ಕ್ರೀಡೆ

ವಾರ್ನರ್ ವರಸೆಗೆ ಮುಂಬೈ ಮಂಕು

Published On :

ದುಬೈ: ಆರಂಭಿಕ ಕುಸಿತದ ಹೊರತಾಗಿಯೂ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳಾದ ಡೇವಿಡ್ ವಾರ್ನರ್ (65) ಹಾಗೂ ಕೆ.ಎಲ್ ರಾಹುಲ್ (46) ಅವರ ಜವಾಬ್ದಾರಿಯುತ ಬ್ಯಾಟಿಂಗ್ ನೆರವಿನಿಂದ ಸನ್‌ರೈಸರ್ಸ್ ಹೈದರಾಬಾದ್ ತಂಡವು ಐಪಿಎಲ್ 7ನೇ ಆವೃತ್ತಿಯ ಬುಧವಾರದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡಕ್ಕೆ 173 ರನ್‌ಗಳ ಸ್ಪರ್ಧಾತ್ಮಕ ಗುರಿ ನೀಡಿದೆ.
ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ತಂಡ ಮೊದಲು ಫೀಲ್ಡಿಂಗ್ ಮಾಡಲು ನಿರ್ಧರಿಸಿತು. ಮೊದಲು ಬ್ಯಾಟಿಂಗ್ ಮಾಡಲು ಕಣಕ್ಕಿಳಿದ ಸನ್‌ರೈಸರ್ಸ್ ಹೈದರಾಬಾದ್ ತಂಡ ಡೇವಿಡ್ ವಾರ್ನರ್ ಅವರ ಸ್ಫೋಟಕ ಬ್ಯಾಟಿಂಗ್ ಹಾಗೂ ಕೆ.ಎಲ್ ರಾಹುಲ್ ಅವರ ಜವಾಬ್ದಾರಿಯುತ ಬ್ಯಾಟಿಂಗ್ ನೆರವಿನಿಂದ 20 ಓವರ್‌ಗಳಲ್ಲಿ 5 ವಿಕೆಟ್‌ಗೆ 172 ರನ್ ಕಲೆಹಾಕುವಲ್ಲಿ ಯಶಸ್ವಿಯಾಯಿತು.
ಆರಂಭಿಕ ಆಘಾತ: ಸನ್‌ರೈಸರ್ಸ್ ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದ ಸ್ಫೋಟಕ ಬ್ಯಾಟ್ಸ್‌ಮನ್‌ಗಳಾದ ಶಿಖರ್ ಧವನ್ ಹಾಗೂ ಎರಾನ್ ಫಿಂಚ್ ತಂಡಕ್ಕೆ ಉತ್ತಮ ಆರಂಭ ನೀಡುವಲ್ಲಿ ವಿಫಲರಾದರೂ.
ಈ ಇಬ್ಬರು ಆಟಗಾರರು ಆರಂಭದಿಂದಲೇ ರನ್ ವೇಗವನ್ನು ಹೆಚ್ಚಿಸಲು ಮುಂದಾದರಾದರೂ, ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ. ಶಿಖರ್ ದವನ್ 6 ಹಾಗೂ ಫಿಂಚ್ 16 ರನ್ ಗಳಿಸಿ ಜಹೀರ್ ಖಾನ್‌ಗೆ ವಿಕೆಟ್ ಒಪ್ಪಿಸುವ ಮೂಲಕ ಪೆವಿಲಿಯನ್ ಸೇರಿಕೊಂಡರು. ಈ ಮೂಲಕ ಸನ್‌ರೈಸರ್ಸ್ ತಂಡ 38 ರನ್‌ಗಳಿಗೆ 2 ವಿಕೆಟ್ ಕಳೆದುಕೊಂಡಿತು.
