ಸ್ಮಿತ್ ಗತ್ತಿಗೆ ಸನ್ ಮೌನ
ಶಾರ್ಜಾ: ಆರಂಭಿಕರಾದ ಡ್ವೈನ್ ಸ್ಮಿತ್ (66) ಆಕರ್ಷಕ ಅರ್ಧ ಶತಕ ಮತ್ತು ಬ್ರೆಂಡನ್ ಮೆಕಲಂ (44) ಅವರ ಸ್ಫೋಟಕ ಬ್ಯಾಟಿಂಗ್ ನೆರವಿನೊಂದಿಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡ, ಭಾನುವಾರ ನಡೆದ ಐಪಿಎಲ್ನ 2ನೇ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ 5 ವಿಕೆಟ್ಗಳ ಅಂತರದಿಂದ ಜಯ ಸಾಧಿಸಿತು.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಹೈದರಾಬಾದ್ ತಂಡವನ್ನು 145 ರನ್ಗಳಿಗೆ ನಿಯಂತ್ರಿಸಿದ್ದ ಚೆನ್ನೈ, ನಂತರ 19.3 ಓವರ್ಗಳಲ್ಲಿ 5 ವಿಕೆಟ್ ಕಳೆದುಕಂಡು 146 ರನ್ ಗಳಿಸಿ ಜಯದ ಕೇಕೆ ಹಾಕಿತು.
ಸ್ಮಿತ್ ಮತ್ತು ಮೆಕಲಂ ಜತೆಯಾಟದಲ್ಲಿ ಮೊದಲ ವಿಕೆಟ್ಗೆ 85 ರನ್ ಕಲೆ ಹಾಕಿದ್ದರು. ಡ್ವೈನ್ ಸ್ಮಿತ್ ಅರ್ಧ ಶತಕದಲ್ಲಿ 5 ಸಿಕ್ಸರ್ ಮತ್ತು 4 ಬೌಂಡರಿಗಳು ಸೇರಿದ್ದವು. ಇನ್ನು ಮೆಕಲಂ ಮೊತ್ತದಲ್ಲಿ 2 ಸಿಕ್ಸರ್ ಮತ್ತು 3 ಬೌಂಡರಿಗಳು ಸೇರಿದ್ದವು. ಹೈದರಾಬಾದ್ ಪರ ಭುವನೇಶ್ವರ ಮತ್ತು ಇಶಾಂತ್ ತಲಾ 2 ವಿಕೆಟ್ ಪಡೆದರೆ, ಕರಣ್ ಶರ್ಮಾ 1 ವಿಕೆಟ್ ಪಡೆದರು. ಇದಕ್ಕೂ ಮನ್ನ ಬ್ಯಾಟಿಂಗ್ ಮಾಡಿದ ಸನ್ರೈಸರ್ಸ್ ಹೈದರಾಬಾದ್ ತಂಡ, ಸೂಪರ್ ಕಿಂಗ್ಸ್ ಸೂಪರ್ ದಾಳಿಗೆ ನಲುಗಿದ ಸನ್ರೈಸರ್ಸ್ ಹೈದರಾಬಾದ್ ತಂಡ ಚೆನ್ನೈಗೆ 146 ರನ್ಗಳ ಗುರಿ ನೀಡಿತು. ಆರಂಭಿಕ ಆಟಗಾರ ಆರೋನ್ ಫಿಂಚ್ (44) ತಾಳ್ಮೆಯ ಬ್ಯಾಟಿಂಗ್ ಮತ್ತು ಕೆಳ ಕ್ರಮಾಂಕದಲ್ಲಿ ಡಾರೆನ್ ಸಾಮಿ (ಅಜೇಯ 23) ಬ್ಯಾಟ್ನೊಂದಿಗೆ ಗುಡುಗಿದ್ದು ಹೈದರಾಬಾದ್ ತಂಡ, 140 ರನ್ಗಳ ಗಡಿ ದಾಟಲು ನೆರವಾಗಿತ್ತು. ಚೆನ್ನೈ ಪರ ಆಕರ್ಷಕ ಬೌಲಿಂಗ್ ಮಾಡಿದ ಬೆನ್ ಹಿಲ್ಫೆನಾಸ್ ಮತ್ತು ಮೋಹಿತ್ ಶರ್ಮಾ ತಲಾ 2 ವಿಕೆಟ್ ಕಬಳಿಸಿದರೆ, ಡ್ವೈನ್ ಸ್ಮಿತ್ 1 ವಿಕೆಟ್ ಪಡೆದರು.
