ಭಾರತಕ್ಕೆ ಮೊದಲ ಸೋಲು
ನವದೆಹಲಿ: ಭಾರತದ ಆಟಗಾರರು ಯೂರೋಪಿಯನ್ ಹಾಕಿ ಪ್ರವಾಸದಲ್ಲಿ ಮೊದಲ ಸೋಲು ಕಂಡಿದ್ದಾರೆ. ನೆದರ್ಲ್ಯಾಂಡ್ನ ನಾರ್ಡೆನ್ನಲ್ಲಿ ನಡೆದ ತಮ್ಮ ಮೂರನೇ ಪಂದ್ಯದಲ್ಲಿ ಭಾರತದ ಆಟಗಾರರು 1-2 ಗೋಲುಗಳಿಂದ ಬೆಲ್ಜಿಯಂ ಎದುರು ಸೋಲನುಭವಿಸಿದರು.
ಪ್ರವಾಸದ ಮೊದಲ ಪಂದ್ಯದಲ್ಲಿ ಡಚ್ನ ರಾಷ್ಟ್ರೀಯ ಕ್ಲಬ್ ತಂಡವಾದ ಲೀಡೆನ್ ಹಾಕಿ ಕ್ಲಬ್ ವಿರುದ್ಧ 7-0 ಗೋಲುಗಳಿಂದ ಜಯಗಳಿಸಿ ಭಾರತ ಶುಭಾರಂಭ ಮಾಡಿತ್ತು.
ಆದರೆ, ಎರಡನೇ ಪಂದ್ಯದಲ್ಲಿ ಎಚ್ಜಿಸಿ ಹಾಕಿ ಕ್ಲಬ್ ವಿರುದ್ಧ 3-3 ಗೋಲುಗಳಿಂದ ಡ್ರಾ ಸಾಧಿಸಿದ ಭಾರತದ ಆಟಗಾರರು, ಈಗ ಮೂರನೇ ಪಂದ್ಯದಲ್ಲಿ ಮೊದಲ ಸೋಲು ಉಣ್ಣುವಂತಾಗಿದೆ.
ನೆದರ್ಲ್ಯಾಂಡ್ನ ಹಾಗ್ನಲ್ಲಿ ಮೇ 31ರಿಂದ ಜೂನ್ 15ರ ವರೆಗೆ ನಡೆಯಲಿರುವ ಎಫ್ಐಎಚ್ ವಿಶ್ವಕಪ್ 2014ರ ಪಂದ್ಯಾವಳಿಗಾಗಿ ಸಿದ್ಧತೆ ಮಾಡಿಕೊಳ್ಳಲು ಭಾರತ ಯೂರೋಪಿಯನ್ ಪ್ರವಾಸ ಕೈಗೊಂಡಿದೆ.
ಕಳೆದ ರಾತ್ರಿ ಬೆಲ್ಜಿಯಂ ವಿರುದ್ಧದ ಪಂದ್ಯದಲ್ಲಿ ಭಾರತೀಯರು ಉತ್ತಮ ಪ್ರದರ್ಶನ ನೀಡಿದರಾದರೂ ಗೆಲವು ದಕ್ಕಿಸಿಕೊಳ್ಳಲು ಸಾಧ್ಯವಾಗಲಿಲ್ಲ. ವಿಜೇತ ಬೆಲ್ಜಿಯಂ ಪರ ಟಾಮ್ ಬೂನ್ 17ನೇ ನಿಮಿಷ ಮತ್ತು 59ನೇ ನಿಮಿಷಗಳಲ್ಲಿ ಗೋಲು ದಾಖಲಿಸಿ ತಮ್ಮ ತಂಡದ ವಿಜಯೋತ್ಸವಕ್ಕೆ ಕಾರಣರಾದರು.
ಭಾರತದ ಪರ ಉಪನಾಯಕ ರೂಪಿಂದರ್ ಪಾಲ್ ಸಿಂಗ್ 58ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್ ಅವಕಾಶದಲ್ಲಿ ಗೋಲು ಗಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

