ಕ್ರೀಡೆ

ಸೆಮೀಸ್‌ಗೆ ಅರವಿಂದ್ ಭಟ್

Published On :

ಆಕ್ಲೆಂಡ್: ಭಾರತದ ಅರವಿಂದ್ ಭಟ್ ಸ್ಕೈಸಿಟ್ ನ್ಯೂಜಿಲೆಂಡ್ ಓಪನ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದಾರೆ.
ಇತ್ತೀಚೆಗಷ್ಟೇ ಜರ್ಮನ್ ಓಪನ್ ಗ್ರ್ಯಾನ್ ಪ್ರಿ ಗೋಲ್ಡ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಪ್ರಶಸ್ತಿ ಗೆದ್ದುಕೊಂಡಿದ್ದ ಕರ್ನಾಟಕದ ಆಟಗಾರ ಅರವಿಂದ್ ಭಟ್, ಸಿಂಗಲ್ಸ್ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಮಲೇಷಿಯಾದ ಚನ್ ಸೀಯಿಂಗ್ ಟಾನ್ ಅವರನ್ನು 22-20, 9-21, 21-18 ಅಂಕಗಳಿಂದ ಸೋಲಿಸಿದರು.
ಐದನೇ ಶ್ರೇಯಾಂಕಿತ ಬೆಂಗಳೂರಿನ ಹುಡುಗ ಭಟ್, ತಮ್ಮ ಎರಡೂ ಗೇಮ್‌ಗಳನ್ನು ಜಯಿಸಲು ಭಾರಿ ಬೆವರು ಸುರಿಸಬೇಕಾಯಿತು. ಮಲೇಷಿಯಾದ ಮೂರನೇ ಶ್ರೇಯಾಂಕಿತ ಆಟಗಾರ ಉತ್ತಮ ಸವಾಲುಗಳನ್ನೇ ಒಡ್ಡಿದ್ದರು. ಆದರೂ, ತಮ್ಮೆಲ್ಲ ಅನುಭವ ಪಣಕ್ಕಿಟ್ಟು ಆಡಿದ ಭಟ್ ಅಂತಿಮವಾಗಿ ಗೆಲವು ದಾಖಲಿಸಿ ನಾಲ್ಕರಘಟ್ಟ ಪ್ರವೇಶಿಸಿದರು.
ಸೆಮಿಫೈನಲ್ ಸುತ್ತಿನಲ್ಲಿ ಭಾರತೀಯ ಆಟಗಾರನಿಗೆ ನಂಬರ್ ಆಟಗಾರ ತೈಪೇನ ಚೆನ್ ಹಾವೊ ಸೂ ಅವರ ಕಠಿಣ ಸವಾಲು ಎದುರಾಗಲಿದೆ. ತೈಪೇ ಆಟಗಾರ ತಮ್ಮ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ತಮ್ಮದೇ ದೇಶದ ಏಳನೇ ಶ್ರೇಯಾಂಕಿತ ಚಿಯಾ ಶಿನ್ ವಾನ್ ಅವರಿಗೆ 21-19, 18-21, 21-13 ಅಂಕಗಳಿಂದ ಸೋಲುಣಿಸಿ ಮುನ್ನಡೆದರು.
ಮತ್ತೆರಡು ಕ್ವಾರ್ಟರ್‌ಫೈನಲ್ ಪಂದ್ಯಗಳಲ್ಲಿ ಆರನೇ ಶ್ರೇಯಾಂಕಿತ ತೈಪೇನ ಜೂ ವೀ ವಾಂಗ್ ಮತ್ತು ಮಲೇಷಿಯಾದ ಒಂಬತ್ತನೇ ಶ್ರೇಯಾಂಕಿತ ಮೊಹ್ಮದ್ ಆರೀಫ್ ಅಬ್ದುಲ್ ಲತೀಫ್ ಜಯಗಳಿಸಿ ಸೆಮಿಫೈನಲ್ ಪ್ರವೇಶಿಸಿದ್ದಾರೆ.
ಜೂ ವಿ ವಾಂಗ್ ಅವರು 21-7, 21-14ರಿಂದ 16ನೇ ಶ್ರೇಯಾಂಕಿತ ಮಲೇಷಿಯಾದ ಚಿಯನ್ ಶಿಯರಂಗ್ ಚಿಯಾಂಗ್‌ರನ್ನು ಸೋಲಿಸಿದರೆ, ಮೊಹ್ಮದ್ ಆರೀಫ್, 21-13, 21-17ರಿಂದ 14ನೇ ಶ್ರೇಯಾಂಕಿತ ತೈಪೇನ ಕುಯಿ ಚೆನ್ ಶಿಪ್ ಅವರಿಗೆ ಆಘಾತ ನೀಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.