ಕ್ರೀಡೆ

ಮ್ಯಾಕ್ಸ್‌ಕಿಲ್ಲರ್

ಮ್ಯಾಕ್ಸ್‌ಕಿಲ್ಲರ್
Published On :

ಶಾರ್ಜಾ: ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಅಷ್ಟೇ ಉತ್ತಮ ಪ್ರದರ್ಶನ ನೀಡಿದ ರಾಜಸ್ಥಾನ ರಾಯಲ್ಸ್ ತಂಡವನ್ನು 7 ವಿಕೆಟ್ ಅಂತರದಿಂದ ಪರಾಭವಗೊಳಿಸಿತು.
ಗ್ಲೆನ್ ಮ್ಯಾಕ್ಸ್‌ವೆಲ್ (89) ಮತ್ತು ಡೇವಿಡ್ ಮಿಲ್ಲರ್ (51) ಅವರ ಸ್ಫೋಟಕ ಬ್ಯಾಟಿಂಗ್ ನೆರವಿನೊಂದಿಗೆ, ಇನ್ನೂ 8 ಎಸೆತಗಳನ್ನು ಬಾಕಿ ಇರುವಂತೆಯೇ, ಕಿಂಗ್ಸ್ ಇಲೆವನ್ ಪಂಜಾಬ್ 193 ರನ್ ದಾಖಲಿಸಿ ವಿಜಯದ ಕೇಕೆ ಹಾಕಿತು.
ಕೇವಲ 45 ಎಸೆತಗಳನ್ನು ಎದುರಿಸಿದ ಮ್ಯಾಕ್ಸ್‌ವೆಲ್ ಅರ್ಧ ಶತಕದಲ್ಲಿ 6 ಸಿಕ್ಸರ್ ಮತ್ತು 8 ಬೌಂಡರಿಗಳು ಸೇರಿದ್ದವು. ಇನ್ನು ಕೇವಲ 19 ಎಸೆತಗಳನ್ನು ಎದುರಿಸಿದ ಮಿಲ್ಲರ್ ಅರ್ಧ ಶತಕದಲ್ಲಿ 6 ಸಿಕ್ಸರ್‌ಗಳು ಸೇರಿದ್ದವು. ಇನ್ನು ಆರಂಭಿಕರಾಗಿ ಅಂಗಣಕ್ಕಿಳಿದ ಚೇತೇಶ್ವರ ಪೂಜಾರ್ ಅವರು 38 ಎಸೆತಗಳನ್ನು ಎದುರಿಸುವ ಮೂಲಕ 40 ರನ್ ದಾಖಲಿಸಿ ಅಜೇಯರಾಗಿ ಉಳಿದಿರು. ಆದರೆ, ಇನ್ನೊಬ್ಬ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್ (2) ಮತ್ತೆ ವೈಫಲ್ಯ ಕಂಡರು. ಪಂಜಾಬ್ ಪರ ಕೇನ್ ರಿಚರ್ಡ್‌ಸನ್, ಧವಳ್ ಕುಲಕರ್ಣಿ ಹಾಗೂ ಜೇಮ್ಸ್ ಫಾಕ್ನರ್ ತಲಾ 1 ವಿಕೆಟ್ ಕಬಳಿಸಿದರು. ಇದಕ್ಕೂ ಮುನ್ನ ಟಾಸ್ ಸೋತರೂ ಬ್ಯಾಟಿಂಗ್ ಅವಕಾಶ ಪಡೆದ ರಾಜಸ್ಥಾನ ರಾಯಲ್ಸ್ ತಂಡ, ಸಂಜು ಸ್ಯಾಮ್ಸನ್ (52) ಮತ್ತು ಶೇನ್ ವ್ಯಾಟ್ಸನ್ (50) ಅವರು ಆಕರ್ಷಕ ಅರ್ಧ ಶತಕದ ನೆರವಿನೊಂದಿಗೆ 5 ವಿಕೆಟ್ ನಷ್ಟದೊಂದಿಗೆ 191 ರನ್ ಕಲೆ ಹಾಕಿತ್ತು. 