ಕ್ರೀಡೆ

ಜಡೇಜಾ ಪ್ರಮುಖ ಬೌಲರ್ ಆಗಿದ್ದುದುಬಾರಿಯಾಯಿತು: ಪ್ರಸನ್ನ

ಜಡೇಜಾ ಪ್ರಮುಖ ಬೌಲರ್ ಆಗಿದ್ದುದುಬಾರಿಯಾಯಿತು: ಪ್ರಸನ್ನ
Published On :

ನವದೆಹಲಿ: ರವೀಂದ್ರ ಜಡೇಜಾ ಅವರನ್ನು ಪ್ರಮುಖ ಬೌಲರ್‌ನ್ನಾಗಿ ಪರಿಗಣಿಸಿದ್ದು ಭಾರತ ತಂಡಕ್ಕೆ ದುಬಾರಿಯಾಗಿ ಪರಿಣಮಿಸಿದೆ. ಅಲ್ಲದೆ, ರವಿಚಂದ್ರನ್ ಅಶ್ವಿನ್ ಅವರನ್ನು ಏಕೆ ಕಡೆಗಣಿಸಲಾಗಿದೆ ಎಂದು ಭಾರತದ ಸ್ಪಿನ್ ದಂತಕತೆ ಎರಪಳ್ಳಿ ಪ್ರಸನ್ನ್ನ ಪ್ರಶ್ನಿಸಿದ್ದಾರೆ.
'ರವೀಂದ್ರ ಜಡೇಜಾ ಅವರು ಎಲ್ಲ ಟೆಸ್ಟ್ ಪಂದ್ಯಗಳಲ್ಲಿ ಆಡಲಿ. ಆದರೆ, ಅವರನ್ನು ಅರೆಕಾಲಿಕ ಬೌಲರ್ ಆಗಿ ಮಾತ್ರ ಬಳಸಿಕೊಳ್ಳಬೇಕು. ಬೌಲರ್ ಆಗಿ ಜಡೇಜಾ ಅವರಿಗೆ ಇರುವ ಸಾಮರ್ಥ್ಯ, ಅವರನ್ನು ಪ್ರಮುಖ ಬೌಲರ್ ಆಗಿಸಲಾರದು. ಹೀಗಾಗಿ ಅರೆಕಾಲಿಕ ಬೌಲರ್‌ಗಳನ್ನು ಪ್ರಮುಖ ಬೌಲರ್‌ಗಳನ್ನಾಗಿ ಪರಿಗಣಿಸಿದರೆ, ತಂಡದ ಸೋಲಿಗೆ ಪ್ರಮುಖ ಕಾರಣವಾಗಿ ಪರಿಗಣಿಸಲಿದೆ' ಎಂದು ಪ್ರಸನ್ನ್ನ ಅವರು ಅಭಿಪ್ರಾಯಪಟ್ಟಿದ್ದಾರೆ.
'ಜಡೇಜಾ ಅವರು ಮೂರು ಟೆಸ್ಟ್ ಪಂದ್ಯಗಳಲ್ಲಿ ಪ್ರದರ್ಶನ ನೀಡಿರಬಹುದು. ನನ್ನ ಅನುಭವದ ಪ್ರಕಾರ ಓಲ್ಡ್ ಟ್ರಾಫರ್ಡ್‌ನಲ್ಲಿ ಒಂದು ವೇಳೆ ಅಶ್ವಿನ್ ಆಡಿದರೆ, ಓವಲ್‌ನಲ್ಲಿ ಅವರು ತಂಡಕ್ಕೆ ಆಶ್ರಯವಾಗಲಿದ್ದಾರೆ. ಜಡೇಜಾ ಅವರನ್ನು ಅರೆಕಾಲಿಕ ಬೌಲರ್ ಅನ್ನಾಗಿ ಬಳಿಸಿಕೊಳ್ಳಬಹುದು' ಎಂದು 49 ಟೆಸ್ಟ್ ಪಂದ್ಯಗಳಲ್ಲಿ 189 ವಿಕೆಟ್ ಪಡೆದುಕೊಂಡಿರುವ ಪ್ರಸನ್ನ್ನತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.