೋರ್ಟ್, ಶ್ರೀನಿವಾಸನ್ ಸೇರಿದಂತೆ 13 ಮಂದಿಯ ಹೆಸರು ಮುದ್ಗಲ್ ಸಮಿತಿ ನೀಡಿದ್ದ ಲಕೋಟೆಯಲ್ಲಿ ಇದ್ದು, ಈ ಎಲ್ಲರ ವಿರುದ್ಧ ತನಿಖೆ ನಡಿಸುವಂತೆ ಬಿಸಿಸಿಐಗೆ ಸೂಚಿಸಿದೆ.
ಬುಧವಾರದ ವಿಚಾರಣೆಯ ವೇಳೆ ಮುದ್ಗಲ್ ಸಮಿತಿ ನೀಡಿದ್ದ ರಹಸ್ಯ ಲಕೋಟೆಯಲ್ಲಿನ ಕೆಲವು ಮಾಹಿತಿಗಳನ್ನು ಬಹಿರಂಗಪಡಿಸಿದ್ದು, ಲಕೋಟೆಯಲ್ಲಿ ಶ್ರೀನಿವಾಸನ್ ಜತೆಗೆ 12 ಮಂದಿ ಆಟಗಾರರ ಮೇಲೆ ಆರೋಪಗಳಿವೆ. ಅದರಲ್ಲಿ ಶ್ರೀನಿವಾಸನ್ ಅವರದ್ದು, 13ನೇ ಹೆಸರಾಗಿದ್ದು, ಅವರ ಮೇಲೆ 12 ಆರೋಪಗಳು ಕೇಳಿಬಂದಿವೆ. ಈ ಆರೋಪಗಳನ್ನು ಶ್ರೀನಿವಾಸನ್ ಅವರು ಈ ಹಿಂದೆ ಗಂಭೀರವಾಗಿ ಪರಿಗಣಿಸಿರಲಿಲ್ಲ ಎಂದು ತಿಳಿಸಿದ್ದಾರೆ.
ಮಂಗಳವಾರ ಶ್ರೀನಿವಾಸನ್ ತವು ಮತ್ತೆ ಬಿಸಿಸಿಐಗೆ ಮರಳಲು ಅವಕಾಶ ನೀಡುವಂತೆ ಕೋರಿದ್ದರು. ಆದರೆ ಬಿಸಿಸಿಐನಲ್ಲಿ ಯಾವುದಾದರೂ ಅಧಿಕಾರ ನೀಡಿದರೆ ಮತ್ತೆ ನ್ಯಾಯಸಮ್ಮತ ತನಿಖೆಗೆ ಧಕ್ಕೆಯಾಗಬಹುದು ಎಂದು ಹೇಳಿದ್ದು, ಮುಂದಿನ ವಿಚಾರಣೆಯನ್ನು ಏ.22ಕ್ಕೆ ಮುಂದೂಡಿತು.
ಮುಂದಿನ ವಿಚಾರಣೆ ವೇಳೆಗೆ ಬಿಸಿಸಿಐ ವಿಶೇಷ ತನಿಖಾ ತಂಡ ಹಾಗೂ ಅದರ ಸರಿಯಾದ ಕ್ರಮಗಳ ರೂಪುರೇಷೆಗಳನ್ನು ಸಿದ್ಧಪಡಿಸುವಂತೆ ತಿಳಿಸಿದೆ.
