ಭಾರತ-ಐರ್ಲೆಂಡ್ ಡ್ರಾಗೆ ತೃಪ್ತಿ
ನವದೆಹಲಿ: ಮೊದಲೆರಡೂ ಪಂದ್ಯಗಳನ್ನು ನಿರಂತರವಾಗಿ ಗೆದ್ದುಕೊಂಡಾಗಲೇ ಐರ್ಲೆಂಡ್ ವಿರುದ್ಧದ ಮೂರು ಪಂದ್ಯಗಳ ಮಹಿಳಾ ಹಾಕಿ ಟೆಸ್ಟ್ ಸರಣಿಯನ್ನು ತಮ್ಮ ತೆಕ್ಕೆಗೆ ಹಾಕಿಕೊಂಡಿದ್ದ ಭಾರತದ ವನಿತೆಯರು, ಅಂತಿಮ ಟೆಸ್ಟ್ನಲ್ಲಿ ಸಹ ಉತ್ತಮ ಪ್ರದರ್ಶನ ನೀಡಿ ಡ್ರಾ ಫಲಿತಾಂಶಕ್ಕೆ ತೃಪ್ತರಾಗಿದ್ದಾರೆ.
ಡಬ್ಲಿನ್ನಲ್ಲಿ ನಡೆದ ಮೂರನೇ ಹಾಗೂ ಅಂತಿಮ ಹಾಕಿ ಟೆಸ್ಟ್ ಪಂದ್ಯದಲ್ಲಿ ಭಾರತದ ಮಹಿಳೆಯರು 2-2 ಗೋಲುಗಳಿಂದ ಐರ್ಲೆಂಡ್ ವಿರುದ್ಧ ಸಮಗೌರವಕ್ಕೆ ಭಾಜನರಾದರು.
ಪ್ರವಾಸದ ಮೊದಲ ಪಂದ್ಯದಲ್ಲಿ 3-1ರಿಂದ ಹಾಗೂ ಎರಡನೇ ಪಂದ್ಯದಲ್ಲಿ 2-1 ಗೋಲುಗಳಿಂದ ರೋಚಕ ಗೆಲವು ದಾಖಲಿಸಿದ್ದ ಭಾರತೀಯರು, ಅಂತಿಮ ಟೆಸ್ಟ್ನಲ್ಲೂ ಸಹ ಗುಣಮಟ್ಟದ ಪ್ರದರ್ಶನ ನೀಡಿ ಗೆಲವು ದಾಖಲಿಸಿದರು. ಆ ಮೂಲಕ 2-0 ಅಂತರದಲ್ಲಿ ಟೆಸ್ಟ್ ಸರಣಿ ಗೆಲ್ಲುವ ಮೂಲಕ ಸೋಲು ಕಾಣದ ತಂಡವಾಗಿ ಪ್ರವಾಸಕ್ಕೆ ವಿದಾಯ ಹೇಳಿತು.
ಅಷ್ಟೇ ಅಲ್ಲದೆ, ಸ್ಕಾಟ್ಲೆಂಡ್ನ ಗ್ಲಾಸ್ಗೊದಲ್ಲಿ ನಡೆಯಲಿರುವ ಎಫ್ಐಎಚ್ ಚಾಲೆಂಜ್-1 ಟೂರ್ನಿಗಾಗಿ ಭಾರತದ ಆಟಗಾರ್ತಿಯರು ಉತ್ತಮ ಸಿದ್ಧತೆ ಮಾಡಿಕೊಂಡಂತಾಯಿತು.
ಅಂತಿಮ ಪಂದ್ಯದಲ್ಲಿ ಭಾರತದ ಪರ ಚನ್ಚನ್ ದೇವಿ ಎರಡೂ ಗೋಲುಗಳನ್ನು ಸಂಪಾದಿಸಿದರೆ, ಆತಿಥೇಯ ತಂಡದ ಪರ ಅನ್ನಾ ಓಫ್ಲಾನಗನ್ ಎರಡೂ ಗೋಲುಗಳನ್ನು ಗಳಿಸಿ ಪಂದ್ಯ ಡ್ರಾದಲ್ಲಿ ಅಂತ್ಯಗೊಳ್ಳುವಂತಾಯಿತು.
ಐರ್ಲೆಂಡ್ ಪ್ರಥಮಾರ್ಧದ ಏಳನೇ ನಿಮಿಷದಲ್ಲಿಯೇ ಗೋಲುಗಳಿಸಿ 1-0 ಮುನ್ನಡೆಯೊಂದಿಗೆ ಶುಭಾರಂಭ ಮಾಡಿತು. ಆದರೆ, ಭಾರತ ಪಂದ್ಯದ 31ನೇ ನಿಮಿಷದಲ್ಲಿ ಚನ್ ಚನ್ ದೇವಿ ನೆರವಿನಿಂದ ಖಾತೆ ತೆರೆದು ವಿರಾಮದ ವೇಳೆಗೆ 1-1ರಿಂದ ಸಮಗೌರವ ಸಾಧಿಸಿತು.
ಉತ್ತರಾರ್ಧದ ಆಟದಲ್ಲಿ ಭಾರತವೇ (58ನೇ ನಿಮಿಷ) ಎರಡನೇ ಗೋಲನ್ನು ಗಳಿಸುವ ಮೂಲಕ 2-1 ಮುನ್ನಡೆಯೊಂದಿಗೆ ಪಂದ್ಯದ ಮೇಲೆ ಹಿಡಿತ ಸಾಧಿಸಿತು. ಆದರೆ, ಆಟ ಮುಗಿಯಲು 6 ನಿಮಿಷಗಳಿದ್ದಾಗ, ಐರ್ಲೆಂಡ್ ಮತ್ತೊಂದು ಗೋಲು ಗಳಿಸುವಲ್ಲಿ ಯಶಸ್ವಿಯಾಗುವುದರೊಂದಿಗೆ ಅಂತಿಮವಾಗಿ ಪಂದ್ಯ ಸಮಗೌರವದಲ್ಲಿ ಅಂತ್ಯಗೊಂಡಿತು.
ಈ ಪಂದ್ಯದಲ್ಲಿ ಭಾರತದ ಗೋಲ್ಕೀಪರ್ ಸವಿತಾ ಉತ್ತಮ ತಡೆಗೋಡೆ ನಿರ್ಮಿಸಿ ಎದುರಾಳಿ ಆಟಗಾರ್ತಿಯರ ಕೆಲ ಉತ್ತಮ ಪ್ರಯತ್ನಗಳನ್ನು ವ್ಯರ್ಥಗೊಳಿಸಿ ತಮ್ಮ ತಂಡವನ್ನು ಆಪತ್ತಿನಿಂದ ಪಾರು ಮಾಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

