ರಾಯಲ್ ಮೇಲೆ ರಾಯಲ್ಸ್ ಸವಾರಿ

ಅಬುಧಾಬಿ: ರಾಜಸ್ಥಾನ ಬೌಲರ್ಗಳ ಪರಿಣಾಮಕಾರಿ ಪ್ರದರ್ಶನದ ಮುಂದೆ ತರಗೆಲೆಗಳಂತೆ ಉದುರಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್ ಟಿ-20 ಪಂದ್ಯದಲ್ಲಿ ಎದುರಾಳಿಗೆ ಸುಲಭ ತುತ್ತಾಗಿದೆ.
ರಾಜಸ್ಥಾನ ರಾಯಲ್ಸ್ 6 ವಿಕೆಟ್ಗಳಿಂದ ಆರ್ಸಿಬಿ ವಿರುದ್ಧ ಜಯಗಳಿಸಿತು.
ಶನಿವಾರ ಇಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟ್ ಮಾಡುವ ಅವಕಾಶ ಪಡೆದ ಆರ್ಸಿಬಿ 15 ಓವರುಗಳನ್ನು ಎದುರಿಸಿ ಕೇವಲ 70 ರನ್ಗಳ ಅತ್ಯಲ್ಪ ಮೊತ್ತಕ್ಕೆ ಪತನಗೊಂಡಿತು. ಐಪಿಎಲ್ ಇತಿಹಾಸದಲ್ಲಿ ಇದು ಮೂರನೇ ಅಲ್ಪ ಮೊತ್ತವಾಗಿದೆ. 2009ರ ಕೇಪ್ಟೌನ್ನಲ್ಲಿನ ಪಂದ್ಯದಲ್ಲಿ ಆರ್ಸಿಬಿ ವಿರುದ್ಧ ರಾಜಸ್ಥಾನ ರಾಯಲ್ಸ್ 58 ರನ್ಗಳಿಸಿದ್ದು ಅಲ್ಪ ಮೊತ್ತದ ಸಾಧನೆಯಾಗಿದೆ. 2008ರ ಮುಂಬೈ ಪಂದ್ಯದಲ್ಲಿ ಮುಂಬಯಿ ಇಂಡಿಯನ್ಸ್ ವಿರುದ್ಧ ಕೆಕೆಆರ್ 67 ರನ್ಗಳಿಸಿದ್ದು ಎರಡನೇ ಅಲ್ಪ ಮೊತ್ತವಾಗಿದೆ.
ಆರ್ಸಿಬಿ ಪರ ನಾಯಕ ವಿರಾಟ್ ಕೊಹ್ಲಿ 25 ಎಸೆತಗಳಲ್ಲಿ 3 ಬೌಂಡರಿಗಳಿದ್ದ 21 ರನ್ ಗಳಿಸಿದ್ದೇ ತಂಡದ ಪರ ಉತ್ತಮ ಸಾಧನೆಯಾಯಿತು. ಆರಂಭಿಕರಾದ ಪಾರ್ಥಿವ್ ಪಟೇಲ್ ಮತ್ತು ಯೋಗೇಶ್ ಟಾಕಾವಾಲೆ ಹಾಗೂ ಮಧ್ಯಮ ಹಂತದಲ್ಲಿ ಯುವರಾಜ್ ಸಿಂಗ್ ಮತ್ತು ಎಬಿ ಡಿವಿಲಿಯರ್ಸ್ ಸಂಪೂರ್ಣ ಕೈಕೊಟ್ಟರು. ಆರ್ಸಿಬಿ ತಂಡ ಕೇವಲ 28 ರನ್ಗಳಿಗೆ 6 ವಿಕೆಟ್ ಕಳೆದುಕೊಂಡು ದಯನೀಯ ಸ್ಥಿತಿ ತಲುಪಿತು. ರಾಜಸ್ಥಾನ ಪರ ಪ್ರವೀಣ್ ತಾಂಬೆ 20 ರನ್ ನೀಡಿ 4 ವಿಕೆಟ್ ಪಡೆದು ಆರ್ಸಿಬಿ ನಾಟಕೀಯ ಪತನಕ್ಕೆ ಕಾರಣರಾದರು.
ಉತ್ತರವಾಗಿ 71 ರನ್ಗಳ ಸಾಧಾರಣ ಮೊತ್ತ ಬೆಂಬತ್ತಿದ ರಾಜಸ್ಥಾನ 13 ಓವರುಗಳಲ್ಲಿಯೇ 4 ವಿಕೆಟ್ ಕಳೆದುಕೊಂಡು ವಿಜಯೋತ್ಸವ ಆಚರಿಸಿತು. ನಾಯಕ ಶೇನ್ ವ್ಯಾಟ್ಸನ್ 24 ಮತ್ತು ಅಜಿಂಕ್ಯಾ ರಹಾನೆ 23 ರನ್ ಗಳಿಸಿ ತಂಡಕ್ಕೆ ಸುಲಭ ಗೆಲವು ಒದಗಿಸಿದರು. ಈ ಪಂದ್ಯದಲ್ಲಿ ಗೇವಲ 28 ಓವರುಗಳ ಆಟ ಸಾಧ್ಯವಾಗಿ 141 ರನ್ಗಳಷ್ಟೇ ಸಂಪಾದನೆಯಾದವು. ತಾಂಬೆ ಪಂದ್ಯಶ್ರೇಷ್ಠ ಗೌರವ ಪಡೆದರು.
