ಸೋಲಿನ ಬಲೆಯಲ್ಲೇ ಮುಂಬೈ ಬಂಧಿ

ಶಾರ್ಜಾ: ಮತ್ತೆ ಬ್ಯಾಟಿಂಗ್ ವಿಭಾಗ ಸಂಪೂರ್ಣ ಕೈಕೊಡುವುದರೊಂದಿಗೆ ಮುಂಬೈ ಇಂಡಿಯನ್ಸ್ ಏಳನೇ ಆವೃತ್ತಿಯ ಐಪಿಎಲ್ ಟಿ-20 ಟೂರ್ನಿಯಲ್ಲಿ ಚೊಚ್ಚಲ ಗೆಲವು ಕಾಣಲಾಗದೇ ಸೋಲಿನ ಬಲೆಯಲ್ಲಿಯೇ ಉಳಿದುಕೊಂಡಿದೆ.
ಭಾನುವಾರ ನಡೆದ ಪಂದ್ಯದಲ್ಲಿ ಡೆಲ್ಲಿ ಡೇರ್ಡೆವಿಲ್ಸ್ ತಂಡ 6 ವಿಕೆಟ್ಗಳಿಂದ ಮುಂಬೈ ಇಂಡಿಯನ್ಸ್ ತಂಡವನ್ನು ಪರಾಭವಗೊಳಿಸಿತು.
ಇದರೊಂದಿಗೆ ಡೆಲ್ಲಿ ತಂಡ ಎರಡನೇ ಗೆಲವು ದಾಖಲಿಸಿದರೆ, ಮುಂಬೈ ಇಂಡಿಯನ್ಸ್ ಸತತ ನಾಲ್ಕನೇ ಸೋಲನುಭವಿಸಿತು. ಗೆಲ್ಲಲು 126 ರನ್ಗಳ ಸಾಧಾರಣ ಗುರಿ ಪಡೆದಿದ್ದ ಡೆಲ್ಲಿ ಡೇರ್ಡೆವಿಲ್ಸ್ ಇನ್ನೂ 7 ಎಸೆತಗಳು ಉಳಿದಿರುವಂತೆಯೇ 4 ವಿಕೆಟ್ ಕಳೆದುಕೊಂಡು ಗೆಲವಿನ ಕೇಕೆ ಹಾಕಿತು. ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ಆರಂಭಿಕ ಮುರಳಿ ವಿಜಯ್ 34 ಎಸೆತಗಳಲ್ಲಿ 4 ಬೌಂಡರಿ, 1 ಸಿಕ್ಸರ್ ಹೊಂದಿದ್ದ 40 ರನ್ಗಳಿಸಿದ್ದು ಉತ್ತಮ ಕೊಡುಗೆಯಾಯಿತು. ಮುಂಬೈ ಬೌಲಿಂಗ್ನಲ್ಲಿ ಲಸಿತ್ ಮಾಲಿಂಗ ಬಿಟ್ಟರೆ, ಉಳಿದವರು ಪ್ರಭಾವ ಬೀರಲಿಲ್ಲ.
ಕುಸಿದ ಮುಂಬೈ ಇಂಡಿಯನ್ಸ್: ಇದಕ್ಕೆ ಮುನ್ನ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ 20 ಓವರುಗಳಲ್ಲಿ 6 ವಿಕೆಟ್ ನಷ್ಟಕ್ಕೆ 125 ರನ್ಗಳಿಸಲಷ್ಟೇ ಶಕ್ತವಾಯಿತು.
ಕೆಳಕ್ರಮಾಂಕದ ಆಟಗಾರ ಕೀರನ್ ಪೊಲಾರ್ಡ್ 30 ಎಸೆತಗಳಲ್ಲಿ 2 ಬೌಂಡರಿ ಮತ್ತು 2 ಸಿಕ್ಸರ್ ಒಳಗೊಂಡ ಅಜೇಯ 33 ರನ್ಗಳಿಸಿದ್ದೇ ತಂಡದ ಪರ ಉತ್ತಮ ಸಾಧನೆಯಾಯಿತು.
