ಪಂಜಾಬ್ಗೆ ಸೋತ ಗೌತಮ್ ಪಡೆ
ಅಬುಧಾಬಿ: ಸಾಧಾರಣ ಮೊತ್ತ ಬೆನ್ನಟ್ಟಿದಾಗ್ಯೂ, ಬ್ಯಾಟಿಂಗ್ ವೈಫಲ್ಯ ಕಂಡ ಕೋಲ್ಕತಾ ನೈಟ್ ರೈಡರ್ಸ್ ತಂಡ ಶನಿವಾರ ನಡೆದ ಐಪಿಎಲ್ನ 2ನೇ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ 23 ರನ್ಗಳ ಅಂತರದಿಂದ ಸೋಲನುಭವಿಸಿತು. ಟಾಸ್ ಗೆದ್ದರೂ ಪಂಜಾಬ್ ತಂಡಕ್ಕೆ ಬ್ಯಾಟಿಂಗ್ ಬಿಟ್ಟುಕೊಟ್ಟಿದ್ದ ಕೋಲ್ಕತಾ, ಬಲಿಷ್ಠ ಎದುರಾಳಿಯನ್ನು 132 ರನ್ಗಳ ಸಾಧಾರಣ ಮೊತ್ತಕ್ಕೆ ನಿಯಂತ್ರಿಸಿತ್ತು. ಆದರೆ, ನಂತರ ತನ್ನ ಅಗ್ರ ಕ್ರಮಾಂಕದ ಬ್ಯಾಟ್ಸ್ಮನ್ಗಳು ವೈಫಲ್ಯ ಕಾಣುವ ಮೂಲಕ 18.2 ಓವರ್ಗಳಲ್ಲಿ ತೆನ್ನಲ್ಲ ವಿಕೆಟ್ ಕಳೆದುಕೊಂಡು 109 ರನ್ ಗಳಿಸಿ ಕೈಚೆಲ್ಲಿತು. ಈ ಹಿಂದಿನ ಮೂರು ಪಂದ್ಯಗಳಲ್ಲಿ ಸೊನ್ನೆ ಸುತ್ತಿದ್ದ ಕೋಲ್ಕತಾ ತಂಡದ ನಾಯಕ ಗೌತಮ್ ಗಂಭೀರ್ ಈ ಪಂದ್ಯದಲ್ಲೂ ಕೇವಲ 1 ರನ್ಗೆ ಪೆವಿಲಿಯನ್ ಸೇರಿ ನಿರಾಸೆ ಮೂಡಿಸಿದರು. ಕೆಳ ಕ್ರಮಾಂಕದಲ್ಲಿ ಬಂದ ಸೂರ್ಯ ಕುಮಾರ್ ಯಾದವ್ (34) ತಕ್ಕ ಬ್ಯಾಟಿಂಗ್ ಪ್ರದರ್ಶಿಸಿದ ಕೋಲ್ಕತಾ ಗೆಲವಿಗೆ ಯತ್ನಿಸಿದರು. ಆದರೆ, ಸಂದೀಪ್ ಶರ್ಮಾ ಬೌಲಿಂಗ್ನಲ್ಲಿ ಮಿಚೆಲ್ ಜಾನ್ಸನ್ಗೆ ಕ್ಯಾಚ್ ನೀಡಿದ ಅವರು ಪೆವಿಲಿಯನ್ ಸೇರಿದ್ದು, ತಂಡ ಸೋಲಿನ ದವಡೆಗೆ ಸಿಲುಕುವಂತಾಯಿತು.
ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ ಪಂಜಾಬ್ ಪರ, ಅಭಿಮಾನಿಗಳ ಮನ ಗೆದ್ದಿರುವ ಗ್ಲೆನ್ ಮ್ಯಾಕ್ಸ್ವೆಲ್ ಮತ್ತು ಡೇವಿಡ್ ಮಿಲ್ಲರ್ ಅಲ್ಪ ಮೊತ್ತಕ್ಕೆ ಪೆವಿಲಿಯನ್ ಸೇರುವುದರೊಂದಿಗೆ, ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಕೋಲ್ಕತಾ ನೈಟ್ ರೈಡರ್ಸ್ಗೆ 133 ರನ್ಗಳ ಸಾಧಾರಣ ಗುರಿ ನೀಡಿತ್ತು. ಪಂಜಾಬ್ ಪರ ಆಕರ್ಷಕ ಬೌಲಿಂಗ್ ಪ್ರದರ್ಶಿಸಿದ ಸಂದೀಪ್ ಶರ್ಮಾ 3 ವಿಕೆಟ್ ಕಬಳಿಸಿದರೆ, ಮಿಚೆಲ್ ಜಾನ್ಸನ್ ಮತ್ತು ಅಕ್ಷರ್ ಪಟೇಲ್ ತಲಾ 2 ವಿಕೆಟ್ ಪಡೆದರು. ಬಾಲಾಜಿ ಮತ್ತು ರಿಶಿ ಧವನ್ ತಲಾ 1 ವಿಕೆಟ್ ಪಡೆದರು.
ಆರಂಭಿಕರಾಗಿ ಅಂಗಣಕ್ಕಿಳಿದ ವೀರೇಂದ್ರ ಸೆಹ್ವಾಗ್ (37) ಅವರ ಜಾಗರೂಕ ಬ್ಯಾಟಿಂಗ್ ನೆರವಿನೊಂದಿಗೆ ಪಂಜಾಬ್ ತಂಡ 130 ರನ್ಗಳ ಗಡಿ ದಾಟಿತ್ತು. ನಾಯಕ ಜಾರ್ಜ್ ಬೇಯ್ಲಿ (11) ಸಹ ಉತ್ತಮ ಮೊತ್ತ ಕಲೆ ಹಾಕುವಲ್ಲಿ ವಿಫಲವಾದರು. ಮ್ಯಾಕ್ಸ್ವೆಲ್ (15) ಅವರನ್ನು ಬೌಲ್ಡ್ ಮಾಡುವಲ್ಲಿ ಮಾರ್ನ್ ಮಾರ್ಕೆಲ್ ಯಶಸ್ವಿಯಾದರೆ, ಪಿಯುಶ್ ಚಾವ್ಲಾ ಅವರು ಮಿಲ್ಲರ್ (14) ವಿಕೆಟ್ ಕಬಳಿಸಿದರು. ಇದು ಪಂಜಾಬ್ ತಂಡಕ್ಕೆ ದೊಡ್ಡ ಆಘಾತವನ್ನೇ ನೀಡಿತು. ಕೋಲ್ಕತಾ ಪರ ಸ್ಪಿನ್ನರ್ಗಳಾದ ಸುನಿಲ್ ನಾರಾಯಣ ಮತ್ತು ಪಿಯುಶ್ ಚಾವ್ಲಾ ತಲಾ 3 ವಿಕೆಟ್ ಕಬಳಿಸಿದರೆ, ಮಾರ್ನ್ ಮಾರ್ಕೆಲ್ ಮತ್ತು ಜಾಕ್ ಕಾಲಿಸ್ ತಲಾ 1 ವಿಕೆಟ್ ಪಡೆದರು.
ಕಿಂಗ್ಸ್ ಇಲೆವೆನ್ ಪಂಜಾಬ್ 20 ಓವರ್ಗಳಲ್ಲಿ 9 ವಿಕೆಟ್ಗೆ 132
ಚೇತೇಶ್ವರ ಪೂಜಾರ ರನೌಟ್ (ಪಾಂಡೆ) 8 (8), ವೀರೇಂದ್ರ ಸೆಹ್ವಾಗ್ ಬಿ ಚಾವ್ಲಾ 37 (30), ವೃದ್ಧಿಮಾನ್ ಸಾಹಾ ಎಲ್ಬಿ ಬಿ ಕಾಲಿಸ್ 14 (10), ಗ್ಲೆನ್ ಮ್ಯಾಕ್ಸ್ವೆಲ್ ಬಿ ಮಾರ್ಕೆಲ್ 15 (12), ಡೇವಿಡ್ ಮಿಲ್ಲರ್ ಸಿ ಮಾರ್ಕೆಲ್ ಬಿ ಚಾವ್ಲಾ 14 (10), ಜಾರ್ಜ್ ಬೇಯ್ಲಿ ಸಿ ಮಾರ್ಕೆಲ್ ಬಿ ಚಾವ್ಲಾ 11 (15), ರಿಶಿ ಧವನ್ ಅಜೇಯ 19 (18), ಅಕ್ಷರ ಪಟೇಲ್ ಸ್ಟಂಪ್ ಉತ್ತಪ್ಪ ಬಿ ನಾರಾಯಣ 7 (10), ಮಿಚೆಲ್ ಜಾನ್ಸನ್ ಬೌಲ್ಡ್ ನಾರಾಯಣ 0 (1), ಲಕ್ಷ್ಮಿಪತಿ ಬಾಲಾಜಿ ಎಲ್ಬಿ ನಾರಾಯಣ 0 (2), ಸಂದೀಪ್ ಶರ್ಮಾ ಅಜೇಯ 2 (5)
ಇತರೆ: (ಬೈ-1, ಎಲ್ಬಿ-2, ವೈಡ್-1, ನೋಬಾಲ್-1) 5
ವಿಕೆಟ್ ಪತನ: 1-9, 2-28, 3-58, 4-74, 5-101, 6-103, 7-126, 8-126, 9-126.