ಸ್ಕೋರ್ ವಿವರ
ರಾಯಲ್ ಚಾಲೆಂಜರ್ಸ್ ಬೆಂಗಳೂರು 15 ಓವರುಗಳಲ್ಲಿ 70
ಪಾರ್ಥಿವ್ ಪಟೇಲ್ ರನೌಟ್ 1, ಯೋಗೇಶ್ ಟಾಕಾವಾಲೆ ಸಿ ಸ್ಯಾಮ್ಸನ್ ಬಿ ಬಿನ್ನಿ 0, ವಿರಾಟ್ ಕೊಹ್ಲಿ ಸಿ ಸೌಥಿ ಬಿ ತಾಂಬೆ 21, ಯುವರಾಜ್ ಸಿಂಗ್ ಸಿ ಸ್ಮಿತ್ ಬಿ ರಿಚರ್ಡ್ಸನ್ 3, ಎಬಿ ಡಿವಿಲಿಯರ್ಸ್ ಬಿ ರಿಚರ್ಡ್ಸನ್ 0, ಸಚಿನ್ ರಾಣಾ ಬಿ ವ್ಯಾಟ್ಸನ್ 3, ಅಲ್ಬಿ ಮಾರ್ಕೆಲ್ ಸಿ ಸ್ಮಿತ್ ಬಿ ತಾಂಬೆ 7, ಮಿಚೆಲ್ ಸ್ಟಾರ್ಕ್ ಸಿ ಬಿನ್ನಿ ಬಿ ಭಾಟಿಯಾ 18, ರವಿ ರಾಮ್ಪಾಲ್ ಸಿ ಸೌಥಿ ಬಿ ತಾಂಬೆ 13, ಅಶೋಕ್ ದಿಂಡಾ ಎಲ್ಬಿ ಬಿ ತಾಂಬೆ 0, ಯುಜವೇಂದ್ರ ಚಾಹಲ್ ಅಜೇಯ 0.
ಇತರೆ: (ಬೈ-1, ಲೆಗ್ಬೈ-2, ವೈಡ್-1) 4.
ವಿಕೆಟ್ ಪತನ: 1-1, 2-1, 3-5, 4-5, 5-17, 6-28, 7-46, 8-62, 9-70, 10-70.
ಬೌಲಿಂಗ್ ವಿವರ: ಬಿನ್ನಿ 1-0-1-1, ಸೌಥಿ 3-0-16-0, ರಿಚರ್ಡ್ಸನ್ 4-0-18-2, ವ್ಯಾಟ್ಸನ್ 2-1-5-1, ತಾಂಬೆ 4-0-24-4, ಭಾಟಿಯಾ 1-0-7-1.
ರಾಜಸ್ಥಾನ ರಾಯಲ್ಸ್ 13 ಓವರುಗಳಲ್ಲಿ 4 ಓವರುಗಳಲ್ಲಿ 71
ಅಜಿಂಕ್ಯಾ ರಹಾನೆ ಸಿ ಪಟೇಲ್ ಬಿ ಸ್ಟಾರ್ಕ್ 23, ಕರುಣ್ ನಾಯರ್ ಸಿ ಪಟೇಲ್ ಬಿ ಸ್ಟಾರ್ಕ್ 8, ಸಂಜು ಸ್ಯಾಮ್ಸನ್ ರನೌಟ್ 2, ಅಭಿಷೇಕ್ ನಾಯರ್ ಅಜೇಯ 11, ಶೇನ್ ವ್ಯಾಟ್ಸನ್ ಸಿ ಡಿವಿಲಿಯರ್ಸ್ ಬಿ ಚಾಹಲ್ 24, ಸ್ಟುವರ್ಟ್ ಬಿನ್ನಿ ಅಜೇಯ 0.
ಇತರೆ: (ಲೆಗ್ಬೈ-1, ವೈ-2) 3.
ವಿಕೆಟ್ ಪತನ: 1-31, 2-35, 3-36, 4-68.
ಬೌಲಿಂಗ್ ವಿವರ: ಸ್ಟಾರ್ಕ್ 4-0-29-2, ರಾಮ್ಪಾಲ್ 4-0-16-0, ಚಾಹಲ್ 3-1-17-1, ದಿಂಡಾ 2-0-8-0.
ಅಂಕಪಟ್ಟಿ
ತಂಡ ಪಂದ್ಯ ಜಯ ಸೋಲು ಅಂಕ ಸರಾಸರಿ
ಕಿಂಗ್ಸ್ ಇಲೆವೆನ್ ಪಂಜಾಬ್ 3 3 0 6 +1.679
ಚೆನ್ನೈ ಸೂಪರ್ ಕಿಂಗ್ಸ್ 4 3 1 6 +1.251
ಕೋಲ್ಕತಾ ನೈಟ್ ರೈಡರ್ಸ್ 3 2 1 4 +0.639
ರಾಜಸ್ಥಾನ ರಾಯಲ್ಸ್ 4 2 2 4 +0.497
ರಾಯಲ್ ಚಾಲೆಂಜರ್ಸ್ ಬೆಂಗಳೂರು 4 2 2 4 -0.117
ಸನ್ರೈಸರ್ಸ್ ಹೈದರಾಬಾದ್ 3 1 2 2 -1.238
ಡೆಲ್ಲಿ ಡೇರ್ಡೆವಿಲ್ಸ್ 4 1 3 2 -1.533
ಮುಂಬೈ ಇಂಡಿಯನ್ಸ್ 3 0 3 0 -1.151
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