29 ಎಸೆತಗಳನ್ನು ಎದುರಿಸಿದ ವ್ಯಾಟ್ಸನ್ ಅರ್ಧ ಶತಕದಲ್ಲಿ 3 ಸಿಕ್ಸರ್ ಮತ್ತು 5 ಬೌಂಡರಿಗಳು ಸೇರಿದ್ದವು. ಇನ್ನು 34 ಎಸೆತಗಳನ್ನು ಎದುರಿಸಿದ ಸಂಜು ಸ್ಯಾಮ್ಸನ್ ಅರ್ಧ ಶತಕದಲ್ಲಿ 4 ಸಿಕ್ಸರ್ ಮತ್ತು 3 ಬೌಂಡರಿ ಸೇರಿದ್ದವು. ಇಬ್ಬರ ಜತೆಯಾಟದಲ್ಲಿ 3ನೇ ವಿಕೆಟ್‌ಗೆ 74 ರನ್ ಕಲೆ ಹಾಕಿದ್ದರು.
ಆದರೆ, ಅಕ್ಷರ್ ಪಟೇಲ್ ಎಸೆದ 14ನೇ ಓವರ್‌ನ ಮೊದಲ ಎಸೆತದಲ್ಲಿ, ಬೌಲ್ಡ್ ಆದ ವ್ಯಾಟ್ಸನ್ ಪೆವಿಲಿಯನ್ ಸೇರಿದರು. ನಂತರ ಹೋರಾಟ ಮುಂದುವರಿಸಿದ ಸ್ಯಾಮ್ಸನ್ ಪಂಜಾಬ್ ಬೌಲರ್‌ಗಳನ್ನು ಹಣಿಯುತ್ತಿದ್ದಂತೆಯೇ, 17ನೇ ಓವರ್‌ನ 5ನೇ ಎಸೆತದಲ್ಲಿ ಪರವಿಂದರ್ ಅವಾನಾ ಎಸೆತದಲ್ಲಿ ಬೌಲ್ಡ್ ಆದರು. ನಂತರ ಬಂದ ಕರ್ನಾಟಕದ ಸ್ಟುವರ್ಟ್ ಬಿನ್ನಿ (12) ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ.
ಆರಂಭಿಕರಾಗಿ ಅಂಗಣಕ್ಕಿಳಿದ ಅಭಿಷೇಕ್ ನಾಯರ್ (23) ಮತ್ತು ಅಜಿಂಕ್ಯ ರಹಾನೆ (13) ತಂಡಕ್ಕೆ ಉತ್ತಮ ಬುನಾದಿಯನ್ನು ಹಾಕುವತ್ತ ಸಾಗಿದ್ದರು. ಇಬ್ಬರ ಜತೆಯಾಟದಲ್ಲಿ 3 ಓವರ್‌ಗಳಲ್ಲಿ 22 ರನ್ ಕಲೆ ಹಾಕುತ್ತಿದ್ದಂತೆಯೇ, ರಹಾನೆ ಅವರನ್ನು ರನೌಟ್ ಮಾಡುವಲ್ಲಿ ಬೇಯ್ಲಿ ಅವರು ಯಶಸ್ವಿಯಾದರು. ನಂತರ ತಕ್ಕ ಬ್ಯಾಟ್ ಬೀಸುತ್ತಿದ್ದ ನಾಯರ್ ಅವರನ್ನು 7ನೇ ಓವರ್‌ನ ಮೊದಲ ಎಸೆತದಲ್ಲೇ ಎಲ್‌ಬಿಗೆ ಬಲಿಯಾಗಿಸುವಲ್ಲಿ ಮುರಳಿ ಕಾರ್ತಿಕ್ ಯಶಸ್ವಿಯಾದರು. ಕೆಳ ಕ್ರಮಾಂಕದಲ್ಲಿ ಬ್ಯಾಟ್‌ನೊಂದಿಗೆ ಗುಡುಗಿದ ಡ್ವೈನ್ ಸ್ಮಿತ್ 15 ಎಸೆತಗಳನ್ನು ಎದುರಿಸುವ ಮೂಲಕ ಅಜೇಯ 27 ರನ್ ಕಲೆ ಹಾಕಿದರು. ಇದು ತಂಡದ ಮೊತ್ತ 190 ಗಡಿ ದಾಟಲು ನೆರವಾಯಿತು.

