ಕ್ರೀಡೆ

22 ರಿಂದ ಅ.ಭಾ ಚೆಸ್ ಪಂದ್ಯಾವಳಿ

Published On :

ಮೈಸೂರು: ಮೈಸೂರು ಪ್ರೊಫೆಷನಲ್ ಚೆಸ್ ಅಕಾಡೆಮಿ (ಎಂಪಿಸಿಎ) ಏ.22 ರಿಂದ 25 ರವರೆಗೆ ಚಾಮುಂಡಿ ವಿಹಾರ ಒಳಾಂಗಣ ಕ್ರೀಡಾಂಗಣದಲ್ಲಿ ಅಖಿಲ ಭಾರತ ಮಟ್ಟದ (1800 ರೇಟಿಂಗ್ ಒಳಗಿನವರು) ಚೆಸ್ ಪಂದ್ಯಾವಳಿ ಆಯೋಜಿಸಿದೆ.
ಕರ್ನಾಟಕ ಚೆಸ್ ಅಸೋಸಿಯೇಷನ್, ಮೈಸೂರು ಡಿಸ್ಟ್ರಿಕ್ಟ್ ಚೆಸ್ ಅಸೋಸಿಯೇಷನ್ ಸಹಯೋಗದಲ್ಲಿ ಎಂಪಿಸಿಎ ಈ ಪಂದ್ಯಾವಳಿ ಆಯೋಜಿಸಿದ್ದು, ಕರ್ನಾಟಕ, ಮಹಾರಾಷ್ಟ್ರ, ತಮಿಳುನಾಡು, ಗೋವಾ, ಪಶ್ಚಿಮ ಬಂಗಾಳ, ಗುಜರಾತ್, ಪಾಂಡಿಚೇರಿ, ಆಂಧ್ರಪ್ರದೇಶ, ದೆಹಲಿ ಸೇರಿದಂತೆ ವಿವಿಧೆಡೆಯಿಂದ 300 ಚೆಸ್ ಪಟುಗಳು ಭಾಗವಹಿಸಲಿದ್ದಾರೆ.
ಟಾಪ್ ಚೆಸ್ ಆಟಗಾರರಾದ ಮೈಸೂರಿನ ವಿ.ಪಿ.ಎಸ್. ದರ್ಶನ್, ಆಂಧ್ರಪ್ರದೇಶದ ಸುಬ್ಬರಾಜು, ಕರ್ನಾಟಕದ ಬಿ.ವಿ. ನಾಗರಾಜ್, ಪಾರ್ಥಸಾರಥಿ, ಕಾದವ್ ಓಂಕಾರ್, ಮಂಜುನಾಥ್ ಜೈನ್, ಯಶಾಕ್ಷರ ಜೋಯಿಸ್, ಎಲ್.ವಿವೇಕಾನಂದ, ಕೆ.ಉಪೇಂದ್ರ, ಧನುಷ್ ಭಾರದ್ವಾಜ್, ನಿಖಿಲ್ ಆರ್. ಉಮೇಶ್, ಹೆರ್ಮಾನ್ ಸಲ್ಡಾನಾ ಮೊದಲಾದವರು ಈ ಪಂದ್ಯಾವಳಿಯಲ್ಲಿ ಭಾಗವಹಿಸುವರು.
ಪಂದ್ಯಾವಳಿಯು ಒಟ್ಟಾರೆ 1.50 ಲಕ್ಷ ಬಹುಮಾನ ಹೊಂದಿದ್ದು, ಮೊದಲ ಸ್ಥಾನ ಪಡೆದವರಿಗೆ 20,000 ಮತ್ತು ಟ್ರೋಪಿ, ಎರಡು, ಮೂರು, ನಾಲ್ಕು ಮತ್ತು 5ನೇ ಸ್ಥಾನ ಪಡೆಯುವವರಿಗೆ ಕ್ರಮವಾಗಿ 12,000, 8,000, 6,000 ಮತ್ತು 5,000 ಬಹುಮಾನ ನೀಡಲಾಗುತ್ತದೆ. 6 ರಿಂದ 25ನೇ ಸ್ಥಾನ ಪಡೆಯುವವರಿಗೂ ಸಹ ನಗದು ಬಹುಮಾನ ನೀಡಲಾಗುತ್ತದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.