ವಿಶ್ವ ಸ್ನೂಕರ್ ಮುಡಿದ ಚಿತ್ರಾ
ಲೀಡ್ಸ್: ವಿಶ್ವ ಮಹಿಳಾ ಬಿಲಿಯರ್ಡ್ಸ್ ಮತ್ತು ಸ್ನೂಕರ್ ವಿಭಾಗದಲ್ಲಿ ಸೋಲನುಭವಿಸಿದ್ದ ಬೆಂಗಳೂರು ಮೂಲದ ಚಿತ್ರಾ ಮಗಿಮೈರಾಜ್ ಅವರು ವಿಶ್ವ ಸ್ನೂಕರ್ ಮಹಿಳೆಯರ ಹಿರಿಯರ ವಿಭಾಗದಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.
ಈ ವಿಭಾಗದಲ್ಲಿ ಅತ್ಯದ್ಭುತ ಪ್ರದರ್ಶನ ತೋರಿದ ಮಗಿಮೈರಾಜ್ ಅವರು ಇದೇ ಮೊದಲ ಬಾರಿಗೆ ಮಹತ್ವದ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು. ಪಂದ್ಯಾವಳಿಯಲ್ಲಿ ಭಾಗವಹಿಸಿದ್ದ 13 ರಾಷ್ಟ್ರಗಳ ಆಟಗಾರರೊಂದಿಗೆ ಭಾಗವಹಿಸಿದ್ದ ಚಿತ್ರಾ, ಈ ವಿಭಾಗದಲ್ಲಿ ನಡೆದ ಎಲ್ಲ ನಾಲ್ಕೂ ಪಂದ್ಯಗಳಲ್ಲೂ ಒಂದೇ ಒಂದು ಸೆಟ್ನಲ್ಲಿ ಸೋಲನುಭವಿಸದೆ ಪ್ರಶಸ್ತಿ ತಮ್ಮದಾಗಿಸಿಕೊಂಡು ಬೀಗಿದರು.
41 ವರ್ಷದ ಚಿತ್ರಾ ಅವರು, ಫೈನಲ್ ಸುತ್ತಿನಲ್ಲಿ ಬೈಲೋರಷ್ಯಾದ ಅಲೇನಾ ಆಸ್ಮೋಲಾವಾ ಅವರನ್ನು ಸೋಲಿಸಿದರು. ಇದಕ್ಕೂ ಮುನ್ನ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಭಾರತದ ಇನ್ನೊಬ್ಬ ಆಟಗಾರ್ತಿ ಉಮಾದೇವಿ ನಾಗರಾಜ್ ವಿರುದ್ಧ ಜಯ ಸಾಧಿಸುವಲ್ಲಿ ಚಿತ್ರಾ ಯಶಸ್ವಿಯಾಗಿದ್ದರು.
ವಿಶ್ವ ಬಿಲಿಯರ್ಡ್ಸ್ನ ಮಾಜಿ ಚಾಂಪಿಯನ್ ಆಗಿರುವ ಚಿತ್ರಾ ಅವರು, ವಿಶ್ವ ಮಹಿಳಾ ಬಿಲಿಯರ್ಡ್ಸ್ ಮತ್ತು ಸ್ನೂಕರ್ ವಿಭಾಗದಲ್ಲಿ ಇದವರೆಗೆ ಒಟ್ಟು ಮೂರು ಚನ್ನ, ಮೂರು ಬೆಳ್ಳಿ ಹಾಗೂ ಮೂರು ಕಂಚಿನ ಪದಕ ಗೆದ್ದುಕೊಂಡಿದ್ದಾರೆ. ಏತನ್ಮಧ್ಯೆ, ರಾಷ್ಟ್ರೀಯ ಬಿಲಿಯರ್ಡ್ಸ್ ಚಾಂಪಿಯನ್ಶಿಪ್ ಉಳಿಸಿಕೊಂಡ ಉಮಾದೇವಿ ಅವರು ಸೆಮಿಫೈನಲ್ನಲ್ಲಿ ಚಿತ್ರಾ ವಿರುದ್ಧ 2-0 ಅಂತರದಿಂದ ಸೋಲನುಭವಿಸಿದ್ದಾರೆ. ಆದರೆ, ಬಿಲಿಯರ್ಡ್ಸ್ ವಿಭಾಗದಲ್ಲಿ ಪ್ರಶಸ್ತಿ ಉಳಿಸಿಕೊಳ್ಳಲು ಎದುರು ನೋಡುತ್ತಿದ್ದಾರೆ.
ಆದರೆ, ಬೆಂಗಳೂರಿನವರೇ ಆಗಿರುವ ಈ ಇಬ್ಬರು ಆಟಗಾರ್ತಿಯರು, ಸೋಮವಾರ ವಿಶ್ವ ಸ್ನೂಕರ್ ವಿಭಾಗದಲ್ಲಿ ಲೀಗ್ ಹಂತ ದಾಟುವಲ್ಲಿ ವೈಫಲ್ಯ ಕಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

