ಪ್ರಕಾಶಿಸದ ಸನ್
ಅಬುಧಾಬಿ: ರಾಜಸ್ಥಾನ ರಾಯಲ್ಸ್ ತಂಡದ ಶಿಸ್ತು ಬದ್ಧ ಬೌಲಿಂಗ್ ಹಾಗೂ ರಹಾನೆ ಮತ್ತು ಸ್ಟುವರ್ಟ್ ಬಿನ್ನಿ ಅವರ ಸಮಯೋಚಿತ ಬ್ಯಾಟಿಂಗ್ ಮುಂದೆ ಮಂಕಾದ ಸನ್ರೈಸರ್ಸ್ ಹೈದರಾಬಾದ್ ತಂಡ ಐಪಿಎಲ್ 7ನೇ ಆವೃತ್ತಿಯ ಆರಂಭಿಕ ಪಂದ್ಯದಲ್ಲೇ ಮುಖಭಂಗ ಅನುಭವಿಸಿದೆ.
ಶುಕ್ರವಾರ ನಡೆದ ಎರಡನೇ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡವು ಸನ್ರೈಸರ್ಸ್ ಹೈದರಾಬಾದ್ ವಿರುದ್ಧ 4 ವಿಕೆಟ್ಗಳ ಗೆಲವು ದಾಖಲಿಸಿತು. ಈ ಮೂಲಕ ಆರ್ಆರ್ ಪಂದ್ಯಾವಳಿಯಲ್ಲಿ ಶುಭಾರಂಭ ಮಾಡಿದೆ.
ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ರಾಜಸ್ಥಾನ ರಾಯಲ್ಸ್ ತಂಡ ಉತ್ತಮ ರೀತಿಯಲ್ಲಿ ಬೌಲಿಂಗ್ ಪ್ರದರ್ಶಿಸಿತು. ಹಾಗಾಗಿ ಸನ್ರೈಸರ್ಸ್ ತಂಡ 20 ಓವರ್ಗಳಲ್ಲಿ 6 ವಿಕೆಟ್ಗೆ 133 ರನ್ ಕಲೆಹಾಕುವಲ್ಲಿ ಶಕ್ತವಾಯಿತು. ಈ ಮೂಲಕ ರಾಜಸ್ತಾನ ತಂಡ ಗೆಲವಿಗೆ 134 ರನ್ಗಳ ಸಾಧಾರಣ ಮೊತ್ತ ಕಲೆ ಹಾಕಿತು. ಈ ಮೊತ್ತವನ್ನು ಬೆನ್ನಟ್ಟಿದ ರಾಜಸ್ಥಾನ ತಂಡ 19.3 ಓವರ್ಗಳಲ್ಲಿ 6 ವಿಕೆಟ್ಗೆ 135 ರನ್ ದಾಖಳಿಸಿತು.
ಆರಂಭದಲ್ಲೇ ವಿಘ್ನ: ಸನ್ ರೈಸರ್ಸ್ ತಂಡ ಕೇವಲ 2 ರನ್ ಗಳಿಸಿದ್ದಗಲೇ ಸ್ಫೋಟಕ ಬ್ಯಾಟ್ಸ್ಮನ್ ಏರಾನ್ ಫಿಂಚ್ ವಿಕೆಟ್ ಕಳೆದುಕೊಂಡಿದ್ದು, ಆಘಾತ ನೀಡಿತು.
ಈ ಆಘಾತದಿಂದ ಸನ್ರೈಸರ್ಸ್ ತಂಡ ಚೇತರಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಧವನ್ (38), ಡೇವಿಡ್ ವಾರ್ನರ್ (32) ಸ್ವಲ್ಪ ಹೊತ್ತು ಕ್ರೀಸ್ನಲ್ಲಿ ನಿಂತು ಇನಿಂಗ್ಸ್ ಕಟ್ಟುವ ಪ್ರಯತ್ನ ನಡೆಸಿದರೂ ಯಶಸ್ವಿಯಾಗಲಿಲ್ಲ. ಇನಿಂಗ್ಸ್ನ ಮಹತ್ವದ ಹಂತದಲ್ಲಿ ವಿಕೆಟ್ ಕೈಚೆಲ್ಲಿದ್ದು, ತಂಡ ಹಿನ್ನಡೆ ಅನುಭವಿಸಲು ಕಾರಣವಾಯಿತು.
ಉಳಿದಂತೆ ಕೆ.ಎಲ್ ರಾಹುಲ್ (20) ಹಾಗೂ ವೇಣುಗೋಪಾಲ್ ರಾವ್ (ಅಜೇಯ 16) ಗಳಿಸಿದ್ದು, ಗರಿಷ್ಠವಾಗಿತ್ತು. ರಾಜಸ್ಥಾನ ಪರ ರಜತ್ ಭಾಟಿಯಾ, ಧವಳ್ ಕುಲಕರ್ಣಿ, ಕೇನ್ ರಿಚರ್ಡ್ಸನ್ ತಲಾ 2 ವಿಕೆಟ್ ಪಡೆದರು.
ಬಿನ್ನಿ, ರಹಾನೆ ರಕ್ಷಣೆ: ಈ ಸಾಧಾರಣ ಮೊತ್ತವನ್ನು ಬೆನ್ನಟ್ಟಿದ ರಾಜಸ್ಥಾನ ರಾಯಲ್ಸ್ ತಂಡ 31 ರನ್ಗಳಿಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು ಈ ವೇಳೆ ಜತೆಯಾದ ಅಜಿಂಕ್ಯ ರಹಾನೆ (59) ಹಾಗೂ ಸ್ಟುವರ್ಟ್ ಬಿನ್ನಿ (ಅಜೇಯ 48) ಜವಾಬ್ದಾರಿಯುತ ಬ್ಯಾಟಿಂಗ್ ಆಸರೆಯಾಯಿತು. ಈ ಇಬ್ಬರು ಆಟಗಾರರು ನಾಲ್ಕನೇ ವಿಕೆಟ್ಗೆ 77 ರನ್ ಕಲೆ ಹಾಕುವ ಮೂಲಕ ತಂಡ ಗೆಲವಿನತ್ತ ಸಾಗುವಲ್ಲಿ ಪ್ರಮುಖ ಕಾರಣರಾದರು.
ಸಂಕ್ಷಿಪ್ತ ಸ್ಕೋರ್
ಸನ್ರೈಸರ್ಸ್ ಹೈದರಾಬಾದ್ 20 ಓವರ್ಗಳಲ್ಲಿ 6 ವಿಕೆಟ್ಗೆ 133
ಶಿಖರ್ ಧವನ್ 38 (34), ಡೇವಿಡ್ ವಾರ್ನರ್ 32 (35), ರಜತ್ ಭಾಟಿಯಾ 22ಕ್ಕೆ2
ರಾಜಸ್ಥಾನ ರಾಯಲ್ಸ್ 19.3 ಓವರ್ಗಳಲ್ಲಿ 6 ವಿಕೆಟ್ಗೆ 135
ಅಜಿಂಕ್ಯ ರಹಾನೆ 59 (53), ಸ್ಟುವರ್ಟ್ ಬಿನ್ನಿ 48 (32), ಅಮಿತ್ ಮಿಶ್ರಾ 26ಕ್ಕೆ2
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

