ಕ್ರೀಡೆ

ಬ್ರೆಂಡನ್‌ಗೆ ಮುಂಬೈ ಬೆಂಡ್

Published On :

ದುಬೈ: ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಬ್ಯಾಟ್ಸ್‌ಮನ್‌ಗಳನ್ನು ಲಗುಬಗನೆ ಪೆವಿಲಿಯನ್ ಸೇರಿಸಿದ ಮೋಹಿತ್ ಶರ್ಮಾ ಮತ್ತು ಬ್ರೆಂಡನ್ ಮೆಕಲಂ ಆಕರ್ಷಕ ಬ್ಯಾಟಿಂಗ್ ನೆರವಿನೊಂದಿಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡ, ಶುಕ್ರವಾರ ನಡೆದ ಐಪಿಎಲ್‌ನ 2ನೇ ಪಂದ್ಯದಲ್ಲಿ 7 ವಿಕೆಟ್ ಅಂತರದಿಂದ ಜಯ ಸಾಧಿಸಿತು.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಮುಂಬೈ ತಂಡ 7 ವಿಕೆಟ್ ಕಳೆದುಕೊಂಡು 141 ರನ್ ಗಳಿಸಿತ್ತು. ನಂತರ, 142 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಮಹೇಂದ್ರ ಸಿಂಗ್ ಧೋನಿ ನಾಯಕತ್ವದ ಚೆನ್ನೈ ತಂಡ, ಒಂದು ಓವರ್ ಬಾಕಿ ಇರುವಂತೆಯೇ 3 ವಿಕೆಟ್ ಕಳೆದುಕೊಂಡು ಜಯದ ಕೇಕೆ ಹಾಕಿತು.
53 ಎಸೆತಗಳನ್ನು ಎದುರಿಸಿದ ಬ್ರೆಂಡನ್ ಮೆಕಲಂ (ಅಜೇಯ 71) ಅವರ ಅರ್ಧ ಶತಕದಲ್ಲಿ 2 ಸಿಕ್ಸರ್ ಮತ್ತು 8 ಬೌಂಡರಿಗಳು ಸೇರಿದ್ದವು. ಅಂತ್ಯದಲ್ಲಿ ನಾಯಕ ಮಹೇಂದ್ರ ಸಿಂಗ್ ಧೋನಿ (ಅಜೇಯ 14) ರನ್ ಗಳಿಸಿದರು.
ಮಂಬೈ ತಂಡದ ಪರ ಹರ್ಭಜನ್ ಸಿಂಗ್ ಅವರು 2 ವಿಕೆಟ್ ಪಡೆದರೆ, ಪ್ರಗ್ಯಾನ್ ಓಜಾ 1 ವಿಕೆಟ್ ಕಬಳಿಸಿದರು.
ಇದರೊಂದಿಗೆ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡ ಆಡಿದ ಮೂರು ಪಂದ್ಯಗಳಲ್ಲೂ ಸೋಲನುಭವಿಸಿ, ಜಯದ ಹಾದಿಗಾಗಿ ತಡಕಾಡುವಂತಾಗಿದೆ.
ಇನ್ನು ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿ ಆರಂಭಿಕ ಆಘಾತ ಅನುಭವಿಸಿದ ಮುಂಬೈ, ನಾಯಕ ರೋಹಿತ್ ಶರ್ಮಾ ಮತ್ತು ಕೊರೆ ಆ್ಯಂಡರ್ಸನ್ ಅವರ ಜಾಗರೂಕ ಜತೆಯಾಟದ ನೆರವಿನೊಂದಿಗೆ 141 ರನ್ ಕಲೆಹಾಕಿತ್ತು.
ನಾಯಕ ರೋಹಿತ್ ಶರ್ಮಾ (50) ಅರ್ಧ ಶತಕ ಮತ್ತು ಆ್ಯಂಡರ್ಸನ್ (39), ಇಬ್ಬರ ಜತೆಯಾಟದಲ್ಲಿ 3ನೇ ವಿಕೆಟ್‌ಗೆ 84 ರನ್ ಗಳಿಸುತ್ತಿದ್ದಂತೆಯೇ, ಆ್ಯಂಡರ್ಸನ್ ರನೌಟ್ ಮಾಡುವಲ್ಲಿ ಆರ್. ಅಶ್ವಿನ್ ಯಶಸ್ವಿಯಾದರು. ಆದರೆ, 16ನೇ ಓವರ್‌ನ ಮೂರನೇ ಎಸೆತದಲ್ಲಿ ರನ್ ಕದಿಯುತ್ತಿದ್ದ ಆ್ಯಂಡರ್ಸನ್ ಅವರನ್ನು ಅಶ್ವಿನ್ ರನೌಟ್ ಮಾಡಿದರು. ಇದು, ಮುಂಬೈ ತಂಡದ ರನ್‌ಗತಿ ಕಡಿಮೆಯಾಗಲು ಮತ್ತೊಂದು ಪ್ರಮುಖ ಕಾರಣವಾಯಿತು.