ಸ್ಕೋರ್ ವಿವರ
ರಾಜಸ್ಥಾನ ರಾಯಲ್ಸ್ 20 ಓವರ್‌ಗಳಲ್ಲಿ 5 ವಿಕೆಟ್‌ಗೆ 191
ಅಭಿಷೇಕ್ ನಾಯರ್ ಎಲ್‌ಬಿ ಮುರಳಿ ಕಾರ್ತಿಕ್ 23 (20), ಅಜಿಂಕ್ಯ ರಹಾನೆ ರನೌಟ್(ಬೇಯ್ಲಿ) 13 (8), ಸಂಜು ಸ್ಯಾಮ್ಸನ್ ಬಿ ಅವಾನಾ 52 (34), ಶೇನ್ ವ್ಯಾಟ್ಸನ್ ಬಿ ಪಟೇಲ್ 50 (29), ಸ್ಟುವರ್ಟ್ ಬಿನ್ನಿ ಸಿ ಮಿಲ್ಲರ್ ಬಿ ಜಾನ್ಸನ್ 12 (8), ಡ್ವೈನ್ ಸ್ಮಿತ್ ಅಜೇಯ 27 (15), ಜೇಮ್ಸ್ ಫಾಕ್ನರ್ ಅಜೇಯ 8 (7)
ಇತರೆ: (ಬೈ-2, ಲೆಗ್‌ಬೈ-1, ವೈಡ್-2, ನೋಬಾಲ್-1) 6
ವಿಕೆಟ್ ಪತನ: 1-22, 2-54, 3-128, 4-144, 5-159.
ಬೌಲಿಂಗ್ ವಿವರ
ಅಕ್ಷರ ಪಟೇಲ್ 4-0-22-1
ಮಿಚೆಲ್ ಜಾನ್ಸನ್ 4-0-29-1
ಪರ್ವಿಂದರ್ ಅವಾನಾ 4-0-40-1
ಲಕ್ಷ್ಮೀಪತಿ ಬಾಲಾಜಿ 4-0-46-0
ಮುರಳಿ ಕಾರ್ತಿಕ್ 4-0-51-1     

ಕಿಂಗ್ಸ್ ಇಲೆವೆನ್ ಪಂಜಾಬ್ 18.4 ಓವರ್‌ಗಳಲ್ಲಿ 3 ವಿಕೆಟ್‌ಗೆ 193
ಚೇತೇಶ್ವರ ಪೂಜಾರ ಅಜೇಯ 40 (38), ವೀರೇಂದ್ರ ಸೆಹ್ವಾಗ್ ಸಿ ಬಿನ್ನಿ ಬಿ ಕುಲಕರ್ಣಿ 2 (7), ವೃದ್ಧಿಮಾನ್ ಸಾಹ ಸಿ ಕುಲಕರ್ಣಿ ಬಿ ಫಾಕ್ನರ್ 2 (3), ಗ್ನೆನ್ ಮ್ಯಾಕ್ಸ್‌ವೆಲ್ ಸಿ ಸ್ಮಿತ್ ಬಿ ರಿಚರ್ಡ್ಸ್‌ನ್ 89 (45), ಡೇವಿಡ್ ಮಿಲ್ಲರ್ ಅಜೇಯ 51 (19)
ಇತರೆ: (ಎಲ್‌ಬಿ-5, ವೈಡ್ 4) 9
ವಿಕೆಟ್ ಪತನ: 1-5, 2-10, 3-126.
ಬೌಲಿಂಗ್ ವಿವರ
ಕೇನ್ ರಿಚರ್ಡ್ಸ್‌ನ್ 3-0-25-1
ದವಳ್ ಕುಲಕರ್ಣಿ 4-0-50-1
ಜೇಮ್ಸ್ ಫಾಕ್ನರ್ 3.4-0-45-1
ಪ್ರವೀಣ್ ತಾಂಬೆ 4-0-26-0
ರಜತ್ ಭಾಟಿಯಾ 3-0-38-0
ಸ್ಟುವರ್ಟ್ ಬಿನ್ನಿ  1-0-4-0    

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.