ಕ್ರೀಡೆ

ಲಾರ್ಡ್ಸ್ ಜಯದ ನಂತರ ಭಾರತ ಏನು ಮಾಡಿತು ಗೊತ್ತಿಲ್ಲ: ಗಾವಸ್ಕರ್

ಲಾರ್ಡ್ಸ್ ಜಯದ ನಂತರ ಭಾರತ ಏನು ಮಾಡಿತು ಗೊತ್ತಿಲ್ಲ: ಗಾವಸ್ಕರ್
Published On :

ನವದೆಹಲಿ: ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ ಹೀನಾಯವಾಗಿ ಸೋಲನುಭವಿಸಿ ತೀವ್ರ ಟೀಕೆಗೆ ಗುರಿಯಾಗಿರುವ ಟೀಂ ಇಂಡಿಯಾವನ್ನು ಮಾಜಿ ನಾಯಕ ಸುನಿಲ್ ಗಾವಸ್ಕರ್ ತರಾಟೆಗೆ ತೆಗೆದುಕೊಂಡಿದ್ದಾರೆ.
ಒಂದು ಬಾರಿ ಜಯ ಸಾಧಿಸಿದ ನಂತರ ನಿರಾತಂಕವಾಗಿ ಉಳಿದುಬಿಡುವ ತಂಡದ ಹಳೆಯ ಚಾಳಿ ಮರುಕಳಿಸುತ್ತಿದೆ. ಇದು ತಂಡದ ಪ್ರದರ್ಶನದ ಮೇಲೆ ಪರಿಣಾಮ ಬೀರುತ್ತಿದೆ ಎಂದಿದ್ದಾರೆ.
ಕ್ರಿಕೆಟ್ ಕಾಶಿ ಲಾರ್ಡ್ಸ್‌ನಲ್ಲಿ ಜಯ ಸಾಧಿಸಿದ ನಂತರ ಆತ್ಮವಿಶ್ವಾಸ ವೃದ್ಧಿಸಿಕೊಂಡಿದ್ದ ಭಾರತ ತಂಡ, ಸೌಥಾಮ್ಟನ್‌ನಲ್ಲಿ ನಡೆದ ಮೂರನೇ ಪಂದ್ಯದಲ್ಲಿ 266 ರನ್‌ಗಳ ಅಂತರದಿಂದ ಹೀನಾ ಸೋಲನುಭವಿಸಿದೆ.
'ಆಂಗ್ಲರ ಫೇವರಿಟ್ ಅಂಗಣವಾದ ಲಾರ್ಡ್ಸ್‌ನಲ್ಲೇ ಗೆದ್ದ ನಂತರ, ಅವರ ವಿಶ್ವಾಸವನ್ನು ಕುಗ್ಗುವಂತೆ ಮಾಡಿದ್ದೆವು. ಆದರೆ, ಮತ್ತೆ ಆಂಗ್ಲರು ಮೇಲುಗೈ ಸಾಧಿಸಲು ನಾವೇ ನೆರವಾಗುತ್ತಿದ್ದೇವೆ. ಆದರೆ, ದ್ವಿತೀಯ ಪಂದ್ಯದಲ್ಲಿ ಗೆದ್ದ ನಂತರ 5 ದಿನಗಳ ಬಿಡುವಿನಲ್ಲಿ ನಮ್ಮ ಆಟಗಾರರು ಏನು ಮಾಡಿದರು ಎಂದು ನನಗೆ ಗೊತ್ತಿಲ್ಲ. ಸ್ಲಿಪ್‌ನಲ್ಲಿ ಕ್ಯಾಚ್ ಕೈಚೆಲ್ಲುವ ಮೂಲಕ ಇಂಗ್ಲೆಂಡ್ ತಂಡದ ನಾಯಕ ಅಲೆಸ್ಟರ್ ಕುಕ್‌ಗೆ ಜೀವದಾನ ಮಾಡಿದ್ದು ಸೇರಿದಂತೆ, ಹಲವಾರು ತಪ್ಪುಗಳನ್ನು ಮಾಡುತ್ತಿರುವುದು ತಂಡದ ಸೋಲಿಗೆ ಕಾರಣವಾಗಿದೆ. ಈಗ ಭಾರತ ತಂಡ ಸಂಪೂರ್ಣ ವೃತ್ತಿಪರ ಆಟಗಾರರಿಂದ ಕೂಡಿದ್ದು, ಸಮರ್ಥವಾಗಿದೆ. ಹೀಗಾಗಿ ಇಂಗ್ಲೆಂಡ್‌ಗೆ ತಕ್ಕ ಉತ್ತರ ನೀಡಬೇಕು' ಎಂದಿದ್ದಾರೆ ಗಾವಸ್ಕರ್.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.