ನವಾಬರಿಗೆ ಮೊದಲ ವಿಜಯೋತ್ಸವ

ದುಬೈ: ಅಗ್ರದಾಂಡಿಗರ ಕೆಚ್ಚೆದೆಯ ಬ್ಯಾಟಿಂಗ್ ಸಹಾಯದಿಂದ ಕೊನೆಗೂ ಸನ್ರೈಸರ್ಸ್ ಹೈದರಾಬಾದ್ ತಂಡದ ಆಟಗಾರರು ಏಳನೇ ಆವೃತ್ತಿಯ ಐಪಿಎಲ್ ಟಿ-20 ಕ್ರಿಕೆಟ್ ಪಂದ್ಯಾವಳಿಯಲ್ಲಿ ಮೊದಲ ಗೆಲವಿನ ಸಂಭ್ರಮ ಆಚರಿಸಿದ್ದಾರೆ.
ದುಬೈ ಇಂಟರ್ನ್ಯಾಶನಲ್ ಕ್ರಿಕೆಟ್ ಮೈದಾನದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ 4 ರನ್ಗಳಿಂದ ಡೆಲ್ಲಿ ಡೇರ್ಡೆವಿಲ್ಸ್ ವಿರುದ್ಧ ತಂಡವನ್ನು ಮಣಿಸಿತು. ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಹೈದರಾಬಾದ್ 20 ಓವರುಗಳಲ್ಲಿ ಕೇವಲ 1 ವಿಕೆಟ್ ಕಳೆದುಕೊಂಡು 184 ರನ್ಗಳ ಬೃಹತ್ ಮೊತ್ತ ಕಲೆಹಾಕಿತು. ಇನಿಂಗ್ಸ್ ಆರಂಭಿಸಿದ ನಾಯಕ ಶಿಖರ್ ಧವನ್ ಮತ್ತು ಆರೋನ್ ಫಿಂಚ್ ಮೊದಲ ವಿಕೆಟ್ಗೆ 38 ಎಸೆತಗಳಲ್ಲಿ 56 ರನ್ ಕಲೆಹಾಕಿ ಉತ್ತಮ ಆರಂಭ ಒದಗಿಸಿತು. ಧವನ್ 22 ಎಸೆತಗಳಲ್ಲಿ 5 ಬೌಂಡರಿ, 1 ಸಿಕ್ಸರ್ ನೆರವಿನಿಂದ 33 ರನ್ಗಳಿಸಿದಾಗ ವಿಕೆಟ್ ಕೈಚೆಲ್ಲಿದರು.
ನಂತರ ಜೊತೆಗೂಡಿದ ಫಿಂಚ್ ಮತ್ತು ಡೇವಿಡ್ ವಾರ್ನರ್ ಮುರಿಯದ ಎರಡನೇ ವಿಕೆಟ್ಗೆ ಕೇವಲ 82 ಎಸೆತಗಳಲ್ಲಿ 128 ರನ್ ಸೇರಿಸಿ ತಂಡವನ್ನು ಸುಭದ್ರ ನೆಲೆಗೆ ತಂದು ನಿಲ್ಲಿಸಿದರು. ಫಿಂಚ್ ಕೇವಲ 53 ಎಸೆತಗಳಲ್ಲಿ 8 ಬೌಂಡರಿ ಮತ್ತು 4 ಸಿಕ್ಸರ್ಗಳಿದ್ದ ಅಜೇಯ 88 ರನ್ ಸಿಡಿಸಿದರೆ, ವಾರ್ನರ್ 45 ಎಸೆತಗಳಲ್ಲಿ ತಲಾ 3 ಬೌಂಡರಿ ಮತ್ತು ಸಿಕ್ಸರ್ ಸೇರಿದಂತೆ ಅಜೇಯ 58 ರನ್ ಚಚ್ಚಿದರು. ಡೆಲ್ಲಿ ಬೌಲರ್ಗಳಾರೂ ಹೈದರಾಬಾದ್ ದಾಂಡಿಗರ ಬೆನ್ನೆಲುಬು ಮುರಿಯುವಲ್ಲಿ ಯಶಸ್ಸು ಕಾಣಲಿಲ್ಲ. ದಾಳಿಯನ್ನು ಸುಲಭವಾಗಿಯೇ ಪುಡಿಗಟ್ಟಿದ ಸನ್ರೈಸರ್ಸ್ ಬ್ಯಾಟ್ಸ್ಮನ್ಗಳು ರನ್ ಹೊಳೆ ಹರಿಸಿದರು.