  ಚೆನ್ನೈ ಪರ ಅತ್ಯುತ್ತಮ ಬೌಲಿಂಗ್ ಪ್ರದರ್ಶಿಸಿದ ಮೋಹಿತ್ ಶರ್ಮಾ 19ನೇ ಓವರ್‌ನಲ್ಲಿ ಕೇವಲ 2 ರನ್ ನೀಡಿ 3 ವಿಕೆಟ್ ಪಡೆದರು. ಇದು ಮುಂಬೈಗೆ ಇನ್ನಿಲ್ಲದ ಆಘಾತ ಉಂಟುಮಾಡಿತು. ಅಲ್ಲದೆ, 4 ಓವರ್‌ಗಳಲ್ಲಿ ಕೇವಲ 14 ರನ್ ನೀಡಿದ ಮೋಹಿತ್ 4 ವಿಕೆಟ್ ಪಡೆದು ಮಿಂಚಿದರು. ಬೆನ್ ಹಿಲ್ಫೆನಾಸ್ 2 ವಿಕೆಟ್ ಪಡೆದರು.
ಮುಂಬೈ ಇಂಡಿಯನ್ಸ್ 20
ಓವರ್‌ಗಳಲ್ಲಿ 7 ವಿಕೆಟ್‌ಗೆ 141
ಮೈಕಲ್ ಹಸ್ಸಿ ಬಿ ಹಿಲ್ಫೆನಾಸ್ 1 (7)
ಆದಿತ್ಯ ತಾರೆ ಸಿ ರೈನಾ ಬಿ ಶರ್ಮಾ 23 (19)
ಕೊರೆ ಆ್ಯಂಡರ್ಸನ್ ರನೌಟ್ ಅಶ್ವಿನ್ 39 (31)
ರೋಹಿತ್ ಶರ್ಮಾ ಸಿ ಸ್ಮಿತ್ ಬಿ ಹಿಲ್ಫೆನಾಸ್ 50 (41)
ಕೀರನ್ ಪೊಲಾರ್ಡ್ ಬಿ ಶರ್ಮಾ 12 (11)
ಅಂಬಟಿ ರಾಯಿಡು ಸಿ ರೈನಾ ಬಿ ಶರ್ಮಾ 1 (2)
ಸಿ.ಎಂ ಗೌತಮ್ ಅಜೇಯ 7 (4)
ಹರ್ಭಜನ್ ಸಿಂಗ್ ಸಿ ಮೆಕಲಂ 0 (2)
ಜಹೀರ್ ಖಾನ್ ಅಜೇಯ 7 (3)
ಇತರೆ (ಬೈ-1) 1
ವಿಕೆಟ್ ಪತನ: 1-11, 2-25, 3-109, 4-123, 5-125, 6-127, 7-127.
ಬೌಲಿಂಗ್ ವಿವರ:
ಈಶ್ವರ್ ಪಾಂಡೆ 4-0-21-0
ಬೆನ್ ಹಿಲ್ಫೆನಾಸ್ 4-0-39-2
ಆರ್. ಅಶ್ವಿನ್ 4-0-20-0
ಮೋಹಿತ್ ಶರ್ಮಾ 4-0-14-4
ಸುರೇಶ್ ರೈನಾ 3-0-32-0
ರವೀಂದ್ರ ಜಡೇಜಾ 1-0-14-0
ಚೆನ್ನೈ ಸೂಪರ್ ಕಿಂಗ್ಸ್ 19 ಓವರ್‌ಗಳಲ್ಲಿ 3 ವಿಕೆಟ್‌ಗೆ 142
ಡ್ವೈನ್ ಸ್ಮಿತ್ ಸಿ ಆ್ಯಂಡರ್ಸನ್ ಬಿ ಓಜಾ 29 (22)
ಬ್ರೆಂಡನ್ ಮೆಕಲಂ ಅಜೇಯ 71 (53)
ಸುರೇಶ್ ರೈನಾ ಸ್ಟಂಪ್ ಗೌತಮ್ ಬಿ ಹರ್ಭಜನ್ 1 (4)
ಫಫ್ ಡುಪ್ಲೆಸಿಸ್ ಸ್ಟಂಪ್ ಗೌತಮ್ ಬಿ ಹರ್ಭಜನ್ 20 (25)
ಮಹೇಂದ್ರ ಸಿಂಗ್ ಧೋನಿ ಅಜೇಯ 14 (11)
ಇತರೆ: (ಲೆಗ್ ಬೈ-4, ವೈಡ್-2, ನೋಬಾಲ್-1) 7
ವಿಕೆಟ್ ಪತನ: 1-57, 2-61, 3-114.ಬೌಲಿಂಗ್ ವಿವರ:
ಪ್ರಗ್ಯಾನ್ ಓಜಾ 4-1-25-1
ಜಹೀರ್ ಖಾನ್ 4-0-31-0
ಲಸಿತ್ ಮಾಲಿಂಗ 4-0-22-0
ಕೊರೆ ಆ್ಯಂಡರ್ಸನ್  2-0-23-0
ಹರ್ಭಜನ್ ಸಿಂಗ್ 4-0-27-2
ಕೀರನ್ ಪೊಲಾರ್ಡ್ 1-0-10-0

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.