ಕ್ರೀಡೆ

ಬಾಕ್ಸಿಂಗ್ ಕ್ವಾರ್ಟರ್‌ಗೆ ನೀರಜ್

Published On :

ನವದೆಹಲಿ: ಭಾರತದ ಭರವಸೆಯ ಯುವ ಬಾಕ್ಸರ್ ನೀರಜ್ ಪರಾಸರ್ ತಮ್ಮ ಉತ್ತಮ ಪ್ರದರ್ಶನ ಮುಂದುವರಿಸಿದ್ದು,  ವಿಶ್ವ ಯೂತ್ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಕ್ವಾರ್ಟರ್‌ಫೈನಲ್‌ಗೆ ಪ್ರವೇಶಿಸಿದ್ದಾರೆ.
ಶುಕ್ರವಾರ ನಡೆದ 64 ಕೆ.ಜಿ ವಿಭಾಗದ ಪ್ರಿಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ನೀರಜ್ ತಮ್ಮ ಎದುರಾಳಿ ಜಾರ್ಜ್ ಅವರನ್ನು 2-1 ಅಂತರದಿಂದ ಮಣಿಸಿದರು. ಇನ್ನು ಬಾಲಕಿಯರ ವಿಭಾಗದಲ್ಲಿ ಭಾರತದ ಎಲ್ಲಾ ಸ್ಪರ್ಧಿಗಳು ಸೋಲನುಭವಿಸುವ ಮೂಲಕ ತಮ್ಮ ಅಭಿಯಾನ ಅಂತ್ಯಗೊಳಿಸಿವೆ.
ಮಾಡು ಇಲ್ಲವೆ ಮಡಿ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ ನೀರಜ್ ಗೆಲವಿನ ನಗೆ ಬೀರಿದರು.
ಇನ್ನು ಭಾರತದ ಇತರೆ ಆಟಗಾರರಾದ ಸತೀಶ್ ಕುಮಾರ್ (56 ಕೆ.ಜಿ) 0-3 ಅಂತರದಲ್ಲಿ ಸೋಲನುಭವಿಸಿದರು. ಬಾಲಕಿಯರ ವಿಭಾಗದಲ್ಲಿ ಜಮುನಾ ಬೊರೊ (60 ಕೆ.ಜಿ) ಉಕ್ರೇನ್‌ನ ಅನ್ಹೆಲಿನಾ ವಿರುದ್ಧ 0-3 ಅಂತರದಲ್ಲಿ ಮತ್ತು ಮಂಜು ಬೊಂಬಾರಿಯಾ (75 ಕೆ.ಜಿ) ಸಹ ಸೋಲನುಭವಿಸಿದರು. ಶನಿವಾರ ಭಾರತದ ಶ್ಯಾಮ್, ಸಂದೀಪ್ ಕುಮಾರ್ ಹಾಗೂ ಮಂಜಿತ್ ಕಣಕ್ಕಿಳಿಯಲಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.