ಕ್ರೀಡೆ

'ಸೆಹ್ವಾಗ್ ನನಗೆ ನೆರವಾದರು'

Published On :

ದುಬೈ: ಉತ್ತಮ ಕ್ರಿಕೆಟರ್ ಆಗಿ ರೂಪುಗೊಳ್ಳಲು ನನಗೆ ಸೆಹ್ವಾಗ್ ಅವರು ನೆರವು ನೀಡಿದರು ಎಂದು ಕಿಂಗ್ಸ್ ಇಲೆವೆನ್ ಪಂಜಾಬ್ ಬೌಲರ್ ಸಂದೀಪ್ ಶರ್ಮಾ ತಿಳಿಸಿದ್ದಾರೆ.   'ವೀರೆಂದ್ರ ಸೆಹವಾಗ್ ಅವರು ಅತ್ಯುತ್ತಮ ವ್ಯಕ್ತಿ. ನಾವು ನೆಟ್ಸ್‌ನಲ್ಲಿ ಕಲ್ಪನಾ ರೀತಿಯಲ್ಲಿ ಫೀಲ್ಡಿಂಗ್ ಬಗ್ಗೆ ಬ್ಯಾಟ್ಸ್‌ಮನ್‌ಗಳಿಗೆ ತಿಳಿಸಿ ನಂತರ ಅವರಿಗೆ ಬೌಲಿಂಗ್ ಮಾಡುತ್ತೇವೆ. ಈ ರೀತಿ ಮಾಡುವಾಗ ನಾನು ಯಾವುದೇ ರೀತಿಯ ತಪ್ಪು ಮಾಡಿದರೆ ಅಥವಾ ನಾನು ಹೇಳಿದ ಕ್ಷೇತ್ರ ರಕ್ಷಣೆಗೆ ತಕ್ಕಂತೆ ಬೌಲಿಂಗ್ ಮಾಡದಿದ್ದರೆ ಸೆಹವಾಗ್ ನನ್ನ ಬಳಿ ಬಂದು ಸಲಹೆಗಳನ್ನು ನೀಡುತ್ತಾರೆ. ಅಲ್ಲದೆ ನಾನು ಎಲ್ಲಿ ತಪ್ಪು ಮಾಡಿದೆ, ಯಾವರೀತಿ ಬೌಲ್ ಮಾಡಬೇಕು ಎಂಬುದನ್ನು ತಿಳಿಸುತ್ತಾರೆ. ಇದು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಗೆದ್ದ ಪಂದ್ಯದಲ್ಲಿ ನಾನು ಪ್ರಮುಖ ಪಾತ್ರವಹಿಸಲು ನೆರವಾಯಿತು' ಎಂದು ಸಂದೀಪ್ ಶರ್ಮಾ ತಿಳಿಸಿದ್ದಾರೆ. 'ಸೆಹವಾಗ್ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದಲ್ಲಿ ಆಡುತ್ತಿದ್ದು, ಅದೇ ತಂಡದಲ್ಲಿ ಆಡುತ್ತಿರುವುದು ನನ್ನ ಅದೃಷ್ಟ. ಚಿಕ್ಕವನಿದ್ದಾಗಿನಿಂದ ವೀರೂ ನನ್ನ ನೆಚ್ಚಿನ ಬ್ಯಾಟ್ಸ್‌ಮನ್. ಅವರೊಂದಿಗೆ ಕಲಿಯುತ್ತಿರುವುದು ಸಂತಸ ತಂದಿದೆ' ಎಂದಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.