ಇಂಡೋ- ಶ್ರೀಲಂಕಾ ಸರಣಿ ಡ್ರಾ
ಕ.ಪ್ರ.ವಾರ್ತೆ ಮೈಸೂರು ಏ. 20
ಇಂಡೋ- ಶ್ರೀಲಂಕಾ ಅಂತರ ಅಕಾಡೆಮಿ 15 ವರ್ಷದೊಳಗಿನವರ ಕ್ರಿಕೆಟ್‌ನ ನಾಲ್ಕು ಪಂದ್ಯದ ಸರಣಿಯು ಡ್ರಾನಲ್ಲಿ ಅಂತ್ಯಗೊಂಡಿದೆ.
ಎಸ್‌ಜೆಸಿಇ ಕ್ರಿಕೆಟ್ ಮೈದಾನದಲ್ಲಿ ಆಯೋಜಿಸಿರುವ ಈ ಕ್ರಿಕೆಟ್ ಪಂದ್ಯಾವಳಿಯ ಮೊದಲ ಪಂದ್ಯದಲ್ಲಿ ನಗರದ ಎಸ್‌ಎಕೆ- ಡಿವೈಇಎಸ್ ಇಲವೆನ್ ತಂಡವು, ಶ್ರೀಲಂಕಾದ ಎನ್‌ಸಿಎ ತಂಡವನ್ನು 51 ರನ್‌ಗಳಿಂದ ಮಣಿಸಿತು. ಮೊದಲು ಟಾಸ್‌ಗೆದ್ದು ಬೌಲಿಂಗ್ ಇಳಿದ ಶ್ರೀಲಂಕಾದ ಎನ್‌ಸಿಎ ತಂಡದ ವಿರುದ್ಧ, ನಗರದ ಎಸ್‌ಎಕೆ- ಡಿವೈಇಎಸ್ ಇಲವೆನ್ ತಂಡವು ನಿಗದಿತ 30 ಓವರ್‌ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ 189 ರನ್ ಕಲೆಹಾಕಿತು.
ತಂಡದ ಪರ ಶ್ರೇಯಸ್ ಅಜೇಯ 53 ರನ್, ಗೌರವ್ (47) ಮತ್ತು ಸೃಜನ್ ಪಿ. ಶೆಟ್ಟಿ ಅಜೇಯ 24 ರನ್ ಗಳಿಸಿದರು. ಶ್ರೀಲಂಕಾ ಪರ ವೆಜಿತ್ 30 ರನ್ ನೀಡಿ ಎರಡು ವಿಕೆಟ್ ಪಡೆದರು. ಇದಕ್ಕೆ ಪ್ರತಿಯಾಗಿ ಶ್ರೀಲಂಕಾದ ಎನ್‌ಸಿಎ ತಂಡ 26 ಓವರ್‌ಗೆ ತನ್ನೆಲ್ಲ ವಿಕೆಟ್ ಕಳೆದುಕೊಂಡು ಕೇವಲ 138 ರನ್ ಗಳಿಸಿತು. ಮತ್ತೊಂದು ಪಂದ್ಯದಲ್ಲಿ ಎನ್‌ಸಿಎ ತಂಡವು, ಎಸ್‌ಎಕೆ ಮತ್ತು ಡಿವೈಇಎಸ್ ಇಲೆವೆನ್ ತಂಡವನ್ನು 22 ರನ್‌ಗಳಿಂದ ಮಣಿಸಿತು. ಎನ್‌ಸಿಎ ತಂಡ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 104 ರನ್ ಗಳಿಸಿದರೆ, ಎಸ್‌ಎಕೆ ಮತ್ತು ಡಿವೈಇಎಸ್ ಇಲವೆನ್ ತಂಡ 8 ವಿಕೆಟ್ ನಷ್ಟಕ್ಕೆ ಕೇವಲ 82 ರನ್ ಗಳಿಸಿತು. ಅಂತಿಮವಾಗಿ ಉಭಯ ತಂಡಗಳು ತಲಾ 2 ಅಂಕ ಪಡೆದು ಸರಣಿಯನ್ನು ಡ್ರಾ ಮಾಡಿಕೊಂಡವು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

