ಕ್ರೀಡೆ

ಮತದಾನ ಮಾಡಿದ ಚೇತೇಶ್ವರ ಪೂಜಾರ

Published On :

ರಾಜ್‌ಕೋಟ್: ದುಬೈನಲ್ಲಿನ ಐಪಿಎಲ್ ಪಂದ್ಯಗಳನ್ನು ಮುಗಿಸಿಕೊಂಡು ಭಾರತಕ್ಕೆ ಮರಳಿದ ಚೇತೇಶ್ವರ ಪೂಜಾರ ಬುಧವಾರ ಲೋಕಸಭೆ ಚುನಾವಣೆಯಲ್ಲಿ ತಮ್ಮ ಮತದಾನದ ಹಕ್ಕನ್ನು ಚಲಾಯಿಸಿದ್ದಾರೆ.
ಏ.28ರಂದು ಆರ್‌ಸಿಬಿ ವಿರುದ್ಧದ ಪಂದ್ಯದ ನಂತರ ಭಾರತಕ್ಕೆ ವಾಪಸ್ಸಾದ ಚೇತೇಶ್ವರ ಪೂಜಾರ, ಚುನಾವಣೆಯಲ್ಲಿ ತಮ್ಮ ಮತಚಲಾಯಿಸಲು ಮುಂದಾಗಿದ್ದಾರೆ.
ಇನ್ನು ರಾಜ್‌ಕೋಟ್ ಜಿಲ್ಲಾ ಹಾಗೂ ಗುಜರಾತ್‌ನ ಚುನಾವಣಾ ಆಯೋಗವು 26 ವರ್ಷದ ಚೇತೇಶ್ವರ ಪೂಜಾರ ಅವರನ್ನು ಲೋಕಸಭೆ ಚುನಾವಣೆಯ ರಾಯಭಾರಿ ಹಾಗೂ ಐಕಾನ್ ಆಗಿ ಆಯ್ಕೆ ಮಾಡಿತ್ತು.
ಪೂಜಾರ ಅವರು ದುಬೈನಿಂದ ವಾಪಸ್ಸಾಗಿ ತಮ್ಮ ಮತವನ್ನು ಚಲಾಯಿಸಿರುವುದು ಇತರರು ಮತದಾನ ಮಾಡಲು ಪ್ರೇರಣೆ ನೀಡುತ್ತದೆ ಎಂದು ರಾಜ್‌ಕೋಟ್ ಜಿಲ್ಲಾಧಿಕಾರಿ ರಾಜೇಂದ್ರ ಕುಮಾರ್ ತಿಳಿಸಿದ್ದಾರೆ.
ನಮ್ಮ ಹೊಸ ಸರ್ಕಾರ ರಚನೆಗಾಗಿ ಮತದಾನ ಮಾಡುವುದು ಪ್ರತಿಯೊಬ್ಬರ ಕರ್ತವ್ಯ. ಹಾಗಾಗಿ ಯುವಕರು ಹಾಗೂ ಹಿರಿಯರು ತಮ್ಮ ಅಮೂಲ್ಯವಾದ ಸಮಯವನ್ನು ಮೀಸಲಿಟ್ಟು ಮತದಾನ ಮಾಡುವಂತೆ ವಿನಂತಿ ಮಾಡುತ್ತೇನೆ ಎಂದು ಚೇತೇಶ್ವರ ಪೂಜಾರ ಅವರು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.