ಕ್ರೀಡೆ

ಕೋಚ್‌ಗಳಿಗೆ ಹೊಸ ಮಾದರಿ ಪರಿಚಯ

Published On :

ನವದೆಹಲಿ: ಕ್ರೀಡೆಯ ತರಬೇತಿಯನ್ನು ಹೆಚ್ಚು ಜವಾಬ್ದಾರಿ ಹಾಗೂ ಪರಿಣಾಮಕಾರಿಯುತವಾಗಿ ರೂಪಿಸಲು ಭಾರತೀಯ ಕ್ರೀಡಾ ಪ್ರಾಧಿಕಾರ, ತರಬೇತುದಾರ ವಾರ್ಷಿಕ ಪ್ರದರ್ಶನ ಮೌಲ್ಯಮಾಪನ ವರದಿಯಲ್ಲಿ ಹೊಸ ಮಾದರಿಯನ್ನು ಅಳವಡಿಸಲು ನಿರ್ಧರಿಸಿದೆ.
ಈ ಹೊಸ ಮಾದರಿಯಲ್ಲಿ ಎಲ್ಲಾ ತರಬೇತುದಾರರನ್ನು ಭಾರತೀಯ ಕ್ರೀಡಾ ಪ್ರಧಿಕಾರದ ವಿವಿಧ ಮಾನದಂಡಗಳ ಆಧಾರದ ಮೇಲೆ ಮೌಲ್ಯಮಾಪನ ಮಾಡಲಾಗುವುದು.
ತರಬೇತುದಾರರ ಮೌಲ್ಯಮಾಪನವನ್ನು ಅವರು ಪ್ರತಿಯೊಬ್ಬ ಕ್ರೀಡಾಪಟುವಿನ ಫಿಟ್ನೆಸ್ ಬಗ್ಗೆ ಕೈಗೊಳ್ಳುವ ನಿರ್ಧಾರ, ಕ್ರೀಡಾ ವೈಜ್ಞಾನಿಕ ಅಂಶಗಳ ಬಳಕೆ, ಹಾಗೂ ತರಬೇತುದಾರರು ಆಟಗಾರರ ತಯಾರಿಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಬಗೆಗಿನ ರೀತಿಯನ್ನು ಗಮನಿಸಲಾಗುವುದು ಎಂದು ಭಾರತೀಯ ಕ್ರೀಡಾ ಪ್ರಾಧಿಕಾರ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ತರಬೇತುದಾರರು ಕ್ರೀಡಾಪಟುಗಳ ಅಲ್ಪಾವಧಿ ಹಾಗೂ ದೀರ್ಘಾವಧಿಯ ಬೆಳವಣಿಗೆಯ ಯೋಜನೆ, ಅಲ್ಲದೆ ನೈತಿಕ ಹಾಗೂ ಸ್ಫೂರ್ತಿದಾಯಕ ತಂತ್ರಾಂಶಗಳನ್ನು ಪರಿಗಣಿಸಲಾಗುವುದು.
ಕೋಚ್‌ಗಳ ಸಂಶೋಧನೆ, ಅಭಿವೃದ್ಧಿಯ ಕಾರ್ಯಕ್ರಮ, ಕ್ರೀಡಾ ಪತ್ರಿಕೆಗಳಿಗೆ ಲೇಖನ ಈ ರೀತಿಯಾದ ಹೊಸ ಮಾನದಂಡಗಳನ್ನು ಸಹ ಇನ್ನು ಮುಂದೆ ಅಳವಡಿಸಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.