ಸನ್ರೈಸರ್ಸ್ ಹೈದರಾಬಾದ್ 20 ಓವರ್ಗಳಲ್ಲಿ 5 ವಿಕೆಟ್ಗೆ 145
ಆರೋನ್ ಫಿಂಚ್ ಬಿ ಶರ್ಮಾ 44 (45), ಶಿಖರ್ ಧವನ್ ಸಿ ಮನ್ಹಾಸ್ ಬಿ ಹಿಲ್ಫೆನಾಸ್ 7 (9), ಡೇವಿಡ್ ವಾರ್ನರ್ ಎಲ್ಬಿ ಹಿಲ್ಫೆನಾಸ್ 0 (2), ಕೆ.ಎಲ್ ರಾಹುಲ್ ಸಿ ಈಶ್ವರ ಬಿ ಸ್ಮಿತ್ 25 (27), ವೇಣುಗೋಪಾಲ್ ರಾವ್ ಸಿ ಸ್ಮಿತ್ ಬಿ ಶರ್ಮಾ 13 (15), ಡಾರೆನ್ ಸಾಮಿ ಅಜೇಯ 23 (15), ಕರಣ್ ಶರ್ಮಾ ಅಜೇಯ 17 (7)
ಇತರೆ: (ಬೈಸ್-5, ಎಲ್ಬಿ-8, ವೈಡ್-3) 16
ವಿಕೆಟ್ ಪತನ: 1-15, 2-15, 3-67, 4-98, 5-109
ಬೌಲಿಂಗ್ ವಿವರ: ಹಿಲ್ಫೆನಾಸ್ 4-0-32-2, ಈಶ್ವರ ಪಾಂಡೆ 3-0-22-0 ಮೋಹಿತ್ ಶರ್ಮಾ 4-0-27-2, ಆರ್. ಅಶ್ವಿನ್ 4-0-17-0, ರವೀಂದ್ರ ಜಡೇಜಾ 3-0-23-0, ಡ್ವೈನ್ ಸ್ಮಿತ್ 2-0-11-1
ಚೆನ್ನೈ ಸೂಪರ್ ಕಿಂಗ್ಸ್ 19.3 ಓವರ್ಗಳಲ್ಲಿ 5 ವಿಕೆಟ್ಗೆ 146
ಡ್ವೈನ್ ಸ್ಮಿತ್ ಸಿ ವಾರ್ನರ್ ಬಿ ಕುಮಾರ್ 66 (46), ಬ್ರೆಂಡನ್ ಮಕಲಂ ಬಿ ಕರಣ್ ಶರ್ಮಾ 40 (33), ಸುರೇಶ್ ರೈನಾ ಸಿ ವೇಣುಗೋಪಾಲ ಬಿ ಇಶಾಂತ್ 14 (10), ಮಹೇಂದ್ರ ಸಿಂಗ್ ಧೋನಿ ಅಜೇಯ 14 (10), ಡು ಪ್ಲೆಸಿಸ್ ಸಿ ರಾಹುಲ್ ಬಿ ಭುವನೇಶ್ವರ 0 (1), ರವೀಂದ್ರ ಜಡೇಜಾ ಬಿ ಇಶಾಂತ್ 6 (9), ಮಿತುನ್ ಮನ್ಹಾಸ್ ಅಜೇಯ 3 (4)
ಇತರೆ: (ಲೆಗ್ಬೈಸ್-4) 4
ವಿಕೆಟ್ ಪತನ: 1-85, 2-114, 3-126, 4-127, 5-138
ಬೌಲಿಂಗ್ ವಿವರ: ಡೇಲ್ ಸ್ಟೇಯ್ನ್ 4-0-20-0, ಭುವನೇಶ್ವರ ಕುಮಾರ್ 4-0-23-2, ಕರಣ್ ಶರ್ಮಾ 4-0-35-1, ಅಮಿತ್ ಮಿಶ್ರಾ 3.3-0-27-0, ಇಶಾಂತ್ ಶರ್ಮಾ 4-0-37-2
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

