ಅಭಿಜಿತ್ ಗುಪ್ತಾಗೆ ಸೋಲು
ಶಾರ್ಜಾ: ಗ್ರ್ಯಾಂಡ್ ಮಾಸ್ಟರ್ ಹಾಗೂ ಭಾರತದ ಭರವಸೆಯ ಚೆಸ್ ಆಟಗಾರ ಅಭಿಜಿತ್ ಗುಪ್ತಾ 13ನೇ ಏಷ್ಯನ್ ಕಾಂಟಿನೆಂಟಲ್ ಚೆಸ್ ಚಾಂಪಿಯನ್ಶಿಪ್ನ ಎರಡನೇ ಸುತ್ತಿನಲ್ಲಿ ಸೋಲನುಭವಿಸಿದ್ದಾರೆ.
ಶನಿವಾರ ಇಲ್ಲಿನ ಶಾರ್ಜಾ ಚೆಸ್ ಕ್ಲಬ್ನಲ್ಲಿ ನಡೆದ ಎರಡನೇ ಸುತ್ತಿನ ಪಂದ್ಯದಲ್ಲಿ ಅಭಿಜಿತ್ ಗುಪ್ತಾ ತಮ್ಮ ಎದುರಾಳಿ ಬಾಂಗ್ಲಾದೇಶದ ಜಿಯುರ್ ರೆಹಮಾನ್ ವಿರುದ್ಧ ಸೋಲನುಭವಿಸಿದ್ದಾರೆ.
ಇತ್ತೀಚೆಗೆ ಮುಕ್ತಾಯವಾದ ದುಬೈ ಓಪನ್ ಚೆಸ್ನಲ್ಲಿ ಉತ್ತಮ ಪ್ರದರ್ಶನ ತೋರಿದ್ದ ಅಭಿಜಿತ್ಗೆ ಇಂದಿನ ಪಂದ್ಯ ಕಠಿಣವಾಗಿ ಪರಿಣಮಿಸಿತ್ತು. ಈ ಪಂದ್ಯದಲ್ಲಿ ಕಪ್ಪುಕಾಯಿಯನ್ನು ನಡೆಸಿದ ಅಭಿಜಿತ್ ಒಂದು ಹಂತದಲ್ಲಿ ಉತ್ತಮ ಸ್ಥಿತಿ ಕಾಯ್ದುಕೊಂಡಿದ್ದರು. ನಂತರ ಉತ್ತಮ ಪ್ರದರ್ಶನ ನೀಡಿದ ರೆಹಮಾನ್, ಅಭಿಜಿತ್ಗೆ ಕಠಿಣ ಸವಾಲೊಡ್ಡಿದರು. ಹಾಗಾಗಿ ಅಭಿಜಿತ್ ಪಂದ್ಯದಲ್ಲಿ ಸೋಲನುಭವಿಸಬೇಕಾಯಿತು.
ಭಾರತದ ಗ್ರ್ಯಾಂಡ್ಮಾಸ್ಟರ್ಗಳಾದ ಜಿ.ಎನ್ ಗೊಪಾಲ್ ಮತ್ತು ಬಿ ಅಧಿಬಾನ್ ತಮ್ಮ ಪಂದ್ಯಗಳಲ್ಲಿ ಗೆಲವು ದಾಖಲಿಸುವ ಮೂಲಕ ಏಳು ಆಟಗಾರರ ಜಂಟಿ ಅಗ್ರಸ್ಥಾನ ಪಡೆದಿದ್ದಾರೆ. ಅಧಿಬಾನ್ ತಮ್ಮ ಪಂದ್ಯದಲ್ಲಿ ಕಪ್ಪು ಕಾಯಿಯನ್ನು ನಡೆಸಿದರೂ, ಎದುರಾಲಿ ಮಂಗೋಲಿಯಾದ ಬಯರ್ಸೈಖಾನ್ ವಿರುದ್ಧ ಗೆಲವು ದಾಖಲಿಸಿದರು. ಇನ್ನು ಗೋಪಾಲ್ ತಮ್ಮ ಎದುರಾಳಿ ಕಜಕಸ್ಥಾನದ ಮಮಿಂಬಾಯ್ ಅಸಾದ್ ವಿರುದ್ಧ ಮೇಲುಗೈ ಸಾಧಿಸಿದರು.
ಪಂದ್ಯಾವಳಿಯಲ್ಲಿ ಇನ್ನು ಎಂಟು ಸುತ್ತುಗಳು ಬಾಕಿ ಉಳಿದಿದ್ದು, ಭಾರತದ ಅತಿ ಹೆಚ್ಚಿನ ಶ್ರೇಯಾಂಕಿತ ಆಟಗಾರ ಶಶಿಕಿರಣ್ 1.5 ಅಂಕಗಳೊಂದಿಗೆ ದ್ವಿತೀಯ ಸ್ಥಾನದಲ್ಲಿದ್ದಾರೆ. ಶಶಿಕಿರಣ್ ತಮ್ಮ ಪಂದ್ಯದಲ್ಲಿ ಮಂಗೋಲಿಯಾದ ಬಚುಲೂನ್ ಸೆಗ್ಮದ್ ವಿರುದ್ಧ ಡ್ರಾ ಸಾಧಿಸಿದರು. ಇನ್ನು ಭಾರತದ ಇತರೆ ಆಟಗಾರರಲ್ಲಿ ಅಭಿಜಿತ್ ಕುಂಟೆ ಯುಎಇಯ ಆಟಗಾರ ಗ್ರ್ಯಾಂಡ್ ಮಾಸ್ಟರ್ ಎ.ಆರ್ ಸಲೀಮ್ ಸಲೆಹ್ ವಿರುದ್ಧ ಪರಾಭವಗೊಂಡಿದ್ದಾರೆ.
ಇನ್ನು ಮಹಿಳೆಯರ ಪಂದ್ಯಾವಳಿಯನ್ನು ಇದೇ ವೇಳೆ ಆಯೋಜಿಸಿದ್ದು, ತಾನಿಯಾ ಸಚ್ದೇವ್ ಇಂಡೋನೇಷ್ಯಾದ ಕರಿಷ್ಮಾ ಸುಕಂದರ್ ವಿರುದ್ಧ ಡ್ರಾ ಸಾಧಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

