ಕುಂಬ್ಳೆ ಸಲಹೆ ನೆರವು: ಕೊರೆ
ದುಬೈ: ಸ್ಪಿನ್ ಬೌಲಿಂಗ್ ಎದುರಿಸಲು ತಂಡದ ಮುಖ್ಯ ಸಲಹೆಗಾರರಾದ ಅನಿಲ್ ಕುಂಬ್ಳೆ ಅವರು ನೀಡುತ್ತಿರುವ ಸಲಹೆಗಳು ನೆರವಾಗುತ್ತಿವೆ ಎಂದು ಬ್ಯಾಟಿಂಗ್ ವಿಭಾಗದಲ್ಲಿ ಮುಂಬೈ ಇಂಡಿಯನ್ಸ್ ತಂಡಕ್ಕೆ ನಿಧಾನವಾಗಿ ನೆರವಾಗುತ್ತಿರುವ ಕೊರೆ ಆ್ಯಂಡರ್ಸನ್ ಅವರು ತಿಳಿಸಿದ್ದಾರೆ. 'ಕುಂಬ್ಳೆ ನಮಗೆ ಉತ್ತಮ ರೀತಿಯಲ್ಲಿ ನೆರವಾಗುತ್ತಿದ್ದಾರೆ. ಐಪಿಎಲ್ ಪಂದ್ಯಾವಳಿಯಲ್ಲಿ ಗುಣಮಟ್ಟದ ಸ್ಪಿನ್ ದಾಳಿಯನ್ನು ಎದುರಿಸುವುದನ್ನು ಕಲಿತರೆ, ಬ್ಯಾಟಿಂಗ್ನಲ್ಲಿ ನೆರವಾಗಲಿದೆ. ಅಲ್ಲದೆ, ವಿಶ್ವದ ಕೆಲ ಶ್ರೇಷ್ಠ ಸ್ಪಿನ್ನರ್ಗಳನ್ನು ನಾನು ಪಂದ್ಯಾವಳಿಯಲ್ಲಿ ಎದುರಿಸುತ್ತಿದ್ದೇನೆ. ನೆಟ್ನಲ್ಲೂ ಸಹ ಸ್ಪಿನ್ನರ್ಗಳ ವಿರುದ್ಧ ಅಭ್ಯಾಸ ಮಾಡುತ್ತಿದ್ದೇನೆ. ಇದು ಭವಿಷ್ಯದ ಪಂದ್ಯಗಳಲ್ಲಿ ಬ್ಯಾಟಿಂಗ್ನಲ್ಲಿ ಮಿಂಚಲು ನನಗೆ ನೆರವಾಗಲಿದೆ ಎಂಬುದು ನನ್ನ ಅನಿಸಿಕೆ' ಎಂದು ಆ್ಯಂಡರ್ಸನ್ ಅಭಿಪ್ರಾಯಪಟ್ಟಿದ್ದಾರೆ.
ಸೂಕ್ತ ಕಾರ್ಯತಂತ್ರ: ರೀತು ರಾಣಿ
ಟೋಕಿಯೋಕ್ಕೆ ಭಾರತ ಟಿಟಿ ತಂಡ
ನವದೆಹಲಿ: ಹದಿನೈದು ದಿನಗಳ ಕಾಲ ಪಟಿಯಾಲದಲ್ಲಿ ನಡೆದ ಶಿಬಿರದಲ್ಲಿ ಭಾಗವಹಿಸಿದ್ದ ಭಾರತದ 10 ಸದಸ್ಯರ ಟೇಬಲ್ ಟೆನಿಸ್ ತಂಡ, ಏಪ್ರಿಲ್ 28ರಿಂದ ಮೇ 5ರವರೆಗೆ ನಡೆಯಲಿರುವ ವಿಶ್ವ ಟೇಬಲ್ ಟೆನಸ್ ಚಾಂಪಿಯನ್ಶಿಪ್ಗೆ ಟೋಕಿಯೋಕ್ಕೆ ತೆರಳಿತು. ಪುರುಷರ ಮತ್ತು ಮಹಿಳೆಯರ ತಂಡಗಳು ತಲಾ 5 ಸದಸ್ಯರನ್ನು ಹೊಂದಿವೆ.
ಉತ್ತಮ ಪ್ರದರ್ಶನ ನೀಡುತ್ತಿರುವ ಅಜಂತಾ ಶರತ್ ಕಮಲ್, ಅಂಥೋನಿ ಅಮಲ್ರಾಜ್, ಸೌಮ್ಯಜೀತ್ ಘೋಷ್, ಹರ್ಮೀತ್ ದೇಸಾಯಿ ಹಾಗೂ ರಾಷ್ಟ್ರೀಯ ಚಾಂಪಿಯನ್ ಸುನಿಲ್ ಶೆಟ್ಟಿ ಅವರು ಪುರುಷರ ತಂಡಲ್ಲಿದ್ದಾರೆ. ಇನ್ನು ಕೆ. ಶ್ಯಾಮಿನಿ, ಮಧುರಿಕಾ ಪಾಟ್ಕರ್, ಮನಿಕಾ ಬಾತ್ರಾ, ಪೂಜಾ ಸಹಸ್ರಬುದ್ಧೆ ಹಾಗೂ ರಾಷ್ಟ್ರೀಯ ಚಾಂಪಿಯನ್ ಅಂಕಿತಾ ದಾಸ್ ಅವರು ಮಹಿಳೆಯರ ತಂಡದಲ್ಲಿದ್ದಾರೆ.ವಿದೇಶಿ ಕೋಚ್ ಪೀಟ್ ಎಂಜೆಲ್ ಮತ್ತು ರಾಷ್ಟ್ರೀಯ ಕೋಚ್ ಭವಾನಿ ಮುಖರ್ಜಿ ಅವರು ತಂಡಕ್ಕೆ ಸಲಹೆ ನೀಡಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