ಹೋರಾಡಿ ಸೋತ ಡೆಲ್ಲಿ: 185 ರನ್ಗಳ ಕಠಿಣ ಗುರಿ ಬೆಂಬತ್ತಿದ ಡೆಲ್ಲಿ ಡೇರ್ಡೆವಿಲ್ಸ್ 4 ವಿಕೆಟ್ಗೆ 180 ರನ್ಗಳಿಸಿ ಗೆಲವಿನ ಹಾದಿಯಲ್ಲಿ ಕೈಚೆಲ್ಲಿ ಕುಳಿತಿತು.
ಆರಂಭಿಕರಾದ ಕಿಂಟಾನ್ ಡಿ ಕಾಕ್ (48ರನ್, 30 ಎಸೆತ, 6 ಬೌಂಡರಿ) ಮತ್ತು ಮುರಳಿ ವಿಜಯ್ (52ರನ್, 40 ಎಸೆತ, 7 ಬೌಂಡರಿ, 1 ಸಿಕ್ಸರ್) ಮೊದಲ ವಿಕೆಟ್ಗೆ 68 ಎಸೆತಗಳಲ್ಲಿ 99 ರನ್ ಸಿಡಿಸಿ ತಂಡಕ್ಕೆ ಭದ್ರ ಅಡಿಪಾಯ ಹಾಕಿಕೊಟ್ಟರು.
ಆದರೆ, ಕೇವಲ 4 ರನ್ಗಳ ಅಂತರದಲ್ಲಿ ಈ ಇಬ್ಬರೂ ಆಟಗಾರರು ನಿರ್ಗಮಿಸಿದ ನಂತರ ಡೇರ್ಡೆವಿಲ್ಸ್ ಆರ್ಭಟ ಒಮ್ಮೆಲೆ ನಿಲ್ಲುವಂತಾಯಿತು. ಮಧ್ಯಮ ಕ್ರಮಾಂಕದಲ್ಲಿ ನಾಯಕ ಕೆವಿನ್ ಪೀಟರ್ಸನ್ (16) ಮತ್ತು ದಿನೇಶ್ ಕಾರ್ತಿಕ್ (15) ವೈಫಲ್ಯ ತಂಡಕ್ಕೆ ದೊಡ್ಡ ಪೆಟ್ಟು ಕೊಟ್ಟಿತು. ಗಾಯದಿಂದ ಚೇತರಿಸಿಕೊಂಡು ಇದೇ ಮೊದಲ ಬಾರಿಗೆ ತಂಡದಲ್ಲಿ ಆಡಿದ ಪೀಟರ್ಸನ್ ಹಾಗೂ ಕಳೆದೆರಡು ಪಂದ್ಯಗಳಲ್ಲಿ ತಂಡ ಮುನ್ನಡೆಸಿದ್ದ ದಿನೇಶ್ರನ್ನು ಬೇಗನೆ ನಿರ್ಗಮಿಸುವುದರೊಂದಿಗೆ ಸನ್ರೈಸರ್ಸ್ ವಿಜಯಲಕ್ಷ್ಮಿ ವಾಲಿದಳು. ನಂತರದಲ್ಲಿ ಜೀನ್-ಪಾಲ್ ಡುಮಿನಿ ಮತ್ತು ಮನೋಜ್ ತಿವಾರಿ ತಂಡದ ಗೆಲವಿಗೆ ಶ್ರಮಿಸಿದರಾದರೂ ಕನಸು ನನಸು ಮಾಡಿಕೊಳ್ಳಲು ಅವರಿಗೆ ಸಾಧ್ಯವಾಗಲಿಲ್ಲ. ಈ ಮಧ್ಯೆ ಹೈದರಾಬಾದ್ ಪರ ಉತ್ತಮ ದಾಳಿ ನಡೆಸಿದ ಸ್ಟೇಯ್ನ್ 2 ವಿಕೆಟ್ ಕಬಳಿಸಿದರು. ಆರೋನ್ ಫಿಂಚ್ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.