ಬೌಲಿಂಗ್ ವಿವರ: ಉಮೇಶ್ ಯಾದವ್ 4-0-28-0, ಮಾರ್ನ್ ಮಾರ್ಕೆಲ್ 4-0-26-1, ಜಾಕ್ ಕಾಲಿಸ್ 4-0-32-1, ಸುನಿಲ್ ನಾರಾಯಣ 4-0-24-3, ಪಿಯುಶ್ ಚಾವ್ಲಾ 4-0-19-3
ಕೋಲ್ಕತಾ ನೈಟ್ ರೈಡರ್ಸ್ 18.2 ಓವರ್ಗಳಲ್ಲಿ 109
ಮನೀಷ್ ಪಾಂಡೆ ಎಲ್ಬಿ ಸಂದೀಪ್ 8 (10), ಜಾಕ್ ಕಾಲಿಸ್ ಸಿ ಮ್ಯಾಕ್ಸ್ವೆಲ್ ಬಿ ಬಾಲಾಜಿ 9 (11), ಗೌತಮ್ ಗಂಭೀರ್ ಸಿ ಪಟೇಲ್ ಬಿ ಸಂದೀಪ್ 1 (5), ಕ್ರಿಸ್ ಲಿಯಾನ್ ಬಿ ಪಟೇಲ್ 13 (18), ರಾಬಿನ್ ಉತ್ತಪ್ಪ ರನೌಟ್ (ಬೇಯ್ಲಿ) 19 (27), ಯೂಸುಫ್ ಪಠಾಣ್ ಎಲ್ಬಿ ರಿಶಿ ಧವನ್ 3 (5), ಸೂರ್ಯಕುಮಾರ್ ಸಿ ಜಾನ್ಸನ್ ಬಿ ಸಂದೀಪ್ 34 (17), ಪಿಯುಶ್ ಚಾವ್ಲಾ ಸ್ಟಂಪ್ ಸಾಹಾ ಬಿ ಪಟೇಲ್ 0 (2), ಸುನಿಲ್ ನಾರಾಯಣ ಬಿ ಜಾನ್ಸನ್ 6 (8), ಉಮೇಶ್ ಯಾದವ್ ಬಿ ಜಾನ್ಸನ್ 2 (4)ಮಾರ್ಕೆಲ್ ಅಜೇಯ 4 (3)
ಇತರೆ: (ಲೆಗ್ ಬೈ-5, ವೈಡ್-5) 10
ವಿಕೆಟ್ ಪತನ: 1-13, 2-19, 3-19, 4-50, 5-59, 6-62, 7-65, 8-85, 9-103, 10-109
ಬೌಲಿಂಗ್ ವಿವರ: ಸಂದೀಪ್ ಶರ್ಮಾ 4-1-21-3, ಮಿಚೆಲ್ ಜಾನ್ಸನ್ 3.2-0-22-2, ಲಕ್ಷ್ಮಿಪತಿ ಬಾಲಾಜಿ 3-0-21-1, ರಿಶಿ ಧವನ್ 4-0-24-1, ಅಕ್ಷರ ಪಟೇಲ್ 4-0-16-2
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