ಅಬ್ಬರಿಸಿದ ವಾರ್ನರ್: ನಂತರ ಕಣದಲ್ಲಿ ಜತೆಯಾದ ಕರ್ನಾಟಕದ ಕೆ.ಎಲ್ ರಾಹುಲ್ ಹಾಗೂ ಡೇವಿಡ್ ವಾರ್ನರ್ ತಂಡದ ಇನಿಂಗ್ಸ್ ಕಟ್ಟುವಲ್ಲಿ ಯಶಸ್ವಿಯಾದರು. ಈ ಜೋಡಿ ಜವಾಬ್ದಾರಿಯುತ ಆಟಕ್ಕೆ ಮುಂದಾಗಿ, ಮೂರನೇ ವಿಕೆಟ್‌ಗೆ 111 ರನ್‌ಗಳ ಜತೆಯಾಟ ನೀಡುವ ಮೂಲಕ ತಂಡ 150 ರನ್‌ಗಳ ಗಡಿ ದಾಟುವಂತೆ ನೋಡಿಕೊಂಡರು.
ಆರಂಭದಲ್ಲಿ ತಾಳ್ಮೆಯ ಆಟಕ್ಕೆ ಮುಂದಾದರೂ, ಇನಿಂಗ್ಸ್‌ನ ಅಂತಿಮ ಓವರ್‌ಗಳಲ್ಲಿ ಅಬ್ಬರಿದ ಬ್ಯಾಟಿಂಗ್ ನಡೆಸಿದ ಡೇವಿಡ್ ವಾರ್ನರ್ 51 ಎಸೆತಗಳಲ್ಲಿ 1 ಬೌಂಡರಿ, 4 ಸಿಕ್ಸರ್ ನೆರವಿನಿಂದ 65 ರನ್ ದಾಖಲಿಸಿದರು. ವಾರ್ನರ್‌ಗೆ ಅತ್ಯುತ್ತಮ ಸಾಥ್ ನೀಡಿದ ಕೆ.ಎಲ್ ರಾಹುಲ್ 40 ಎಸೆತಗಳನ್ನು ಎದುರಿಸಿ 3 ಬೌಂಡರಿ ನೆರವಿನಿಂದ 46 ರನ್ ದಾಖಲಿಸಿ ಮಹತ್ವದ ಪಾತ್ರ ವಹಿಸಿದರು. ನಂತರ ಬಂದ ಸಾಮಿ 10 ಹಾಗೂ ನಮನ್ ಓಜಾ 10 ಹಾಗೂ ಇರ್ಫಾನ್ 1 ರನ್ ಗಳಿಸಿ ಅಜೇಯರಾಗುಳಿದರು.
ಇನ್ನು ಮುಂಬೈ ಇಂಡಿಯನ್ಸ್ ತಂಡದ ಪರ ಜಹೀರ್ ಖಾನ್ ಹಾಗೂ ಆ್ಯಂಡರ್ಸನ್ ತಲಾ 2, ಮತ್ತು ಮಾಲಿಂಗ 1 ವಿಕೆಟ್ ಪಡೆದರು.
ಸ್ಕೋರ್ ವಿವರ
ಸನ್‌ರೈಸರ್ಸ್ 20 ಓವರ್‌ಗಳಲ್ಲಿ 5 ವಿಕೆಟ್‌ಗೆ 172
ಎರಾನ್ ಫಿಂಚ್ ಸಿ ಡಂಕ್ ಬಿ ಖಾನ್ 16, ಶಿಖರ್ ಧವನ್ ಸಿ ಹರ್ಭಜನ್ ಬಿ ಜಹೀರ್ 6, ಕೆ.ಎಲ್ ರಾಹುಲ್ ಸಿ ಗೌತಮ್ ಬಿ ಮಾಲಿಂಗ 46, ಡೇವಿಡ್ ವಾರ್ನರ್ ಸಿ ಗೌತಮ್ ಬಿ ಆ್ಯಂಡರ್ಸನ್ 65, ಡಾರೆನ್ ಸಾಮಿ ಸಿ ಪೊಲಾರ್ಡ್ ಬಿ ಆ್ಯಂಡರ್ಸನ್ 10, ನಮನ್ ಓಜಾ ಅಜೇಯ 10, ಇರ್ಫಾನ್ ಪಠಾಣ್ ಅಜೇಯ 1
ಇತರೆ: (ಲೆಗ್ ಬೈ 6, ವೈಡ್ 12, ನೊಬಾಲ್ 1) ಒಟ್ಟು
ವಿಕೆಟ್ ಪತನ:  1-21, 2-38, 3-149, 4-161, 5-162
ಬೌಲಿಂಗ್ ವಿವರ: ಜಹೀರ್ ಖಾನ್ 4-0-26-2, ಲಸಿತ್ ಮಾಲಿಂಗ 4-0-28-1, ಪ್ರಗ್ಯಾನ್ ಓಜಾ 3-0-43-0, ಹರ್ಭಜನ್ ಸಿಂಗ್ 4-0-16-0, ಕಿರನ್ ಪೊಲಾರ್ಡ್ 4-0-36-0, ಕೊರೆ ಆ್ಯಂಡರ್ಸನ್ 1-0-18-2

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.