ಸುಪ್ರೀಂ ಕೋರ್ಟ್ ಯಾವುದೇ ವೈಯಕ್ತಿಕ ತನಿಖೆಯನ್ನು ಸೂಚಿಸದಿದ್ದರೂ, ನಾವು ವಿಶೇಷ ತನಿಖಾ ತಂಡಕ್ಕೆ ಹೆಚ್ಚಿನ ಮಹತ್ವ ನೀಡುತ್ತಿಲ್ಲ. ಏಕೆಂದರೆ, ಈ ತನಿಖೆ ವೇಳೆ ಕ್ರಿಕೆಟ್ ಕ್ರೀಡೆಗೆ ಸಿಬಿಐ, ಪೊಲೀಸ್ ಹಾಗೂ ಮಾಧ್ಯಮಗಳು ಕೆಸರೆರೆಚುವುದಕ್ಕೆ ಅವಕಾಶ ನೀಡಬಾರದು ಎಂದು ವಿಚಾರಣೆ ನಡೆಸುತ್ತಿರುವ ನ್ಯಾ.ಪಟ್ನಾಯಕ್ ತಿಳಿಸಿದರು.
ಕ್ರಿಕೆಟ್‌ನಲ್ಲಿ ಹೆಚ್ಚು ಖ್ಯಾತಿ ಪಡೆದಿರುವ ಆಟಗಾರರ ಮೇಲೆ ಅನುಮಾನ ಮೂಡುತ್ತಿದೆ. ಹೀಗೆ ದೇಶವನ್ನು ಪ್ರತಿನಿಧಿಸುವ ಹಾಗೂ ಭಾರತೀಯ ಕ್ರಿಕೆಟ್‌ನಲ್ಲಿ ಭವಿಷ್ಯದಲ್ಲಿ ಪ್ರತಿನಿಧಿಸುವ ಆಟಗಾರರ ಮೇಲೆ ಕಪ್ಪು ಚುಕ್ಕೆ ಬೀಳಬಾರದು. ಕ್ರಿಕೆಟ್ ಅನ್ನು ಸ್ವಚ್ಛಗೊಳಿಸಬೇಕಿದೆ ಅದೇರೀತಿ ಸಾಂಸ್ಥಿಕ ಸ್ವಾಯತತ್ತೆಯನ್ನು ಕಾಪಾಡಬೇಕಾಗಿದೆ ಎಂದು ತಿಳಿಸಿದೆ.
ಇನ್ನು ಐಪಿಎಲ್‌ನ ಮುಖ್ಯ ಕಾರ್ಯಾನಿರ್ವಾಹಕ ಅಧಿಕಾರಿ ಸುಂದರ್ ರಾಮನ್ ಅವರನ್ನು ಮುಂದುವರಿಸಲಾಗಿದೆ.
ಇನ್ನು ಏ.22ರಂದು ನಡೆಯಲಿರುವ ವಿಚಾರಣೆ ವೇಳೆ ಐಪಿಎಲ್ ಭ್ರಷ್ಟಾಚಾರ ವಿಚಾರಣೆಯಲ್ಲಿ ಮೂಡಿರುವ ಕೆಲವು ಗೊಂದಲಗಳ ಬಗ್ಗೆಯೂ ವಿಚಾರಣೆ ನಡೆಸಲಾಗುವುದು. ಮುಂದಿನ ವಿಚಾರಣೆ ವೇಳೆ ಶ್ರೀನಿವಾಸನ್ ಅವರು ಐಪಿಎಲ್‌ನಲ್ಲಿ ತಂಡವನ್ನು ಹೊಂದಲು ಇರುವ ಅವಕಾಶವನ್ನು ನೀಡಿರುವ ಬಿಸಿಸಿಐನ ಸಂವಿಧಾನಿಕ ತಿದ್ದುಪಡಿಯನ್ನು ಪರಿಶೀಲಿಸಲಾಗುವುದು.
ಅಲ್ಲದೆ ಶ್ರೀನಿವ ಅವರನ್ನು ಐಸಿಸಿ ಸಭೆಯಲ್ಲಿ ಬಿಸಿಸಿಐ ಪ್ರತಿನಿಧಿಯಾಗಿ ತೆರಳಿದ ಕುರಿತ ಅಂಶವನ್ನು ಪರೀಶೀಲಿಸಲಾಗುವುದು ಎಂದು ತಿಳಿಸಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