ಅಗ್ರಕ್ರಮಾಂಕದ ಐವರು ದಾಂಡಿಗರು ಕೇವಲ 63 ರನ್ಗಳೊಳಗೆಯೇ ಪೆವಿಲಿಯನ್ ಸೇರಿದರು. ಆರಂಭಿಕರಾದ ರೋಹಿತ್ ಶರ್ಮಾ ಮತ್ತು ಆದಿತ್ಯ ತಾರೆ ವೈಯಕ್ತಿಕ ಎರಡಂಕಿ ಕೂಡ ಗಳಿಸಲಿಲ್ಲ. ಡೆಲ್ಲಿ ಡೇರ್ಡೆವಿಲ್ಸ್ ಪರ ಶಿಸ್ತಿನ ದಾಳಿ ನಡೆಸಿದ ಜೈದೇವ್ ಉನದ್ಕತ್ 2 ಹಾಗೂ ನದೀಂ ಮತ್ತು ಪಾರ್ನೆಲ್ ತಲಾ 1 ವಿಕೆಟ್ ಕಬಳಿಸಿದರು.
ಸ್ಕೋರ್ ವಿವರ
ಮುಂಬೈ ಇಂಡಿಯನ್ಸ್ 20 ಓವರುಗಳಲ್ಲಿ 6 ವಿಕೆಟ್ಗೆ 125
ರೋಹಿತ್ ಶರ್ಮಾ ರನೌಟ್ 4, ಆದಿತ್ಯ ತಾರೆ ಸಿ ಡಿಕಾಕ್ 8, ಕೋರೆ ಆ್ಯಂಡರ್ಸನ್ ಸಿ ಡಿಕಾಕ್ ಬಿ ಪಾರ್ನೆಲ್ 13, ಅಂಬಟಿ ರಾಯುಡು ಸಿ ಶುಕ್ಲಾ ಬಿ ನದೀಂ 14, ಮೈಕ್ ಹಸ್ಸಿ ಬಿ ಉನದ್ಕತ್ 10, ಕೀರನ್ ಪೊಲಾರ್ಡ್ ಅಜೇಯ 33, ಸಿ.ಎಂ. ಗೌತಮ್ ರನೌಟ್ 22, ಹರ್ಭಜನ್ ಸಿಂಗ್ ನಿವೃತ್ತಿ 10, ಜಹೀರ್ ಖಾನ್ ಅಜೇಯ 0.
ಇತರೆ: (ಲೆಗ್ಬೈ-6, ವೈ-4, ನೋಬಾಲ್-1) 11.
ವಿಕೆಟ್ ಪತನ: 1-10, 2-17, 3-39, 4-46, 5-63, 6-103, 6-124 (ಹರ್ಭಜನ್ ನಿವೃತ್ತಿ)
ಬೌಲಿಂಗ್ ವಿವರ: ಎಸ್. ನದೀಂ 4-0-19-1, ಶಮಿ 4-0-36-0, ಡುಮಿನಿ 3-0-13-0, ಪಾರ್ನೆಲ್ 4-0-17-1, ಉನದ್ಕತ್ 4-0-29-2, ಶುಕ್ಲಾ 1-0-5-0.
ಡೆಲ್ಲಿ ಡೇರ್ಡೆವಿಲ್ಸ್ 18.5 ಓವರುಗಳಲ್ಲಿ 4 ವಿಕೆಟ್ಗೆ 126
ಕಿಂಟಾನ್ ಡಿಕಾಕ್ ಸಿ ಹಸ್ಸಿ ಬಿ ಆ್ಯಂಡರ್ಸನ್ 16, ಮುರಳಿ ವಿಜಯ್ ಸಿ ಶರ್ಮಾ 40, ಜೀನ್-ಪಾಲ್ ಡುಮಿನಿ ಸಿ ಸಬ್ (ವಾಂಖಡೆ) ಬಿ ಮಾಲಿಂಗ 19, ಕೆವಿನ್ ಪೀಟರ್ಸನ್ ಅಜೇಯ 26, ದಿನೇಶ್ ಕಾರ್ತಿಕ್ ಸಿ ರಾಯುಡು ಬಿ ಮಾಲಿಂಗ 2, ಕೇದಾರ್ ಜಾಧವ್ಅಜೇಯ 14.
ಇತರೆ: (ಲೆಗ್ಬೈ-2, ವೈ-2, ಪೆನಾಲ್ಟಿ-5) 9..
ವಿಕೆಟ್ ಪತನ: 1-34, 2-79, 3-103, 4-105.
ಬೌಲಿಂಗ್ ವಿವರ: ಮಾಲಿಂಗ 4-0-17-2, ಓಜಾ 4-0-26-0, ಜಹೀರ್ 2.5-0-17-0, ಹರ್ಭಜನ್ 4-1-23-0, ಆ್ಯಂಡರ್ಸನ್ 2-0-16-1, ರೋಹಿತ್ ಶರ್ಮಾ 2-0-20-1.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