ಸ್ಕೋರ್ ವಿವರ
ಸನ್ರೈಸರ್ಸ್ ಹೈದರಾಬಾದ್ 20 ಓವರುಗಳಲ್ಲಿ 1 ವಿಕೆಟ್ಗೆ 184
ಶಿಖರ್ ಧವನ್ ಸಿ ಪೀಟರ್ಸನ್ ಬಿ ನದೀಂ 33, ಆರೋನ್ ಫಿಂಚ್ ಅಜೇಯ 88, ಡೇವಿಡ್ ವಾರ್ನರ್ ಅಜೇಯ 58,
ಇತರೆ: (ಲೆಗ್ಬೈ-3, ವೈ-2) 5.
ವಿಕೆಟ್ ಪತನ: 1-56.
ಬೌಲಿಂಗ್ ವಿವರ:
ಶಾಬಾಜ್ ನದೀಂ 4-0-24-1,
ಮೊಹಮ್ಮದ್ ಶಮಿ 4-0-36-0, ವೇಯ್ನ್ ಪಾರ್ನೆಲ್ 4-0-38-0, ಜೈದೇನ್ ಉನದ್ಕತ್ 4-0-43-0, ಜೀನ್-ಪಾಲ್ ಡುಮಿನಿ 2-0-19-0, ಲಕ್ಷ್ಮೀರತನ್ ಶುಕ್ಲಾ 2-0-21-0.
ಡೆಲ್ಲಿ ಡೇರ್ಡೆವಿಲ್ಸ್ 20 ಓವರುಗಳಲ್ಲಿ 4 ವಿಕೆಟ್ಗೆ 180
ಕಿಂಟಾನ್ ಡಿ ಕಾಕ್ ಸಿ ಫಿಂಚ್ ಬಿ ಶರ್ಮಾ 48, ಮುರಳಿ ವಿಜಯ್ ಸಿ ಸ್ಟೇಯ್ನ್ ಬಿ ಸಾಮಿ 52, ಕೆವಿನ್ ಪೀಟರ್ಸನ್ ಸಿ ಸಾಮಿ ಬಿ ಸ್ಟೇಯ್ನ್ 16, ದಿನೇಶ್ ಕಾರ್ತಿಕ್ ಸಿ ರಾಹುಲ್ ಬಿ ಸ್ಟೇಯ್ನ್ 15, ಜೀನ್-ಪಾಲ್ ಡುಮಿನಿ ಅಜೇಯ 20
ಮನೋಜ್ ತಿವಾರಿ ಅಜೇಯ 23
ಇತರೆ: (ಲೆಗ್ಬೈ-3, ವೈ-2, ನೋಬಾಲ್-1) 6.
ವಿಕೆಟ್ ಪತನ: 1-99, 2-103, 3-135, 4-135.
ಬೌಲಿಂಗ್ ವಿವರ:
ಭುವನೇಶ್ವರಕುಮಾರ್ 4-0-40-0, ಡೇಲ್ ಸ್ಟೇಯ್ನ್ 4-0-33-2, ವೇಣುಗೋಪಾಲ್ರಾವ್ 1-0-9-0, ಕರಣ್ ಶರ್ಮಾ 4-0-23-1, ಡಾರೆನ್ ಸಾಮಿ 3-0-34-1, ಅಮಿತ್ ಮಿಶ್ರಾ 4-0-38-0
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


